ನವದೆಹಲಿ: ಅಪೌಷ್ಟಿಕತೆ ನಿವಾರಣೆಗೆ ಭಾರತೀಯ ಕೃಷಿ ಸಂಶೋಧನಾ ಮಂಡಳಿ(ಐಸಿಎಆರ್) ಅಭಿವೃದ್ಧಿಪಡಿಸಿದ ವಿಶೇಷ ಗುಣಲಕ್ಷಣಗಳನ್ನು ಹೊಂದಿದ 35 ಬೆಳೆ ತಳಿಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬಿಡುಗಡೆ ಮಾಡಿದ್ದಾರೆ.
ಐಸಿಎಆರ್ ಸಂಸ್ಥೆಗಳು, ರಾಜ್ಯ ಮತ್ತು ಕೇಂದ್ರ ಕೃಷಿ ವಿಶ್ವವಿದ್ಯಾನಿಲಯಗಳು, ಕೃಷಿ ವಿಜ್ಞಾನ ಕೇಂದ್ರಗಳು ಆಯೋಜಿಸಿದ್ದ ವೀಡಿಯೋ ಕಾನ್ಫರೆನ್ಸ್ ನಲ್ಲಿ ಪ್ರಧಾನಿ ಮೋದಿ ಹೊಸ ಬೆಳೆ ತಳಿಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.
Advertisement
Advertisement
ಪ್ರಧಾನಿ ಕಚೇರಿಯ ಪ್ರಕಾರ, 2021ರ ತಾಪಮಾನ ಬದಲಾವಣೆ ಸವಾಲು ಎದುರಿಸಲು ಸ್ಥಿತಿಸ್ಥಾಪಕತ್ವ ಮತ್ತು ಹೆಚ್ಚಿನ ಪೌಷ್ಟಿಕಾಂಶದಂತಹ ವಿಶೇಷ ಲಕ್ಷಣಗಳನ್ನು ಹೊಂದಿರುವ 35 ಬೆಳೆ ಪ್ರಭೇದಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇದನ್ನೂ ಓದಿ: ಸ್ಟೈಲಿಷ್ ಕೇಶ ವಿನ್ಯಾಸ, ಕ್ಲೀನ್ ಶೇವ್, ಟ್ರಿಮ್‍ಗೂ ತಾಲಿಬಾನ್ ನಿಷೇಧ
Advertisement
When Science, Government and Society will work together, we will get even better results. This nexus of farmers and scientists will further strengthen the nation to face new challenges: PM Narendra Modi dedicates to the nation 35 crop varieties with special traits pic.twitter.com/JBBPVvue3c
— ANI (@ANI) September 28, 2021
Advertisement
ಬರಗಾಲದ ಸಹಿಷ್ಣು ಮಾದರಿಯ ಕಡಲೆ, ಬೀಜ ನಿರೋಧಕ ಗುಣವುಳ್ಳ ತೊಗರಿ, ತ್ವರಿತವಾಗಿ ಫಸಲು ನೀಡುವ ಸೋಯಾಬೀನ್, ರೋಗನಿರೋಧಕ ಸಾಮಥ್ರ್ಯದ ಭತ್ತ, ಜೈವಿಕ ಬಲವರ್ಧಿತವಾದ ಗೋಧಿ, ಜೋಳ, ತೊಗರಿ, ರಾಗಿ, ನವಣೆ ಅಕ್ಕಿ, ಹುರುಳಿ ಬೆಳೆಗಳ ತಳಿಗಳು ಇವುಗಳಲ್ಲಿ ಸೇರಿವೆ. ವಿಶೇಷ ಗುಣಗಳಿರುವ ಈ ತಳಿಗಳು ಪೌಷ್ಟಿಕಾಂಶ ನಿರೋಧಕ ಶಕ್ತಿಯನ್ನೂ ಹೊಂದಿವೆ. ಕೆಲವು ತಳಿಗಳಲ್ಲಿರುವ ಅಂಶಗಳು ಮನುಷ್ಯ, ಪ್ರಾಣಿಗಳ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದ್ದವು. ಇದು ಆ ಕೊರತೆ ನೀಗಿಸಲಿದೆ. ಇದನ್ನೂ ಓದಿ: ಹೋಟೆಲ್‍ನಲ್ಲಿ ಲಂಚ ಸ್ವೀಕರಿಸುತ್ತಿದ್ದ ಇನ್ಸ್ಪೆಕ್ಟರ್ ಎಸಿಬಿ ಬಲೆಗೆ!
35 crop varieties with special traits are being dedicated to the nation. Watch. https://t.co/uVEZATpBZ2
— Narendra Modi (@narendramodi) September 28, 2021
ವಿಶೇಷ ಗುಣಲಕ್ಷಣಗಳುಳ್ಳ 35 ತಳಿಯ ಬೆಳೆಗಳನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದರು. ಬಳಿಕ ಮಾತನಾಡಿ, ಹವಾಮಾನ ವೈಪರೀತ್ಯದಿಂದ ಬೆಳೆಗಳ ರಕ್ಷಣೆ ಮಾಡಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ರೈತರಲ್ಲಿ ಅರಿವು ಮೂಡಿಸುವಂತೆ ಶಿಕ್ಷಣ ತಜ್ಞರು, ಕೃಷಿ ವಿಜ್ಞಾನಿಗಳು ಮತ್ತು ಎನ್‍ಜಿಒಗಳಿಗೆ ಕರೆ ನೀಡಿದರು. ಇದನ್ನೂ ಓದಿ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಪ್ರಿಯಾಂಕಾ ಗಾಂಧಿ ನೇತೃತ್ವ
It is a matter of immense pride for every BJP Karyakarta that our Party has got it’s first ever Rajya Sabha MP from Puducherry in Shri S. Selvaganabathy Ji. The trust placed in us by the people of Puducherry is humbling. We will keep working for Puducherry’s progress.
— Narendra Modi (@narendramodi) September 28, 2021
ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು, ದೇಶದಲ್ಲಿ ಶೇ 86ರಷ್ಟು ರೈತರು ಸಣ್ಣ ಮತ್ತು ಅತಿಸಣ್ಣ ಹಿಡುವಳಿದಾರರೇ ಆಗಿದ್ದಾರೆ. ಈ ಸಮೂಹದ ಕೃಷಿಕರ ಆದಾಯವನ್ನು ಹೆಚ್ಚಿಸುವುದು ಪ್ರಧಾನಮಂತ್ರಿಗಳ ಆದ್ಯತೆಯಾಗಿದೆ ಎಂದು ಹೇಳಿದರು.