ನಾನು ಶಿವನ ಕೊರಳಿನಲ್ಲಿರುವ ಹಾವಿನಂತೆ – ಖರ್ಗೆ ಹೇಳಿಕೆಗೆ ಮೋದಿ ಕೌಂಟರ್‌

Public TV
1 Min Read
MODI 2

ಕೋಲಾರ: ಇತ್ತೀಚೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಮೋದಿ ವಿರುದ್ಧ ನೀಡಿದ್ದ ʻವಿಷ ಸರ್ಪʼ ಹೇಳಿಕೆಗೆ ಪ್ರಧಾನಿ ಮೋದಿ (Narendra Modi) ಕೋಲಾರದಲ್ಲಿ ಕೌಂಟರ್‌ ಕೊಟ್ಟಿದ್ದಾರೆ.

ವಿಧಾನಸಭೆ ಚುನಾವಣೆ ಹಿನ್ನೆಲೆ ಕೋಲಾರದಲ್ಲಿ ನಡೆದ ಬೃಹತ್‌ ಸಮಾವೇಶದಲ್ಲಿ ಮಾತನಾಡಿದ ಅವರು, ಖರ್ಗೆ ಹೇಳಿಕೆಯನ್ನು ನಾನು ಸ್ವೀಕಾರ ಮಾಡ್ತೀನಿ. ಭಗವಾನ್‌ ಶಿವನ ಕೊರಳಿನಲ್ಲಿ ಶೋಭಾಯಮಾನವಾಗಿ ಸುತ್ತಿಕೊಂಡಿರುವುದು ಅದೇ ಸರ್ಪ. ಈ ದೇಶದ ಜನತೆಯೇ ನನಗೆ ಈಶ್ವರ ಸ್ವರೂಪಿ, ನಾನು ಹಾವಾಗಿ ಅವರ ಕೊರಳಲ್ಲಿರಲು ನನಗೇನು ನೋವಿಲ್ಲ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಸ್ಪಷ್ಟವಾಗಿ ಕನ್ನಡ ಮಾತಾಡಿ ಬೇಷ್ ಎನಿಸಿಕೊಂಡ ಯೋಗಿ ಆದಿತ್ಯನಾಥ್

Narendra Modi 1 1

ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯನ್ನು ನಾನು ಸ್ವೀಕಾರ ಮಾಡ್ತೇನೆ. ಆದ್ರೆ ಕರ್ನಾಟಕದ ಜನ ಕ್ಷಮಿಸಲ್ಲ. ಜನರಲ್ಲಿ ಅವರ ಬಗ್ಗೆ ಆಕ್ರೋಶ ಇದೆ. ಮೇ 10 ರಂದು ಬಿಜೆಪಿಗೆ ಮತದಾನ ಮಾಡುವ ಮೂಲಕ ಕಾಂಗ್ರೆಸ್‌ ವಿರುದ್ಧ ತಮ್ಮ ಆಕ್ರೋಶ ಹೊರಹಾಕಲಿದ್ದಾರೆ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಮೋದಿ ವಿಷದ ಹಾವು ಇದ್ದಂತೆ: ಖರ್ಗೆ

MALLIKARJUN KHARGE 1

ಮಲ್ಲಿಕಾರ್ಜುನ ಖರ್ಗೆ ಹೇಳಿದ್ದೇನು?
ಗದಗ ಜಿಲ್ಲೆ ನರೇಗಲ್ ಪಟ್ಟಣದಲ್ಲಿ ಕಾಂಗ್ರೆಸ್ ಬಹಿರಂಗ ಸಭೆಯಲ್ಲಿ ಮಾತನಾಡಿದ್ದ ಖರ್ಗೆ, ಮೋದಿ ವಿಷದ ಹಾವು ಇದ್ದಂತೆ, ನೋಡೊಕೆ ಚೆನ್ನಾಗಿರುತ್ತೆ, ಮುಟ್ಟಿದ್ರೆ ವಿಷ ಅಂತ ಗೊತ್ತಾಗುತ್ತೆ. ಮೋದಿ ಚೆನ್ನಾಗಿದ್ದಾರೆ ಅಂತ ಅವರನ್ನು ನೆಕ್ಕಿ ನೋಡಿದ್ರೆ ಸತ್ತೇ ಹೋಗುತ್ತೀರಿ. ನಾವು ಕನ್ನಡಿಗರು, ನಾವು ಯಾರಿಗೂ ಬಗ್ಗುವುದಿಲ್ಲ. ಗುಜರಾತ್, ಅಹ್ಮದಾಬಾದ್‍ನಿಂದ ಯಾರೇ ಬರಲಿ ಹೆದರಬೇಡಿ. ನಾವು ಕನ್ನಡಿಗರು, ಕರ್ನಾಟಕದವರು ನಮ್ಮ ಸ್ವಾಭಿಮಾನ ಉಳಿಸಿಕೊಳ್ಳಬೇಕು.

ನಮ್ಮ ಸರ್ಕಾರ ಎಂದು ಬರುತ್ತೊ ಅಂದಿನಿಂದ 200 ಯುನಿಟ್ ಕರೆಂಟ್ ಉಚಿತವಾಗಿ ನೀಡುತ್ತೇವೆ. ಮನೆಯ ಯಜಮಾನಿಗೆ 2 ಸಾವಿರ ಸಹಾಯಧನ ಕೊಡುತ್ತೇವೆ. ಕೆಲಸ ಇಲ್ಲದ ಪದವಿದರರಿಗೆ 3 ಸಾವಿರ ಯುವನಿಧಿ ಪ್ರೋತ್ಸಾಹ ನೀಡುತ್ತೇವೆ. ಕಾಂಗ್ರೆಸ್ ಅಧಿಕಾರಕ್ಕೆ ತನ್ನಿ ಎಂದು ಮನವಿ ಮಾಡಿದ್ದರು.

Share This Article