ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಯೂಟ್ಯೂಬ್‌ನಲ್ಲಿ (YouTube) ವಿಶ್ವದಾಖಲೆ (World Record) ಬರೆದಿದ್ದಾರೆ. ಯೂಟ್ಯೂಬ್‌ನಲ್ಲಿ 2 ಕೋಟಿ ಚಂದದಾರರನ್ನು ಹೊಂದಿದ ವಿಶ್ವದ ಏಕೈಕ ನಾಯಕ ಎಂಬ ಕೀರ್ತಿಗೆ ಪಾತ್ರವಾಗಿದ್ದಾರೆ.
ಪ್ರಧಾನಿ ಮೋದಿ ಖಾತೆಯಿಂದ ಇಲ್ಲಿಯವರೆಗೆ ಒಟ್ಟು 23 ಸಾವಿರ ವಿಡಿಯೋಗಳು ಅಪ್ಲೋಡ್ ಆಗಿವೆ. 2023ರ ಡಿಸೆಂಬರ್ ತಿಂಗಳಿನಲ್ಲೇ 2.24 ಶತಕೋಟಿ ವೀಕ್ಷಣೆ ಕಂಡಿವೆ.
2005ರಲ್ಲಿ ಯೂಟ್ಯೂಬ್ ಕಂಪನಿ ಆರಂಭವಾದರೆ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ 2007 ರಲ್ಲಿ ಖಾತೆ ತೆರೆದಿದ್ದರು. ಇದನ್ನೂ ಓದಿ: Ayodhya Ram Mandir – ಕಾರ್ಯಕ್ರಮಕ್ಕೆ ಆಹ್ವಾನಿತ ಗಣ್ಯರ ಕಂಪ್ಲೀಟ್ ಲಿಸ್ಟ್
ಯೂಟ್ಯೂಬ್‌ನಲ್ಲಿ ಎರಡನೇ ಅತಿ ಹೆಚ್ಚು ಚಂದದಾರರು ಬ್ರೆಜಿಲ್ ಮಾಜಿ ಅಧ್ಯಕ್ಷ ಜೈರ್ ಬೋಲ್ಸೋನಾ ಅವರಿಗಿದ್ದು 64 ಲಕ್ಷ ಮಂದಿ ಸಬ್‌ಸ್ಕ್ರೈಬ್ ಮಾಡಿದ್ದಾರೆ. ಮೂರನೇ ಸ್ಥಾನದಲ್ಲಿರುವ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರನ್ನು 11 ಲಕ್ಷ ಮಂದಿ ಸಬ್‌ಸ್ಕ್ರೈಬ್ ಮಾಡಿದ್ದರೆ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರ ಖಾತೆಯನ್ನು 7.94 ಲಕ್ಷ ಮಂದಿ ಸಬ್‌ಸ್ಕ್ರೈಬ್ ಮಾಡಿದ್ದಾರೆ.
ಟರ್ಕಿಯ ಎರ್ಡೊಗನ್ 4.19 ಲಕ್ಷ, ಫ್ರಾನ್ಸಿನ ಮ್ಯಾಕ್ರಾನ್ 3.16 ಲಕ್ಷ, ಅರ್ಜೆಂಟೀನಾದ ಆಲ್ಬರ್ಟೊ ಫೆರ್ನಾಂಡಿಸ್81,200 ಸಬ್‌ಸ್ಕ್ರೈಬರ್‌ಗಳನ್ನು ಹೊಂದಿದ್ದರು.
ಟ್ವಿಟ್ಟರ್‌ನಲ್ಲಿ ಮೋದಿ ಅವರನ್ನು 9.4 ಕೋಟಿ ಮಂದಿ ಫಾಲೋ ಮಾಡಿದ್ದರೆ, ಫೇಸ್‌ಬುಕ್‌ನಲ್ಲಿ ಮೋದಿ ಅವರ ಪೇಜನ್ನು 4.8 ಕೋಟಿ ಮಂದಿ ಲೈಕ್ ಮಾಡಿದ್ದಾರೆ. ಇನ್‌ಸ್ಟಾದಲ್ಲಿ ಮೋದಿ ಅವರನ್ನು 8.2 ಕೋಟಿ ಮಂದಿ ಫಾಲೋ ಮಾಡುತ್ತಿದ್ದಾರೆ. ಮೋದಿ ಅವರನ್ನು ವಾಟ್ಸಪ್‌ನಲ್ಲಿ 12 ಕೋಟಿ ಮಂದಿ ಫಾಲೋ ಮಾಡುತ್ತಿದ್ದಾರೆ.