– ಸೇವಾ ಭಾವನೆಯಿದ್ದರೆ ಮಾತ್ರ ಜನರು ನಮ್ಮನ್ನು ಸ್ವೀಕರಿಸುತ್ತಾರೆ
– ನನ್ನ ರೆಕಾರ್ಡ್ ಅನ್ನು ನಾನೇ ಮುರಿದಿದ್ದೇನೆ
– ಅಹಂಕಾರದಿಂದ ದೂರವಿದ್ರೆ ಅಧಿಕಾರ
ನವದೆಹಲಿ: ಪಾರ್ಟಿ ಹೆಸರಿನಲ್ಲಿ ಗೆಲುವು ಸಾಧಿಸುತ್ತೇನೆ ಎಂಬ ಭ್ರಮೆಯಲ್ಲಿ ಇದ್ದಾರೆ. ಇದು ಬಹಳ ದಿನಗಳವರೆಗೆ ನಡೆಯಲ್ಲ. ಜಾತಿ, ಧರ್ಮದ ಹೆಸರಿನಲ್ಲಿ ಗೆಲ್ಲುತ್ತೇನೆ ಎನ್ನುವು ಬೇಡ. ನೀವು ಹೀಗೆ ನಿರ್ಲಕ್ಷ್ಯವಹಿಸಿದರೆ ಜನರು ಗೆಲುವು ಸಾಧಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.
ದೆಹಲಿ ಸಂಸತ್ ಹಾಲ್‍ನಲ್ಲಿ ನಡೆದ ಎನ್‍ಡಿಎ ಸೂತನ ಸಂಸದರ ಸಭೆಯಲ್ಲಿ ಮಾತನಾಡಿದ ಅವರು, ಅಹಂಕಾರದಿಂದ ದೂರ ಇರುತ್ತೇವೆಯೋ ಅಲ್ಲಿಯವರೆಗೂ ಗೆಲುವು ಸಾಧಿಸುತ್ತೇವೆ. ಎಲ್ಲರೂ ಒಮ್ಮತದಿಂದ ನನ್ನನ್ನು ಪ್ರಧಾನಿಯಾಗಿ ಮತ್ತು ಎನ್‍ಡಿಎ ಸಂಸದೀಯ ನಾಯಕನಾಗಿ ಆಯ್ಕೆ ಮಾಡಿದ್ದೀರಿ. ನಿಮಗೆ ನನ್ನ ಧನ್ಯವಾದಗಳು ಎಂದು ಸಭೆಯಲ್ಲಿ ಸೇರಿದ್ದ ನಾಯಕರಿಗೆ ತಿಳಿಸಿದರು.
Advertisement
Advertisement
ಎನ್‍ಡಿಎಗೆ ಪ್ರಚಂಡ ಬಹುಮತ ಸಿಕ್ಕಿದೆ. ಮತದಾರರ ಆಶೀರ್ವಾದದಿಂದ ನಾವು ಮುನ್ನಡೆಯಬೇಕು. ದಿನದಿಂದ ದಿನಕ್ಕೆ ಭಾರತದ ರಾಜಕೀಯ ಪ್ರಭುದ್ಧವಾಗುತ್ತಿದೆ. ಸೇವಾ ಭಾವನೆಯಿದ್ದರೆ ಮಾತ್ರ ನಮ್ಮನ್ನು ಜನರು ಸ್ವೀಕರಿಸುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Advertisement
ಸೆಂಟ್ರಲ್ ಹಾಲ್‍ನಲ್ಲಿ ಸೇರಿರುವುದು ಸಾಮಾನ್ಯ ವಿಷಯಕ್ಕಲ್ಲ. ನಾವು ನವ ಭಾರತ ನಿರ್ಮಾಣಕ್ಕೆ ಮುಂದಾಗಬೇಕಿದೆ. ಈ ಯಾತ್ರೆ ಇಲ್ಲಿಂದಲೇ ಆರಂಭವಾಗಬೇಕಿದೆ. ದೇಶ ರಾಜಕೀಯದಲ್ಲಿ ಬದಲಾವಣೆ ಬರುತ್ತವೆ. ಇಂತಹ ಬದಲಾವಣೆಗಳಿಗೆ ನಾವು ಸಾಕ್ಷಿಯಾಗಿದ್ದೇವೆ ಎಂದು ತಿಳಿಸಿದರು.
Advertisement
ಭಾರತದ ಚುನಾವಣೆಯ ಮೇಲೆ ವಿಶ್ವದ ಅನೇಕ ದೇಶಗಳು ಗಮನ ಕೇಂದ್ರಿಕರಿಸಿದ್ದವು. ಚುನಾವಣೆ ಯಶಸ್ವಿಯಾಗಿ ನಡೆಸಲು ಚುನಾವಣಾ ಅಧಿಕಾರಿಗಳು, ಸೈನಿಕರು, ಸಿಬ್ಬಂದಿ ಶ್ರಮಿಸಿದರು. ಇದಕ್ಕೆ ಸಾಕ್ಷಿಯಾದ ಎಲ್ಲರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಈ ಹಿಂದೆ ನಡೆದ ಅನೇಕ ಚುನಾವಣೆಯಲ್ಲಿ ಸೋಲು, ಗೆಲುವು ನೋಡಿದ್ದೇನೆ. ಆದರೆ ಈ ಬಾರಿ ನಡೆದ ಚುನಾವಣೆ ಬಳಿಕ ನಾನು ತೀರ್ಥಯಾತ್ರೆ ಮಾಡಿದೆ. ಸ್ವಾತಂತ್ರ್ಯ ಭಾರತ ನಂತರ ಭಾರೀ ಪ್ರಮಾಣದಲ್ಲಿ ಮತದಾನವಾಗಿದೆ. ಮಹಿಳೆಯರು, ತಾಯಂದಿರೂ ತಮ್ಮ ಜವಾಬ್ದಾರಿ ಮೆರೆದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
2014ರ ಫಲಿತಾಂಶಕ್ಕಿಂತ ಈ ಬಾರಿ ಮತ್ತಷ್ಟು ಹೆಚ್ಚಿನ ಸಾಧನೆ ಮಾಡಿದ್ದೇವೆ. ಈ ಮೂಲಕ ನನ್ನ ರೆಕಾರ್ಡ್ ಅನ್ನು ನಾನೇ ಮುರಿದಿದ್ದೇನೆ. ಹಿಂದಿನಿಗಿಂತ 2014ರಲ್ಲಿ ಮಹಿಳಾ ಸಂಸದರ ಸಂಖ್ಯೆ ಹೆಚ್ಚಾಗಿತ್ತು. ಈ ಬಾರಿ ಅವರ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಇಂತಹ ಅನೇಕ ಮಹತ್ವದ ಬದಲಾವಣೆಗೆ ನಾವು ಸಾಕ್ಷಿಯಾಗಿದ್ದೇವೆ ಎಂದು ತಿಳಿಸಿದರು.
ಮಹಾಮೈತ್ರಿ ವಿರುದ್ಧ ಗುಡುಗಿದ ಪ್ರಧಾನಿ ಮೋದಿ, ನಮ್ಮ ವಿರುದ್ಧ ಮೈತ್ರಿಯ ನಿರ್ಮಾಣವಾದರೂ ಸಮರ್ಥವಾಗಿ ಎದುರಿಸಿದ್ದೇವೆ. ಹೀಗೆ ಎನ್‍ಡಿಎನ ಎಲ್ಲಾ ಪಕ್ಷಗಳು ಒಟ್ಟಾಗಿ ಸಾಗಬೇಕು. ದೇಶದ ವಿಕಾಸಕ್ಕೆ ಶ್ರಮಿಸಬೇಕು ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣಕ್ಕೂ ಮುನ್ನ ಎನ್‍ಡಿಎ ಮೈತ್ರಿ ಪಕ್ಷಗಳ ನಾಯಕರು ನೂತನ ಸಂಸದರು ಮೋದಿ ಪರ ಜೈಕಾರ ಕೂಗಿದರು.