ಬೆಂಗಳೂರು: ಯಾವುದೇ ದೇಶದ ಪ್ರಗತಿಯಲ್ಲಿ ಬ್ಯಾಂಕುಗಳ ಪಾತ್ರ ದೊಡ್ಡದ್ದು. ಈ ಬ್ಯಾಂಕುಗಳ ಉಳಿವಿಗೆ ಇವುಗಳ ಠೇವಣಿದಾರರ ಹಿತಾಸಕ್ತಿ ಕಾಪಾಡುವುದು ಅತ್ಯಗತ್ಯ, ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅಭಿಪ್ರಾಯಪಟ್ಟಿದ್ದಾರೆ.
Advertisement
ದೇಶದ ವಿವಿಧ ಬ್ಯಾಂಕುಗಳಲ್ಲಿ ಠೇವಣಿ ಇರಿಸಿ ಬ್ಯಾಂಕುಗಳ ನಷ್ಟದಿಂದಾಗಿ ಕಷ್ಟ ಅನುಭವಿಸಿದ್ದಂತಹ ಸಹಸ್ರಾರು ಠೇವಣಿದಾರರಿಗೆ ಅವರ ಹಣವನ್ನು ವಾಪಸ್ ನೀಡುವ ಕಾರ್ಯಕ್ರಮಕ್ಕೆ ಇಂದು ದೆಹಲಿಯ ವಿಜ್ಞಾನ ಭವನದ ಪ್ಲೀನರಿ ಸಭಾಂಗಣದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ಜನರು ತಮ್ಮ ಹಣವನ್ನು ಬ್ಯಾಂಕುಗಳಲ್ಲಿ ಠೇವಣಿ ಇಡಲು ಸಂಪೂರ್ಣ ವಿಶ್ವಾಸದೊಂದಿಗೆ ಮುಂದೆ ಬರಬೇಕು. ಹಾಗಾಗಬೇಕಾದರೆ, ಸಣ್ಣ ಮತ್ತು ಮಧ್ಯಮ ವರ್ಗಕ್ಕೆ ಸೇರಿದ ಠೇವಣಿದಾರರ ಹಣಕ್ಕೆ ಬ್ಯಾಂಕ್ ಗಳು ಸುರಕ್ಷತೆ ಒದಗಿಸಬೇಕು ಎಂದು ಪ್ರಧಾನಿ ತಿಳಿಸಿದರು. ಇದನ್ನೂ ಓದಿ: ಹಿಂದುತ್ವವಾದಿಗಳು ಅಧಿಕಾರಕ್ಕಾಗಿ ಯಾರನ್ನು ಬೇಕಾದ್ರೂ ಕೊಲ್ತಾರೆ: ರಾಹುಲ್ ಗಾಂಧಿ
Advertisement
Speaking at the “Depositors First: Guaranteed Time-bound Deposit Insurance Payment up to Rs. 5 Lakh” programme. https://t.co/rIGzweiEiV
— Narendra Modi (@narendramodi) December 12, 2021
Advertisement
ಬ್ಯಾಂಕುಗಳ ದಿವಾಳಿ ಸಂದರ್ಭದಲ್ಲಿ ಠೇವಣಿದಾರರ ಹಣ ಮರುಪಾವತಿ ಪ್ರಕ್ರಿಯೆ ಬಹಳಷ್ಟು ವಿಳಂಬವಾಗುತ್ತಿದ್ದನ್ನು ಗಮನಿಸಿ, ಠೇವಣಿ ವಿಮೆ ಮತ್ತು ಸಾಲ ಖಾತರಿ ನಿಗಮ (ಡೆಪಾಸಿಟ್ ಇನ್ಶೂರೆನ್ಸ್ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್) ಆಕ್ಟ್ ಗೆ ತಿದ್ದುಪಡಿಯನ್ನು 2021ರ ಸೆಪ್ಟೆಂಬರ್ 1 ರಿಂದ ಜಾರಿಗೆ ಬರುವಂತೆ ಕ್ರಮವಹಿಸಲಾಗಿದೆ. ಈ ತಿದ್ದುಪಡಿಗಳಂತೆ, ಈ ಹಿಂದೆ ಫೆಬ್ರವರಿ 2020ರಲ್ಲಿ ಠೇವಣಿದಾರರು ಎದುರಿಸುತ್ತಿದ್ದ ತೊಂದರೆಗಳಿಗೆ ಠೇವಣಿದಾರರ ಠೇವಣಿ ವಿಮಾ ರಕ್ಷಣೆಯನ್ನು ಮುಂಚೆಯಿದ್ದ 1,00,000 ರೂಪಾಯಿಗಳಿಂದ ಇದೀಗ 5,00,000 ರೂಪಾಯಿಗಳಿಗೆ ಹೆಚ್ಚಿಸಿ ಬ್ಯಾಂಕಿಂಗ್ ಕ್ಷೇತ್ರದ ಇತಿಹಾಸದಲ್ಲೇ ಮಹತ್ತರ ಬದಲಾವಣೆ ತರಲಾಗಿದೆ. ಈಗ ಸರಳ ಸುಲಭವಾಗಿ ಮತ್ತು ಸಮಯಕ್ಕೆ ಸರಿಯಾಗಿ ಠೇವಣಿದಾರರು ತಮ್ಮ ಠೇವಣಿಗಳಿಗೆ, ಠೇವಣಿ ವಿಮಾ ರಕ್ಷಣೆ (ರೂಪಾಯಿ ಐದು ಲಕ್ಷಗಳ ವರೆಗೆ) ಮದ್ಯಂತರ ಪಾವತಿ ಮೂಲಕ DICGC ಯಿಂದ ನಿಗದಿಪಡಿಸಿದ ಕೇವಲ 90 ದಿನಗಳ ಸಮಯದ ಅಂತರದಲ್ಲಿ ಪಡೆಯಬಹುದಾಗಿದೆ ಎಂದು ಮಾಹಿತಿ ಹಂಚಿಕೊಂಡರು. ಇದನ್ನೂ ಓದಿ: ಯೋಗಿ ಸರ್ಕಾರದಿಂದ ಇಲ್ಲಿಯವರೆಗೆ 15246 ಕಿ.ಮೀ.ಗೂ ಹೆಚ್ಚು ಗ್ರಾಮೀಣ ರಸ್ತೆಗಳನ್ನು ನಿರ್ಮಾಣ
Advertisement
33 ಸಾವಿರ ಠೇವಣಿದಾರರಿಗೆ ಒಟ್ಟು 753.61 ಕೋಟಿ ರೂ. ವಾಪಸ್:
ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಸಭಾಂಗಣದಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕೇಂದ್ರ ಕಲ್ಲಿದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಪ್ರಹ್ಲಾದ್ ಜೋಶಿ ಅವರು ಮಾತನಾಡಿ, ನಗರದ ಶ್ರೀಗುರು ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್‍ನ ಸುಮಾರು 33 ಸಾವಿರ ಠೇವಣಿದಾರರ ಕ್ಲೇಮುಗಳಿಗೆ ಠೇವಣಿ ವಿಮಾ ರಕ್ಷಣೆ ಕಾಯ್ದೆಯಡಿ ಒಟ್ಟು ರೂ 753.61 ಕೋಟಿಗಳ ಹಣವನ್ನು ಖಾತೆಗೆ ವಾಪಸ್ ಜಮೆ ಮಾಡಲಾಗಿದೆ ಎಂದು ತಿಳಿಸಿದರು.
ದೇಶದಲ್ಲಿ ವಿವಿಧ ಬ್ಯಾಂಕುಗಳಲ್ಲಿ ಒಂದರಿಂದ ಐದು ಲಕ್ಷದವರೆಗಿನ ಹಣದ ಠೇವಣಿಯಲ್ಲಿ ಶೇ.98.1 ರಷ್ಟು ಸಣ್ಣ ಮತ್ತು ಮಧ್ಯಮ ವರ್ಗಕ್ಕೆ ಸೇರಿದವರಾಗಿದ್ದಾರೆ. ಶ್ರೀಗುರು ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್ ಜೊತೆಗೆ ರಾಜ್ಯದ ಇತರೆ ಜಿಲ್ಲೆಗಳ ಅಂದರೆ, ಬಾಗಲಕೋಟೆಯ ಮುಧೋಳ್ ಕೋ- ಆಪರೇಟೀವ್ ಬ್ಯಾಂಕ್, ವಿಜಯಪುರದ ಡೆಕ್ಕನ್ ಅರ್ಬನ್ ಕೋ- ಆಪರೇಟೀವ್ ಬ್ಯಾಂಕ್, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಮಿಲ್ಲಾತ್ ಕೋ- ಆಪರೇಟೀವ್ ಬ್ಯಾಂಕ್‍ಗಳ ಒಟ್ಟು 77,819 ಠೇವಣಿದಾರರು ಮುಂದಿನ ದಿನಗಳಲ್ಲಿ ಈ ಕಾರ್ಯಕ್ರಮದ ಫಲಾನುಭವಿಗಳಾಗಿ ತಮ್ಮ ಕ್ಲೇಮುಗಳಿಗೆ ಹಣ ಮರುಪಾವತಿ ಪಡೆಯಲಿದ್ದಾರೆ ಎಂದರು. ಇದನ್ನೂ ಓದಿ: ಯುವಕನ ಜೊತೆಗೆ ವಾಸವಿದ್ದ ಅಪ್ರಾಪ್ತ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು
ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಬೆಂಗಳೂರಿನಲ್ಲಿರುವ ಶ್ರೀಗುರು ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್ ಮತ್ತು ಕರ್ನಾಟಕದಲ್ಲಿ ಐದು ಕೇಂದ್ರಗಳಲ್ಲಿರುವ ಇತರ ನಾಲ್ಕು UCBಗಳು ವಿಫಲವಾದ ನಂತರ ಭಾರತ ಸರ್ಕಾರವು ತನ್ನ ಗ್ರಾಹಕರಿಗೆ DICGC ಕ್ಲೈಮ್ ಮೊತ್ತವನ್ನು ಗರಿಷ್ಠ 5 ಲಕ್ಷ ರೂಪಾಯಿಗಳವರೆಗೆ ಹಣ ಕಳೆದುಕೊಂಡ ಗ್ರಾಹಕರಿಗೆ ಬಿಡುಗಡೆ ಮಾಡಿದೆ. ಇದಕ್ಕೆ ಸಂಬಂಧಿಸಿದ ಮಧ್ಯಂತರ ಪಾವತಿಯ ಮೊದಲ ಕಂತನ್ನು DICGCಯು ದಿನಾಂಕ 2021ರ ನವೆಂಬರ್ 29 ರಂದು ಬಿಡುಗಡೆ ಮಾಡಿದೆ.
ಸಾಂಕೇತಿಕವಾಗಿ ಗುರು ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್‍ನ ಕೆಲವು ಠೇವಣಿದಾರರಿಗೆ ಕೇಂದ್ರ ಸಚಿವರು ಹಾಗು ನೆರೆದ ಇತರೆ ಗಣ್ಯರು ಹಣ ಮರುಪಾವತಿ ಚೆಕ್ ವಿತರಿಸಿದರು. ಕಾರ್ಯಕ್ರಮದಲ್ಲಿ ಸಂಸದ ಪಿ. ಸಿ ಮೋಹನ್, ಜಿಲ್ಲಾ ಪಂಚಾಯತ್ ಆಡಳಿತಾಧಿಕಾರಿ ಹಾಗೂ ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಂಜುಳಾ, ಜಿಲ್ಲಾಧಿಕಾರಿ ಜೆ ಮಂಜುನಾಥ್, ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಂಗಪ್ಪ ಸೇರಿದಂತೆ ಬ್ಯಾಂಕುಗಳ ಅಧಿಕಾರಿಗಳು, ಠೇವಣಿದಾರರು ಉಪಸ್ಥಿತರಿದ್ದರು.