ನವದೆಹಲಿ: ಪ್ರಧಾನಿ ಮೋದಿಯವರ ಕೆಲ ನಿರ್ಧಾರಗಳಿಂದಾಗಿ 45 ಕೋಟಿಗೂ ಹೆಚ್ಚು ಜನರು ಉದ್ಯೋಗ ಪಡೆಯುವ ಭರವಸೆ ಕಳೆದುಕೊಂಡಿದ್ದಾರೆ ಎಂದು ಪ್ರದಾನಿ ಮೋದಿಯವರನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
ನಿರುದ್ಯೋಗ ಸಮಸ್ಯೆಯ ಬಗ್ಗೆ ಟ್ವೀಟ್ ಮಾಡಿ, ಕಳೆದ ಐದು ವರ್ಷಗಳಲ್ಲಿ 2.1 ಕೋಟಿ ಉದ್ಯೋಗಗಳು ಕಳೆದುಹೋಗಿವೆ. 45 ಕೋಟಿ ಜನರು ಉದ್ಯೋಗಕ್ಕಾಗಿ ಹುಡುಕುವುದನ್ನು ನಿಲ್ಲಿಸಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಆನೆ ದಂತದಲ್ಲಿ ಚೆಸ್ ಪಾನ್ ಕೆತ್ತನೆ – ಮಾರಾಟ ಮಾಡುವಾಗ ಸಿಕ್ಕಿಬಿದ್ದ
Advertisement
Advertisement
ಒಂದು ದಿನದ ಹಿಂದೆ, ರಾಹುಲ್ ಗಾಂಧಿ ಅವರು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‍ಇ) ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದು ವಾಸ್ತವವಾಗಿ ‘ಸೆಂಟ್ರಲ್ ಬೋರ್ಡ್ ಆಫ್ ಸಪ್ರೆಸಿಂಗ್ ಎಜುಕೇಶನ್’ ಎಂದು ಹೇಳಿದರು. ಸಿಬಿಎಸ್‍ಸಿ ಬೋರ್ಡ್ 10 ಮತ್ತು 12 ನೇ ತರಗತಿಗಳ ಪಠ್ಯಕ್ರಮವನ್ನು ಮಾರ್ಪಡಿಸಿದ ಕೆಲವು ದಿನಗಳ ನಂತರ ಅವರು ಈ ಹೇಳಿಕೆ ನೀಡಿದ್ದಾರೆ.
Advertisement
ಪಠ್ಯಕ್ರಮದ ಮಾರ್ಪಾಡಿನ ಕುರಿತು ಗಾಂಧಿ ವಂಶಸ್ಥರು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಗುರಿಯಾಗಿಟ್ಟುಕೊಂಡು ಅದನ್ನು ‘ರಾಷ್ಟ್ರೀಯ ಶಿಕ್ಷಾ ಛೇದಕ’ ಎಂದು ಕರೆದರು. ಆಂಗ್ಲೋ-ಏಷ್ಯನ್ ಪ್ರಾಂತ್ಯಗಳಲ್ಲಿ ಇಸ್ಲಾಮಿಕ್ ಸಾಮ್ರಾಜ್ಯಗಳ ಉದಯ, ಮೊಘಲ್ ನ್ಯಾಯಾಲಯಗಳ ವೃತ್ತಾಂತಗಳು, ಶೀತಲ ಸಮರ ಮತ್ತು ಕೈಗಾರಿಕಾ ಕ್ರಾಂತಿಯನ್ನು 11 ಮತ್ತು 12 ನೇ ತರಗತಿಗಳ ಇತಿಹಾಸ ಮತ್ತು ರಾಜಕೀಯ ವಿಜ್ಞಾನ ಪಠ್ಯಕ್ರಮದಿಂದ ಸಿಬಿಎಸ್‍ಸಿ ತೆಗೆದುಹಾಕಿದೆ. ಆದ್ದರಿಂದ ರಾಹುಲ್ ಗಾಂಧಿ ಸಿಬಿಎಸ್‍ಸಿ ವಿರುದ್ಧ ಸಿಡಿದಿದ್ದರು. ಇದನ್ನೂ ಓದಿ: ದಿವ್ಯಾ ಹಾಗರಗಿ ಬಂಧನ ಯಾವಾಗ? – ಪ್ರಭಾವಿಗಳ ಶ್ರೀರಕ್ಷೆಯಲ್ಲಿದ್ದಾರಾ ದಿವ್ಯಾ
Advertisement
ಎಪ್ರಿಲ್ 9 ರಂದು ದೆಹಲಿಯಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ರಾಹುಲ್ ಗಾಂಧಿ ಅವರು ಸಂವಿಧಾನವನ್ನು ಉಳಿಸಲು ನಾವು ಆರ್‍ಎಸ್‍ಎಸ್ ಕೈಯಲ್ಲಿರುವ ಸಂಸ್ಥೆಗಳನ್ನು ರಕ್ಷಿಸಬೇಕು ಎಂದು ಹೇಳುವ ಮೂಲಕ ಆರ್‍ಎಸ್‍ಎಸ್ ವಿರುದ್ಧ ವಾಗ್ದಾಳಿ ನಡೆಸಿದರು.