ನವದೆಹಲಿ: ಬಾಲಿವುಡ್ ನಟ ಕಾರ್ತಿಕ್ ಆರ್ಯಾನ್ ಅವರು ಪ್ರಧಾನಿ ನರೇಂದ್ರ ಮೋದಿ ಜೊತೆಗಿದ್ದ ಹಿಮ್ಮುಖ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಈ ಪೋಸ್ಟ್‍ಗೆ ಮೋದಿ ಅವರು ಕೊಟ್ಟ ಪ್ರತಿಕ್ರಿಯೆ ನೆಟ್ಟಿಗರ ಮನ ಗೆದ್ದಿದೆ.
ಬಿಟೌನ್‍ನ ನಟ ಕಾರ್ತಿಕ್ ಆರ್ಯಾನ್, ನಿರ್ಮಾಪಕ ಕರಣ್ ಜೊಹರ್, ಇಮ್ತಿಯಾಜ್ ಅಲಿ ಹಾಗೂ ದಿನೇಶ್ ವಿಜಯ್ ಎಲ್ಲ ಸೇರಿ ಪ್ರಧಾನಿ ಮೋದಿಯವರು ಹಿಮ್ಮುಖವಾಗಿ ನಿಂತಿರುವಾಗ ಹಿಂಬದಿಯಿಂದ ಸೆಲ್ಫಿ ಕ್ಲಿಕ್ಕಿಸಿದ್ದಾರೆ. ಬಳಿಕ ಆ ಫೋಟೋವನ್ನು ಕಾರ್ತಿಕ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿ ಪ್ರಧಾನಿ ಅವರೊಂದಿಗೆ ಹಿಮ್ಮುಖ ಚಿತ್ರ ಅಂತ “Losers’ backfie with the Honorable PM” ಅಂತ ಕ್ಯಾಪ್ಷನ್ ನೀಡಿ ಟ್ವೀಟ್ ಮಾಡಿದ್ದರು.
Not losers but Rockstars!
No selfie Jab We Met but there will always be another occasion. 🙂 https://t.co/1Ud7D5jIvd
— Narendra Modi (@narendramodi) January 20, 2019
ಈ ಟ್ವೀಟ್ ನೋಡಿದ ಪ್ರಧಾನಿ ಅವರು “ನೀವು ಲೂಸರ್ಸ್ ಅಲ್ಲ ರಾಕ್‍ಸ್ಟಾರ್ಸ್! ಈ ಬಾರಿ ಸೆಲ್ಫಿ ತೆಗೆದುಕೊಳ್ಳಲು ಆಗಲಿಲ್ಲ, ಆದ್ರೆ ಮತ್ತೊಮ್ಮೆ ಭೇಟಿಯಾದಾಗ ಸೆಲ್ಫಿ ತೆಗೆಸಿಕೊಳ್ಳೊಣ” (Not losers but Rockstars! No selfie Jab We Met but there will always be another occasion) ಅಂತ ರೀ-ಟ್ವೀಟ್ ಮಾಡಿದ್ದಾರೆ.
https://twitter.com/RenuGadgil/status/1086980907368660999?ref_src=twsrc%5Etfw%7Ctwcamp%5Etweetembed%7Ctwterm%5E1086980907368660999&ref_url=https%3A%2F%2Fwww.ndtv.com%2Fentertainment%2Fpm-modis-epic-jab-we-met-response-to-kartik-aaryans-post-is-winning-the-internet-1980636
Wow..your humour ????????????????????????????
— AVANTIKA CHANDRA (@Avantika_23) January 20, 2019
ಮೋದಿ ಅವರ ಈ ಟ್ವೀಟ್ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಅಲ್ಲದೆ ಪ್ರಧಾನಿ ಅವರ ಈ ತಿಳಿ ಮಿಶ್ರಿತ ಪ್ರತಿಕ್ರಿಯೆ ಜನರ ಮನ ಗೆದ್ದಿದ್ದು, ಮೋದಿ ಅವರ ಟ್ವೀಟ್‍ಗೆ ಸಾಕಷ್ಟು ಮಂದಿ ರೀ-ಟ್ವೀಟ್ ಮಾಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv