ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸಹೋದರ ಹಾಗೂ ಅಖಿಲ ಭಾರತ ನ್ಯಾಯಬೆಲೆ ವಿತರಕರ ಒಕ್ಕೂಟದ (AIFPSDF) ಉಪಾಧ್ಯಕ್ಷರೂ ಆಗಿರುವ ಪ್ರಹ್ಲಾದ್ ಮೋದಿ ಅವರು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದರು.
ಒಕ್ಕೂಟದ ಇತರೆ ಸದಸ್ಯರೊಂದಿಗೆ ಸೇರಿ ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ಮೋದಿ ಅವರು ಇಂದು ಧರಣಿ ನಡೆಸಿದರು. ಇದನ್ನೂ ಓದಿ: ಆಗಸ್ಟ್ 2 ವಿಶೇಷ ದಿನ; ನಾನು DP ಬದಲಾಯಿಸಿದ್ದೇನೆ, ನೀವೂ ಬದಲಾಯಿಸಿ – ಜನತೆಗೆ ಮೋದಿ ಕರೆ
Advertisement
Advertisement
ಅಖಿಲ ಭಾರತ ನ್ಯಾಯಬೆಲೆ ಅಂಗಡಿ ವಿತರಕರ ಒಕ್ಕೂಟದ ನಿಯೋಗವು ತನ್ನ ಉಳಿವಿಗಾಗಿ ನಮ್ಮ ಬಹುಕಾಲದ ಬೇಡಿಕೆಗಳನ್ನು ಪಟ್ಟಿ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜ್ಞಾಪನ ಪತ್ರವನ್ನು ಸಲ್ಲಿಸಲಿದೆ. ಅಕ್ಕಿ, ಗೋಧಿ ಮತ್ತು ಸಕ್ಕರೆ ಮೇಲಿನ ನಷ್ಟದ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
Advertisement
ಖಾದ್ಯ ತೈಲ ಮತ್ತು ಬೇಳೆ ಕಾಳುಗಳನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ಸರಬರಾಜು ಮಾಡಬೇಕು. ಕೇಂದ್ರ ಸರ್ಕಾರವು ನಮಗೆ ಪರಿಹಾರವನ್ನು ನೀಡಬೇಕು ಮತ್ತು ನಮ್ಮ ಆರ್ಥಿಕ ಸಂಕಷ್ಟಗಳನ್ನು ಕೊನೆಗೊಳಿಸಬೇಕು ಎಂದು ವಿನಂತಿಸಿಕೊಂಡಿದ್ದಾರೆ. ಇದನ್ನೂ ಓದಿ: ಇಂದು ಮಾಲ್ಡೀವ್ಸ್ ಅಧ್ಯಕ್ಷರನ್ನು ಭೇಟಿಯಾಗಲಿರುವ ಮೋದಿ
Advertisement
ಪಶ್ಚಿಮ ಬಂಗಾಳದಲ್ಲಿ ಇರುವ ಹಾಗೆ ಉಚಿತ ಪಡಿತರ ವಿತರಣೆ ವ್ಯವಸ್ಥೆಯನ್ನು ದೇಶಾದ್ಯಂತ (ಪಶ್ಚಿಮ ಬಂಗಾಳ ಪಡಿತರ ಮಾದರಿ) ಜಾರಿಗೆ ತರಬೇಕು ಎಂದು ಪ್ರಹ್ಲಾದ್ ಮೋದಿ ಅವರು ಆಗ್ರಹಿಸಿದ್ದಾರೆ.