ಕೊಪ್ಪಳ: ಪೆನ್ಸಿಲ್‌ನಿಂದ ತಮ್ಮ ಭಾವಚಿತ್ರ ಬಿಡಿಸಿದ ಮಹಿಳೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಸೌಮ್ಯಾ ಗುಡಿ ಎಂಬ ಮಹಿಳೆ ಮೋದಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಉಡುಪಿ ಕಾರ್ಯಕ್ರಮದಲ್ಲಿ ಮೋದಿ ಭಾವಚಿತ್ರದ ಫೋಟೊವನ್ನು ಮಹಿಳೆ ನೀಡಿದ್ದರು. ಕೊಪ್ಪಳದ ಮಹಿಳೆಯ (Koppala Women) ಕಲೆಯನ್ನು ಪ್ರಧಾನಿ ಹಾಡಿಹೊಗಳಿದ್ದಾರೆ. ಇದನ್ನೂ ಓದಿ: ಭಕ್ತ ಸಾಗರದ ಮಧ್ಯೆ ಬನಶಂಕರಿದೇವಿ ರಥೋತ್ಸವಕ್ಕೆ ಚಾಲನೆ; ಇಂದಿನಿಂದ 1 ತಿಂಗಳು ಅದ್ಧೂರಿ ಜಾತ್ರೆ
ಉಡುಪಿಯಲ್ಲಿ ಈ ಸುಂದರ ಭಾವಚಿತ್ರ ಸ್ವೀಕರಿಸಿದ್ದು, ನಿಜಕ್ಕೂ ಹೃದಯಸ್ಪರ್ಶಿಯಾಗಿತ್ತು. ನಿಮ್ಮ ಕಲಾತ್ಮಕ ಪ್ರಯಾಣವೂ ಇದೇ ಸಮರ್ಪಣೆ, ಉತ್ಸಾಹದಿಂದ ಮುಂದುವರೆಯಲಿ. ಹೃದಯ ಸ್ಪರ್ಶಿಸೋ, ಮನಸ್ಸು ಪ್ರೇರಿಪಿಸೋ ಕಲಾಕೃತಿ ರಚಿಸಲಿ ಎಂದು ಮಹಿಳೆಯನ್ನು ಪ್ರಧಾನಿ ಹಾರೈಸಿದ್ದಾರೆ.
ಇತ್ತೀಚೆಗೆ ಪ್ರಧಾನಿ ಮೋದಿ ಅವರು ಉಡುಪಿಯ ಶ್ರೀಕೃಷ್ಣ ಮಠದ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ವೇದಿಕೆ ಕಾರ್ಯಕ್ರಮದಲ್ಲಿ ಮೋದಿಗೆ ಮಹಿಳೆ ತಮ್ಮ ಕಲಾಕೃತಿಯನ್ನು ನೀಡಿದ್ದರು. ಕಲಾಕೃತಿ ಮೇಲೆ ವಿಳಾಸ ಬರೆಯುವಂತೆ ಮೋದಿ ತಿಳಿಸಿದ್ದರು. ಅದರಂತೆ ಮಹಿಳೆಯ ಕಲೆಯನ್ನು ಮೆಚ್ಚಿ ಮೋದಿ ಪತ್ರ ಬರೆದಿದ್ದಾರೆ.


