ತಿರುಪತಿ ವೆಂಕಟೇಶ್ವರ ಸ್ವಾಮಿ ದೇವಾಲಯಕ್ಕೆ ಪ್ರಧಾನಿ ಮೋದಿ ಭೇಟಿ

Public TV
1 Min Read
Narendra Modi Tirupathi

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು ಸೋಮವಾರ ತಿರುಪತಿ (Tirupati) ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ (Venkateshwara Swamy Temple) ಭೇಟಿ ನೀಡಿದ್ದು, 140 ಕೋಟಿ ಭಾರತೀಯರ ಉತ್ತಮ ಆರೋಗ್ಯ, ಯೋಗಕ್ಷೇಮ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸಿದರು.

ದೇವಾಲಯದ ಭೇಟಿ ಕುರಿತು ಪ್ರಧಾನಿ ಎಕ್ಸ್‌ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ದೇಗುಲಕ್ಕೆ ಎರಡು ದಿನಗಳ ಭೇಟಿಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ವೆಂಕಟೇಶ್ವರನ ಸನ್ನಿಧಿಗೆ ಆಗಮಿಸಿದರು. ಮೋದಿ ಭಾನುವಾರ ರಾತ್ರಿ ತಿರುಮಲದಲ್ಲಿ ತಂಗಿದ್ದರು. ಸೋಮವಾರ ಮುಂಜಾನೆ ವೆಂಕಟೇಶ್ವರ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಅಮಾಯಕ ಸೈನಿಕರ ಬಲಿ ಪಡೆದ ಕೀರ್ತಿ ಮೋದಿಗೆ ಸಲ್ಲುತ್ತೆ: ಬಾಲಕೃಷ್ಣ ವಾಗ್ದಾಳಿ

Narendra Modi Tirupathi 1

ತಿರುಪತಿ ವಿಮಾನ ನಿಲ್ದಾಣದಲ್ಲಿ ಪ್ರಧಾನಿಗೆ ಅದ್ಧೂರಿ ಸ್ವಾಗತ ನೀಡಲಾಯಿತು. ರಾಜ್ಯಪಾಲ ಎಸ್.ಅಬ್ದುಲ್ ನಜೀರ್ ಮತ್ತು ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು ಪ್ರಧಾನಿ ಮೋದಿ ಆಗಮನಕ್ಕೆ ಒಂದೆರಡು ಗಂಟೆಗಳ ಮೊದಲು ವಿಮಾನ ನಿಲ್ದಾಣಕ್ಕೆ ಆಗಮಿಸಿ ಅವರನ್ನು ಸ್ವಾಗತಿಸಿದರು. ಗವರ್ನರ್ ಅಬ್ದುಲ್ ನಜೀರ್ ಅವರು ಪ್ರಧಾನಿ ಮೋದಿಯವರೊಂದಿಗೆ ತಿರುಪತಿಗೆ ಹೋದರೆ, ಮುಖ್ಯಮಂತ್ರಿ ಜಗನ್ ಆರತಕ್ಷತೆಯ ನಂತರ ವಿಜಯವಾಡಕ್ಕೆ ಹಿಂದಿರುಗಿದರು. ಇದನ್ನೂ ಓದಿ: Constitution Day: ರಾಷ್ಟ್ರಪತಿಯಿಂದ ಸುಪ್ರೀಂ ಕೋರ್ಟ್ ಆವರಣದಲ್ಲಿ ಅಂಬೇಡ್ಕರ್ ಪ್ರತಿಮೆ ಅನಾವರಣ

ಇಷ್ಟು ಮಾತ್ರವಲ್ಲದೇ ಪ್ರಧಾನಿ ಮೋದಿ ಅವರು ಸೋಮವಾರ ಗುರುನಾನಕ್ ದೇವ್ ಅವರ ಜನ್ಮದಿನದ ಅಂಗವಾಗಿ ಜನರಿಗೆ ಶುಭಾಶಯ ಕೋರಿದರು. ಇದನ್ನೂ ಓದಿ: ಚೀನಾದಲ್ಲಿ ಮತ್ತೊಂದು ವೈರಸ್; ಆಸ್ಪತ್ರೆಗಳಲ್ಲಿ ತುರ್ತುಕ್ರಮ ಪರಿಶೀಲಿಸುವಂತೆ ರಾಜ್ಯಗಳಿಗೆ ಖಡಕ್‌ ವಾರ್ನಿಂಗ್‌

Share This Article