– ಭಾರತದ ದಾವೂದಿ ಬೊಹ್ರಾ ಸಮುದಾಯ ನೆರವಿನಿಂದ ಪುನಃಸ್ಥಾಪಿಸಿದ್ದ ಮಸೀದಿ ಅಲ್-ಹಕೀಮ್
ಕೈರೋ: ಅಮೆರಿಕದಿಂದ (America) ನೇರವಾಗಿ ಈಜಿಪ್ಟ್‌ಗೆ 2 ದಿನ ಪ್ರವಾಸಕ್ಕೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭಾನುವಾರ ಸಾವಿರ ವರ್ಷ ಹಳೆಯದಾದ ಅಲ್-ಹಕೀಮ್ ಮಸೀದಿಗೆ (Al-Hakim Mosque) ಭೇಟಿ ನೀಡಿದರು.
Advertisement
ಭಾರತದ ದಾವೂದಿ ಬೊಹ್ರಾ ಸಮುದಾಯದ ಸಹಾಯದಿಂದ ಪುನಃಸ್ಥಾಪಿಸಲಾದ ಕೈರೋದಲ್ಲಿನ 11 ನೇ ಶತಮಾನದ ಐತಿಹಾಸಿಕ ಅಲ್-ಹಕೀಮ್ ಮಸೀದಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಭೇಟಿ ನೀಡಿದರು. 1012 ರಲ್ಲಿ ನಿರ್ಮಿಸಲಾದ ಮಸೀದಿಯ ಗೋಡೆಗಳು ಮತ್ತು ದ್ವಾರಗಳ ಮೇಲಿನ ಕೆತ್ತನೆ ನೋಡಿ ಪ್ರಧಾನಿ ಶ್ಲಾಘನೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಈಜಿಪ್ಟ್‌ನಲ್ಲಿ ‘ಯೇ ದೋಸ್ತಿ’ ಹಾಡು ಹೇಳಿ ಮೋದಿ ಸ್ವಾಗತಿಸಿದ ಮಹಿಳೆಯರು
Advertisement
Advertisement
ಮಸೀದಿ ವಿಶೇಷತೆ ಏನು?
ಸಾವಿರ ವರ್ಷಗಳಷ್ಟು ಹಳೆಯದಾದ ಅಲ್-ಹಕೀಮ್ ಕೈರೋದಲ್ಲಿನ 4ನೇ ಅತ್ಯಂತ ಹಳೆಯ ಮಸೀದಿಯಾಗಿದೆ. ನಗರದಲ್ಲಿ ನಿರ್ಮಿಸಲಾದ ಎರಡನೇ ಫಾತಿಮಿಡ್ ಮಸೀದಿಯಾಗಿದೆ. ಮಸೀದಿಯು 13,560 ಚದರ ಮೀಟರ್‌ಗಳಷ್ಟು ವಿಸ್ತೀರ್ಣ ಹೊಂದಿದೆ. ಸಾಂಪ್ರದಾಯಿಕ ಕೇಂದ್ರ ಪ್ರಾಂಗಣವು 5,000 ಚದರ ಮೀಟರ್ ವೀಸ್ತೀರ್ಣವಿದೆ.
Advertisement
ದಾವೂದಿ ಬೋಹ್ರಾ ಮುಸ್ಲಿಮರು ಇಸ್ಲಾಂ ಅನುಯಾಯಿಗಳಲ್ಲಿ ಒಂದು ಪಂಗಡ. ಅವರು 11 ನೇ ಶತಮಾನದಲ್ಲಿ ಭಾರತದಲ್ಲಿ ತಮ್ಮ ಅಸ್ತಿತ್ವ ಕಂಡುಕೊಳ್ಳುವ ಮೊದಲು ಈಜಿಪ್ಟ್‌ನಿಂದ ಯೆಮೆನ್‌ಗೆ ಸ್ಥಳಾಂತರಗೊಂಡಿದ್ದರು. ಇದನ್ನೂ ಓದಿ: ಟೇಕ್‍ಆಫ್ ವೇಳೆ ವಿಮಾನದ ಟಯರ್ ಬ್ಲಾಸ್ಟ್ – ಸಿಬ್ಬಂದಿ ಸೇರಿ 11 ಜನರಿಗೆ ಗಾಯ
ಮಸೀದಿ ಭೇಟಿ ಬಳಿಕ ಮೋದಿ ಅವರು, ಹೆಲಿಯೊಪೊಲಿಸ್ ಕಾಮನ್‌ವೆಲ್ತ್ ಯುದ್ಧಸ್ಮಾರಕಕ್ಕೆ ಭೇಟಿ ನೀಡಿದರು. ಮೊದಲ ವಿಶ್ವಯುದ್ಧದ ಸಂದರ್ಭದಲ್ಲಿ ಈಜಿಪ್ಟ್ ಮತ್ತು ಪ್ಯಾಲೆಸ್ತೀನ್‌ನಲ್ಲಿ ವೀರಾವೇಶದಿಂದ ಹೋರಾಡಿ ಬಲಿದಾನಗೈದ ಭಾರತೀಯ ಸೈನಿಕರಿಗೆ ಗೌರವ ಸಲ್ಲಿಸಿದರು. ಇಲ್ಲಿ ಮೊದಲ ವಿಶ್ವಯುದ್ಧದಲ್ಲಿ ಸುಮಾರು 4,000 ಭಾರತೀಯ ಯೋಧರು ಹುತಾತ್ಮರಾಗಿದ್ದರು.