ಕೈರೋ: 2 ದಿನಗಳ ಈಜಿಪ್ಟ್ ಪ್ರವಾಸ (Egypt Tour) ಕೈಗೊಂಡಿರುವ ಪ್ರಧಾನಿ ಮೋದಿ (Narendra Modi) ಶನಿವಾರ ಈಜಿಪ್ಟ್ ರಾಜಧಾನಿ ಕೈರೋಗೆ ಬಂದಿಳಿದರು. ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮೋದಿ ಅವರನ್ನು ಈಜಿಪ್ಟ್ ಪ್ರಧಾನಿ ಮೊಸ್ತಫಾ ಮೊಡ್‌ಬೌಲಿ (Madbouly) ಅವರು ಆಲಿಂಗನ ಮಾಡುವ ಮೂಲಕ ಬರಮಾಡಿಕೊಂಡರು. ನಂತರ ಸಕಲ ಸೇನಾ ಗೌರವದೊಂದಿಗೆ ಭವ್ಯ ಸ್ವಾಗತಕೋರಲಾಯಿತು.
#WATCH | PM Narendra Modi interacts with the members of the Indian community in Cairo during his two-day State visit to Egypt pic.twitter.com/PJxR8JuVOR
— ANI (@ANI) June 24, 2023
Advertisement
ಆ ನಂತರ ಅಲ್ಲಿನ ಹೋಟೆಲ್‌ಗೆ ಭೇಟಿ ನೀಡಿದ ಪ್ರಧಾನಿ ಮೋದಿ ಈಜಿಪ್ಟ್‌ನ ಭಾರತೀಯ ಸಮುದಾಯದೊಂದಿಗೆ (Indian Community) ಸಂವಾದ ನಡೆಸಿದರು. ಈ ವೇಳೆ ಸಾಂಸ್ಕೃತಿಕ ಉಡುಗೆಯಲ್ಲಿ ಸಿಂಗಾರಗೊಂಡು ಸ್ವಾಗತಿಸಿದ ಮಹಿಳೆಯರು ʻಯೇ ದೋಸ್ತಿʼ ಗೀತೆಯನ್ನಾಡುವ ಮೂಲಕ ಮೋದಿ ಅವರನ್ನು ಬರಮಾಡಿಕೊಂಡರು.
Advertisement
ಅಧ್ಯಕ್ಷ ಎಲ್-ಸಿಸಿ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಭೇಟಿ ನೀಡಿದ್ದು, 1997ರ ಬಳಿಕ ಈಜಿಪ್ಟ್‌ಗೆ ತೆರಳಿ ದ್ವಿಪಕ್ಷೀಯ ಮಾತುಕತೆ ನಡೆಸುತ್ತಿರುವ ಮೊದಲ ಪ್ರಧಾನಿಯೂ ಆಗಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ 3,200 ಕೋಟಿ ಹೂಡಿಕೆ ಮಾಡಲಿದೆ ಸೆಮಿಕಂಡಕ್ಟರ್ ಕಂಪನಿ Applied Materials
Advertisement
#WATCH | PM Narendra Modi holds meeting with Egyptian PM Mostafa Madbouly in Cairo pic.twitter.com/Ha2HL6Wyeb
— ANI (@ANI) June 24, 2023
Advertisement
ಉಭಯ ದೇಶಗಳ ರಾಜತಾಂತ್ರಿಕ ಸಂಬಂಧ ವೃದ್ಧಿ ಉದ್ದೇಶದಿಂದ ಪ್ರಧಾನಿ ಮೋದಿ ಭಾನುವಾರ ಎಲ್-ಸಿಸಿ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಈಜಿಪ್ಟ್‌ನಲ್ಲಿರುವ ಭಾರತ ಮೂಲದ ಸಂಪುಟ ಸದಸ್ಯರೊಂದಿಗೆ ಮತ್ತು ಪ್ರಮುಖ ತಜ್ಞರೊಂದಿಗೂ ಸಂವಾದ ನಡೆಸಲಿದ್ದಾರೆ. ಇದನ್ನೂ ಓದಿ: ಪುಟಿನ್‌ಗೆ ಅಡುಗೆ ಭಟ್ಟನಾಗಿದ್ದ ಪ್ರಿಗೋಜಿನ್ – ರಷ್ಯಾ ಅಧ್ಯಕ್ಷನ ವಿರುದ್ಧವೇ ತಿರುಗಿ ಬಿದ್ದದ್ದು ಯಾಕೆ?
ಆ ನಂತರ 11ನೇ ಶತಮಾನದ ಅಲ್-ಹಕೀಮ್ ಮಸೀದಿಗೆ ಭೇಟಿ ನೀಡಲಿದ್ದಾರೆ. ಈ ಮಸೀದಿ 11ನೇ ಶತಮಾನದಲ್ಲಿ ನಿರ್ಮಾಣವಾಗಿದ್ದು, ಸಾದ್ಯ ಹಾಗೂ ಬೊಹ್ರಾ ಸಮುದಾಯದಿಂದ ನವೀಕರಿಸಲಾಗಿದೆ. ಅಲ್-ಹಕೀಮ್ ಮಸೀದಿಗೆ ಭೇಟಿ ನೀಡಿದ ಬಳಿಕ ಹೆಲಿಯೊಪೊಲಿಸ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಮೊದಲ ಮಹಾಯುದ್ಧದಲ್ಲಿ ಈಜಿಪ್ಟ್‌ಗಾಗಿ ಹೋರಾಡಿ ಬಲಿದಾನಗೈದ ಭಾರತೀಯ ಸೈನಿಕರಿಗೆ ಗೌರವ ಸಲ್ಲಿಸಲಿದ್ದಾರೆ. ಪ್ರಧಾನಿ ಮೋದಿ ಅವರ ಭೇಟಿಯು ಭಾರತ ಮತ್ತು ಈಜಿಪ್ಟ್ ನಡುವಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ.