ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಯುವ ಜನತೆಗಾಗಿ ಒಂದು ಪುಸ್ತಕವನ್ನ ಬರೆಯಲಿದ್ದಾರೆ. ಈ ಪುಸ್ತಕದಲ್ಲಿ ಅವರು ಪರೀಕ್ಷೆಯ ಒತ್ತಡ, ಏಕಾಗ್ರತೆ ಕಾಯ್ದುಕೊಳ್ಳುವುದು ಹೇಗೆ, ಪರೀಕ್ಷೆ ಮುಗಿದ ಮೇಲೆ ಏನು ಮಾಡಬೇಕು ಎಂಬ ವಿಷಯಗಳ ಬಗ್ಗೆ ಹೇಳಲಿದ್ದಾರೆ.
ಈ ಪುಸ್ತಕ ವಿವಿಧ ಭಾಷೆಗಳಲ್ಲಿ ಮುದ್ರಣವಾಗಲಿದ್ದು, ಇದೇ ವರ್ಷ ಬಿಡುಗಡೆಯಾಗಲಿದೆ ಎಂದು ಪ್ರಕಾಶಕರಾದ ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಹೇಳಿದೆ.
Advertisement
ವಿದ್ಯಾರ್ಥಿಗಳಿಗೆ ಸಂಬಂಧಿಸಿದ, ಅದರಲ್ಲೂ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಅನ್ವಯಿಸುವ ಅನೇಕ ವಿಷಯಗಳನ್ನ ಈ ಪುಸ್ತಕದಲ್ಲಿ ಉಲ್ಲೇಖಿಸಲಾಗುತ್ತದೆ ಎಂದು ವರದಿಯಾಗಿದೆ. ಈ ಪುಸ್ತಕದ ಮೂಲಕ ಪ್ರಧಾನಿ ಮೋದಿ ಮಕ್ಕಳಿಗೆ ಗೆಳೆಯನಾಗಿ ಅವರು ಪರೀಕ್ಷೆಗೆ ತಯಾರಾಗಲು ನೆರವಾಗಲಿದ್ದಾರೆ ಎಂದು ಪ್ರಕಾಶಕರು ಹೇಳಿದ್ದಾರೆ.
Advertisement
ಅಂಕಗಳಿಗಿಂತ ಜ್ಞಾನವನ್ನು ಯಾಕೆ ಮುಖ್ಯವಾಗಿಸಿಕೊಳ್ಳಬೇಕು, ಭವಿಷ್ಯಕ್ಕಾಗಿ ಹೇಗೆ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಮೋದಿ ಸಂವಾದದಂತೆ ಮುಕ್ತವಾಗಿ ಮಾತನಾಡಲಿದ್ದಾರೆ. ಈ ಪುಸ್ತಕದ ಐಡಿಯಾ ಮೋದಿ ಅವರಿಂದಲೇ ಬಂದಿದ್ದಂತೆ. ಅವರ ಮನ್ ಕೀ ಬಾತ್ ಕಾರ್ಯಕ್ರಮಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕ ಹಿನ್ನೆಲೆಯಲ್ಲಿ ಅಂತಹದ್ದೇ ಆಲೋಚನೆಗಳನ್ನ ಒಟ್ಟುಗೂಡಿಸಿ ಕೆಲವು ಸತ್ಯ ಸಂಗತಿಗಳೊಂದಿಗೆ ಮತ್ತಷ್ಟು ಚೆನ್ನಾಗಿ ಪುಸ್ತಕ ರೂಪದಲ್ಲಿ ಹೊರತರಲಿದ್ದಾರೆ.
Advertisement
ನನ್ನ ಮನಸ್ಸಿಗೆ ಹತ್ತಿರವಿರುವ ವಿಷಯದ ಬಗ್ಗೆ ನಾನೊಂದು ಪುಸ್ತಕ ಬರೆಯಬೇಕೆಂದಿದ್ದೇನೆ. ‘ಯುವಕರು ಮುನ್ನಡೆಸುವ ನಾಳೆ’ಯ ಬಗ್ಗೆ ನನ್ನ ದೂರದೃಷ್ಟಿಗೆ ಇದು ಮೂಲಭೂತವಾದುದು ಎಂದು ಮೋದಿ ಹೇಳಿರುವುದಾಗಿ ಪ್ರಕಾಶಕರು ಹೇಳಿಕೆ ನಿಡಿದ್ದಾರೆ. ಬ್ಲೂಕ್ರಾಫ್ಟ್ ಡಿಜಿಟಲ್ ಫೌಂಡೇಷನ್ ಎಂಬ ಸಂಸ್ಥೆ ಈ ಪುಸ್ತಕಕ್ಕಾಗಿ ತಂತ್ರಜ್ಞಾನ ಹಾಗೂ ನಾಲೆಜ್ಡ್ ಪಾಟ್ರ್ನರ್ ಆಗಿದೆ.
Advertisement
ದೇಶದ ಯುವ ಜನತೆಗೆ ಮೋದಿ ಅವರ ಸಂದೇಶವನ್ನ ತಲುಪಿಸುವ ನಿಟ್ಟಿನಲ್ಲಿ ಅವರ ಪುಸ್ತಕ ಪ್ರಕಟಿಸಲು ನಮಗೆ ತುಂಬಾ ಸಂತೋಷವಿದೆ ಎಂದು ಪೆಂಗ್ವಿನ್ ರಾಂಡಮ್ ಹೌಸ್ ನ ಸಿಇಓ ಗೌರವ್ ಸ್ರೀನಾಗೇಶ್ ಹೇಳಿದ್ದಾರೆ.