ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ತಮ್ಮ ಮೊದಲ ಈಜಿಪ್ಟ್ ಪ್ರವಾಸದಲ್ಲಿ 11ನೇ ಶತಮಾನದಲ್ಲಿ ನಿರ್ಮಾಣವಾದ ಅಲ್-ಹಕೀಮ್ ಮಸೀದಿಗೆ (Al-Hakim Mosque) ಭೇಟಿ ನೀಡಲಿದ್ದಾರೆ. ಮತ್ತು ಮೊದಲ ವಿಶ್ವ ಯುದ್ಧದ ಅವಧಿಯಲ್ಲಿ ಈಜಿಪ್ಟ್‌ಗಾಗಿ ಹೋರಾಡಿ ಮಡಿದ ಭಾರತೀಯ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ್ ಮೋಹನ್ ಕ್ವಾತ್ರಾ (Vinay Mohan Kwatra) ಸೋಮವಾರ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅಮೆರಿಕ, ಈಜಿಪ್ಟ್ ಪ್ರವಾಸ (USA, Egypt Tour) ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ಜೂನ್ 24 ಮತ್ತು 25 ರಂದು ಈಜಿಪ್ಟ್‌ಗೆ ಭೇಟಿ ನೀಡಲಿದ್ದಾರೆ. ಇದು ಈಜಿಪ್ಟ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರ ಮೊದಲ ಭೇಟಿಯಾಗಿದ್ದು, 1997ರ ಬಳಿಕ ಈಜಿಪ್ಟ್‌ಗೆ ತೆರಳಿ ದ್ವಿಪಕ್ಷೀಯ ಮಾತುಕತೆ ನಡೆಸುತ್ತಿರುವ ಮೊದಲ ಪ್ರಧಾನಿಯೂ ಆಗಿದ್ದಾರೆ ಎಂದರು.
Advertisement
Advertisement
ಈ ವರ್ಷದ ಗಣರಾಜೋತ್ಸವದಲ್ಲಿ ಈಜಿಪ್ಟ್ ಪ್ರಧಾನಿ ವಿಶೇಷ ಅತಿಥಿಯಾಗಿ ಭಾಗಿಯಾಗಿದ್ದರು, ಆನಂತರ ಎರಡು ದೇಶಗಳ ನಡುವಿನ ಒಡನಾಟ ಹೆಚ್ಚಿದೆ. ಭಾರತದ ವಿದೇಶಾಂಗ ಸಚಿವ ಜೈಶಂಕರ್, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈಜಿಪ್ಟ್‌ಗೆ ಭೇಟಿ ನೀಡಿದ್ದರು. ಈಜಿಪ್ಟ್‌ನ ಮೂರ್ನಾಲ್ಕು ಮಂದಿ ಸಚಿವರು ತಮ್ಮ ನಿಯೋಗದೊಂದಿಗೆ ಭಾರತಕ್ಕೆ ಬಂದಿದ್ದರು. ಇದನ್ನೂ ಓದಿ: ಒಡಿಶಾ ರೈಲು ಅಪಘಾತದ ಬಳಿಕ ಎಚ್ಚೆತ್ತ ರೈಲ್ವೆ ಇಲಾಖೆ- ಟ್ರ್ಯಾಕ್‌ಗಳ ಡೀಪ್ ಸ್ಕ್ರೀನಿಂಗ್‌ಗೆ ನಿರ್ಧಾರ
Advertisement
ಕೈರೋ ತಲುಪಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಮೊದಲು ಭಾರತದ ಘಟಕದೊಂದಿಗೆ ಸಂವಾದ ನಡೆಸಲಿದ್ದಾರೆ, ನಂತರ ಈಜಿಪ್ಟ್‌ನಲ್ಲಿರುವ ಸಣ್ಣ ಭಾರತೀಯ ಸಮುದಾಯದೊಂದಿಗೆ ಸಭೆ ನಡೆಸಲಿದ್ದಾರೆ. ಈಜಿಪ್ಟ್‌ನ ಕೆಲವು ಪ್ರಮುಖ ಗಣ್ಯರನ್ನ ಭೇಟಿ ಮಾಡಿದ ಬಳಿಕ ಅವರು ಅಲ್-ಹಕೀಮ್ ಮಸೀದಿಗೆ ಭೇಟಿ ನೀಡಲಿದ್ದಾರೆ.
Advertisement
ಅಲ್-ಹಕೀಮ್ ಮಸೀದಿ (Al-Hakim Mosque) 11ನೇ ಶತಮಾನದಲ್ಲಿ ನಿರ್ಮಾಣವಾಗಿದ್ದು ಸದ್ಯ ಮತ್ತು ಬೊಹ್ರಾ ಸಮುದಾಯದಿಂದ ನವೀಕರಿಸಲಾಗಿದೆ. ಅಲ್-ಹಕೀಮ್ ಮಸೀದಿಗೆ ಭೇಟಿ ನೀಡಿದ ಬಳಿಕ ಹೆಲಿಯೊಪೊಲಿಸ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಮೊದಲ ಮಹಾಯುದ್ಧದಲ್ಲಿ (World War) ಈಜಿಪ್ಟ್‌ಗಾಗಿ ಹೋರಾಡಿ ಸರ್ವೋಚ್ಚ ತ್ಯಾಗ ಮಾಡಿದ ಭಾರತೀಯ ಸೈನಿಕರಿಗೆ ಗೌರವ ಸಲ್ಲಿಸಲಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಜೊತೆ ಕೈ ಜೋಡಿಸಲು ಹಿಂದೇಟು – ಲೋಕಸಭೆ ಚುನಾವಣೆಗೆ ವಿಪಕ್ಷಗಳ ಮೈತ್ರಿ ಅನುಮಾನ
ಬಳಿಕ ಪ್ರಧಾನಿ ಮೋದಿ ಈಜಿಪ್ಟ್ ಅಧ್ಯಕ್ಷರನ್ನ ಭೇಟಿ ಮಾಡಲಿದ್ದಾರೆ. ಇಲ್ಲಿ ಈಜಿಪ್ಟ್ ಅಧ್ಯಕ್ಷರೊಂದಿಗೆ ದ್ವಿಪಕ್ಷೀಯ ಮಾತುಕತೆಗಳು, ವಿವಿಧ ಎಂಒಯುಗಳು ಮತ್ತು ಒಪ್ಪಂದಗಳಿಗೆ ಸಹಿ ಹಾಕಲಾಗುವುದು. ಈ ಒಪ್ಪಂದ ಎರಡು ದೇಶಗಳ ನಡುವಿನ ವ್ಯಾಪಾರ, ಆರ್ಥಿಕತೆಗೆ ಶಕ್ತಿ ತುಂಬಲಿದೆ ಎಂದು ಕ್ವಾತ್ರಾ ಹೇಳಿದರು.