ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವೀಡಿಯೋ ಕಾನ್ಫರೆನ್ಸ್ ಮೂಲಕ ಜಾಗತಿಕ ಉಪಕ್ರಮವಾದ ‘ಪರಿಸರಕ್ಕಾಗಿ ಜೀವನಶೈಲಿ(LiFE) ಆಂದೋಲನ’ಕ್ಕೆ ಚಾಲನೆ ನೀಡಲಿದ್ದಾರೆ.
ಪರಿಸರ ಪ್ರಜ್ಞೆಯನ್ನು ಪ್ರಪಂಚದಾದ್ಯಂತ ಜನರು, ಸಮುದಾಯಗಳು ಮತ್ತು ಸಂಸ್ಥೆಗಳು ತಮ್ಮ ಜೀವನಶೈಲಿಯಾಗಿ ಅಳವಡಿಸಿಕೊಳ್ಳುವುದು ತುಂಬಾ ಮುಖ್ಯ. ಈ ಹಿನ್ನೆಲೆ ಪರಿಸರ ಪ್ರಜ್ಞೆಯನ್ನು ಪ್ರಭಾವಿಸಲು ಮತ್ತು ಮನವೊಲಿಸಲು ಶಿಕ್ಷಣ ತಜ್ಞರು, ವಿಶ್ವವಿದ್ಯಾನಿಲಯಗಳು ಮತ್ತು ಸಂಶೋಧನಾ ಸಂಸ್ಥೆಗಳಿಂದ ಆಲೋಚನೆಗಳು ಮತ್ತು ಸಲಹೆಗಳನ್ನು ಆಹ್ವಾನಿಸುವ ‘ಪರಿಸರಕ್ಕಾಗಿ ಜೀವನಶೈಲಿ ಆಂದೋಲನ’ ಪ್ರಾರಂಭಿಸಲಾಗುವುದು ಎಂದು ಪ್ರಧಾನ ಮಂತ್ರಿ ಕಚೇರಿ ಹೇಳಿದೆ. ಇದನ್ನೂ ಓದಿ: ಶಾರ್ಟ್ ಸರ್ಕ್ಯೂಟ್ – ಸ್ಟೆಷನರಿ, ಕಿರಾಣಿ ಅಂಗಡಿಗೆ ಬೆಂಕಿ
Advertisement
Tomorrow, 5th June is marked as #WorldEnvironmentDay. At 6 PM, the LiFE global movement will be launched. This movement seeks to encourage practices that further sustainable living and environmentally friendly development. https://t.co/0Uqipvn9Xl
— Narendra Modi (@narendramodi) June 4, 2022
Advertisement
ಈ ಕಾರ್ಯಕ್ರಮದಲ್ಲಿ ಮೋದಿ ಅವರು ಮುಖ್ಯ ಭಾಷಣ ಮಾಡಲಿದ್ದಾರೆ. ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್‍ನ ಸಹ-ಅಧ್ಯಕ್ಷ ಬಿಲ್ ಗೇಟ್ಸ್, ಹವಾಮಾನ ಅರ್ಥಶಾಸ್ತ್ರಜ್ಞ ಲಾರ್ಡ್ ನಿಕೋಲಸ್ ಸ್ಟರ್ನ್, ನಡ್ಜ್ ಸಿದ್ಧಾಂತದ ಲೇಖಕ ಕ್ಯಾಸ್ ಸನ್‍ಸ್ಟೈನ್, ವಿಶ್ವ ಸಂಪನ್ಮೂಲ ಸಂಸ್ಥೆಯ ಸಿಇಒ ಮತ್ತು ಅಧ್ಯಕ್ಷ ಅನಿರುದ್ಧ ದಾಸ್‍ಗುಪ್ತ, ಯುಎನ್‍ಇಪಿ ಗ್ಲೋಬಲ್ ಹೆಡ್ ಇಂಗರ್ ಆಂಡರ್ಸನ್ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.
Advertisement
Advertisement
ಕಳೆದ ವರ್ಷ ಗ್ಲಾಸ್ಗೋದಲ್ಲಿ ನಡೆದ 26ನೇ ಯುನೈಟೆಡ್ ನೇಷನ್ಸ್ ಕ್ಲೈಮೇಟ್ ಚೇಂಜ್ ಕಾನ್ಫರೆನ್ಸ್ ಆಫ್ ದಿ ಪಾರ್ಟಿಟೀಸ್(COP26) ಸಂದರ್ಭದಲ್ಲಿ LiFE ಕಲ್ಪನೆಯನ್ನು ಪ್ರಧಾನಿ ಪರಿಚಯಿಸಿದ್ದರು. ಈ ಕಲ್ಪನೆಯು ಪರಿಸರ ಪ್ರಜ್ಞೆಯ ಜೀವನಶೈಲಿಯನ್ನು ಉತ್ತೇಜಿಸುತ್ತದೆ. ಇದು ‘ಬುದ್ಧಿರಹಿತ ಮತ್ತು ವಿನಾಶಕಾರಿ ಬಳಕೆ’ ಬದಲಿಗೆ ‘ಮನಸ್ಸಿಗೆ ಹಿತ ಮತ್ತು ಉದ್ದೇಶಪೂರ್ವಕ ಬಳಕೆ’ ಮೇಲೆ ಕೇಂದ್ರೀಕರಿಸುತ್ತದೆ ಎಂದು ವಿವರಿಸಿದ್ದರು.
&
nbsp;