ಲಕ್ನೋ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇದೇ ಏಪ್ರಿಲ್ 11ರಂದು (ನಾಳೆ) ತಮ್ಮ ಲೋಕಸಭಾ ಕ್ಷೇತ್ರವಾದ ವಾರಣಾಸಿಗೆ ಭೇಟಿ ನೀಡಲಿದ್ದು, 3,884.18 ಕೋಟಿ ರೂ. ಮೌಲ್ಯದ 44 ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಎಂದು ವಾರಣಾಸಿಯ ಬಿಜೆಪಿ ಅಧ್ಯಕ್ಷ ದಿಲೀಪ್ ಪಟೇಲ್ (Dilip Patel) ತಿಳಿಸಿದ್ದಾರೆ. ಇದು ವಾರಣಾಸಿಗೆ (Varanasi) ಮೋದಿ ಅವರ 50ನೇ ಭೇಟಿಯಾಗಿದೆ.
ಪ್ರಧಾನಿ ಮೋದಿ ಭೇಟಿ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 130 ಕುಡಿಯುವ ನೀರಿನ ಯೋಜನೆಗಳು, 100 ಹೊಸ ಅಂಗನವಾಡಿ ಕೇಂದ್ರಗಳು, 356 ಗ್ರಂಥಾಲಯಗಳು, 4 ಗ್ರಾಮೀಣ ರಸ್ತೆಗಳು ಮತ್ತು 2 ಕಾಲೇಜುಗಳನ್ನು ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಬಾಂಬ್ ದಾಳಿಗೂ ಜಗ್ಗಲ್ಲ – ಮುಂಬೈ ದಾಳಿಕೋರನನ್ನ ಕರೆತರಲು ಸಿದ್ಧವಾಯ್ತು NIA ಬುಲೆಟ್ ಪ್ರೂಫ್ ಕಾರು
ಅಲ್ಲದೇ ನಗರದ ವಿದ್ಯುತ್ ಮೂಲಸೌಕರ್ಯ (Electrical Infrastructure) ಬಲಪಡಿಸುವ ನಿಟ್ಟಿನಲ್ಲಿ 15 ಹೊಸ ಸಬ್‌ಸ್ಟೇಷನ್‌ಗಳ ನಿರ್ಮಾಣ, ಹೊಸ ಟ್ರಾನ್ಸ್‌ಫಾರ್ಮರ್‌ಗಳ ಸ್ಥಾಪನೆ ಮತ್ತು 1,500 ಕಿಮೀ ಹೊಸ ವಿದ್ಯುತ್ ಮಾರ್ಗಗಳ ಸ್ಥಾಪನೆ ಸೇರಿದಂತೆ, 2,250 ಕೋಟಿ ರೂ. ವೆಚ್ಚದ 25 ಯೋಜನೆಗಳಿಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: 26 ರಫೇಲ್ ಯುದ್ಧ ವಿಮಾನ ಖರೀದಿ – ಭಾರತ ಫ್ರಾನ್ಸ್ ಮಧ್ಯೆ 63,000 ಕೋಟಿ ಡೀಲ್‌ಗೆ ಅನುಮೋದನೆ
ಮೂರು ಹೊಸ ಮೇಲ್ಸೇತುವೆಗಳು, ವಿವಿಧ ರಸ್ತೆ ಅಗಲೀಕರಣ ಕ್ರಮಗಳು, ಶಾಲಾ ನವೀಕರಣ ಕಾರ್ಯಗಳು ಹಾಗೂ ಶಿವಪುರ ಮತ್ತು ಉತ್ತರ ಪ್ರದೇಶದ ಕಾಲೇಜಿನಲ್ಲಿ ಎರಡು ಕ್ರೀಡಾಂಗಣಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಬಳಿಕ ರೋಹನಿಯಾದ ಮೆಹಂದಿಗಂಜ್‌ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮೋದಿ ಮಾತನಾಡಲಿದ್ದಾರೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಇವಿಎಂ ದುರ್ಬಳಕೆ, ಮಹಾರಾಷ್ಟ್ರ ಚುನಾವಣೆಯಲ್ಲಿ ಮೋಸ – ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಮಲ್ಲಿಕಾರ್ಜುನ ಖರ್ಗೆ
4,000 ಪೊಲೀಸ್ ಭದ್ರತೆ
ಪ್ರಧಾನಿ ಮೋದಿ ಅವರ ಭೇಟಿ ಹಿನ್ನೆಲೆ ಭದ್ರತೆಗಾಗಿ ಪೊಲೀಸ್ ಮತ್ತು ಅರೆಸೈನಿಕ ಪಡೆಗಳಿಂದ ಸುಮಾರು 4,000 ಸಿಬ್ಬಂದಿ ನಿಯೋಜಿಸಲಾಗುವುದು ಎಂದು ಪೊಲೀಸ್ ಆಯುಕ್ತ ಮೋಹಿತ್ ಅಗರ್ವಾಲ್ ಮತ್ತು ಭದ್ರತಾ ವಿಭಾಗದ ಎಡಿಜಿ ರಘುವೀರ್ ಲಾಲ್ ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಕೇಜ್ರಿವಾಲ್ ಕಟ್ಟಿಸಿದ ಶೀಶ್ ಮಹಲ್‌ಗೆ ಹೋಗೋಕೆ ಇಷ್ಟವಿಲ್ಲ – ಸಿಎಂ ಆಗಿ 50 ದಿನ ಕಳೆದ್ರೂ ರೇಖಾ ಗುಪ್ತಾಗೆ ಇನ್ನೂ ಅಧಿಕೃತ ನಿವಾಸವಿಲ್ಲ!