ರಾಜಪಥ್‍ನಿಂದ ಕರ್ತವ್ಯ ಪಥವಾಗಿ ಬದಲಾದ ದೆಹಲಿ ಐಕಾನಿಕ್ ರಸ್ತೆ ಹೇಗೆ ಅಭಿವೃದ್ಧಿಯಾಗಿದೆ ಗೊತ್ತಾ?

Public TV
2 Min Read
Kartavya Path

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಐಕಾನಿಕ್ ರಸ್ತೆ ರಾಜಪಥ್, ಸದ್ಯ ಕರ್ತವ್ಯ ಪಥವಾಗಿ ಬದಲಾಗಿರುವ ಹೊಸ ರಸ್ತೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ.

Kartavya Path 2

ಇಂದು ಸಂಜೆ ಏಳು ಗಂಟೆಗೆ ಈ ಕಾರ್ಯಕ್ರಮ ನಡೆಯಲಿದೆ. ಈ ವೇಳೆ ಇಂಡಿಯಾ ಗೇಟ್ ಬಳಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಅವರು ಅನಾವರಣಗೊಳಿಸಲಿದ್ದಾರೆ. ಸ್ವತಂತ್ರ ಪೂರ್ವಕ್ಕೂ ಮುನ್ನ ಕಿಂಗ್ಸ್‍ವೇ ಆಗಿದ್ದ ಈ ರಸ್ತೆಯನ್ನು ಸ್ವಾತಂತ್ರ್ಯದ ಬಳಿಕ ರಾಜಪಥ್ ಎಂದು ನಾಮಕರಣ ಮಾಡಲಾಗಿತ್ತು. ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಈ ಪ್ರದೇಶವನ್ನು ಅಭಿವೃದ್ಧಿಗೊಳಿಸಿ ಅದಕ್ಕೆ ಕರ್ತವ್ಯ ಪಥ್ ಎಂದು ನರೇಂದ್ರ ಮೋದಿ ಸರ್ಕಾರ ಮರು ನಾಮಕರಣ ಮಾಡಿದೆ.

MODI 1 1

ಈ ಹಿಂದೆ ಸ್ವಾತಂತ್ರ್ಯ ದಿನಾಚರಣೆ ದಿನದಂದು ನರೇಂದ್ರ ಮೋದಿ ಹೇಳಿದಂತೆ ಅಮೃತೋತ್ಸವ ಕಾಲ ಘಟ್ಟದಲ್ಲಿ ಎರಡನೇ ಪಂಚಪ್ರಾಣದ ಭಾಗವಾಗಿ ವಸಾಹತು ಶಾಹಿ ಮನಸ್ಥಿತಿಯ ಕುರುಹುಗಳನ್ನು ತೆಗೆದು ಹಾಕುವುದು ಇದರ ಉದ್ದೇಶವೂ ಆಗಿದೆ. ಸೆಂಟ್ರಲ್ ವಿಸ್ಟಾ ಯೋಜನೆಯ ಭಾಗವಾಗಿ ಈ ಯೋಜನೆ ರೂಪಿಸಲಾಗಿದೆ. ಹಲವು ಸಮಸ್ಯೆಗಳಿದ್ದ ರಾಜಪಥ್ ರಸ್ತೆಯನ್ನು ಆಧುನಿಕರಿಸಿ ಅಭಿವೃದ್ಧಿ ಪಡಿಸಲಾಗಿದೆ. ಇದನ್ನೂ ಓದಿ: ಉಗ್ರ ಯಾಕೂಬ್ ಮೆಮನ್ ಸಮಾಧಿ ಸೌಂದರ್ಯೀಕರಣ – ಉದ್ಧವ್‌ ವಿರುದ್ಧ ಬಿಜೆಪಿ ಕಿಡಿ

ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‍ಗೆ ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದ್ದು, ಗಣರಾಜ್ಯೋತ್ಸವದ ಪರೇಡ್ ನಡೆಯುವ ಪ್ರಮುಖ ರಸ್ತೆಯಾಗಿದೆ. ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಈ ಪ್ರದೇಶದಲ್ಲಿ ಕುಡಿಯುವ ನೀರು, ಪಾರ್ಕಿಂಗ್, ಶೌಚಾಲಯ ಸೇರಿ ಹಲವು ಮೂಲಭೂತ ಸೌಕರ್ಯಗಳ ಕೊರತೆ ಇತ್ತು, ಇದನ್ನು ಈಗ ಅಭಿವೃದ್ಧಿಪಡಿಸಲಾಗಿದೆ.

Kartavya Path 1

ಒಟ್ಟು 19 ಎಕರೆ ಭೂ ಪ್ರದೇಶವನ್ನು ಅಭಿವೃದ್ಧಿಪಡಿಸಲಾಗಿದೆ, ರಸ್ತೆಯ ಎರಡು ಬದಿಯಲ್ಲಿರುವ ಹಸಿರು ಹೊದಿಕೆಯ ಆಸನ 3.5 ಲಕ್ಷ ಚದರ ಮೀಟರ್‌ಗಳಿಂದ 3.9 ಲಕ್ಷ ಚದರ ಮೀಟರ್‌ಗೆ ಹೆಚ್ಚಿಸಿದೆ, ಗಣರಾಜ್ಯೋತ್ಸವದ ಪರೇಡ್ ಅನುಕೂಲವಾಗುವಂತೆ ಸ್ಥಳಾವಕಾಶ ಹೆಚ್ಚಿಸಿದೆ, ವಿಶೇಷ ಹಾಸನದ ವ್ಯವಸ್ಥೆಯೂ ಮಾಡಲಾಗಿದೆ. ಇದನ್ನೂ ಓದಿ: ಉಮೇಶ್‌ ಕತ್ತಿ ಸಮಾಧಿಗೆ ಪುತ್ರ, ಅಳಿಯನಿಂದ ಪೂಜೆ- ಗುಟ್ಕಾ ಪ್ಯಾಕೆಟ್ ಇಟ್ಟು ನಮನ

ಈ ರಸ್ತೆಯ ಎರಡು ಬದಿಯಲ್ಲಿ ಮಳೆ ನೀರು ಕೊಯ್ಲು ಜೊತೆಗೆ ಹೊಸ ನೀರಾವರಿ ವ್ಯವಸ್ಥೆಯನ್ನು ಒಳಗೊಂಡಿದೆ. ಒಳಚರಂಡಿ ನೀರು ಮರು ಬಳಕೆ ಘಟಕ, ಸಾರ್ವಜನಿಕ ಶೌಚಾಲಯಗಳು ಮತ್ತು ಕುಡಿಯುವ ನೀರಿನ ಸೌಲಭ್ಯಗಳು ಮಾಡಿದೆ. 1225 ವಾಹನಗಳು, 40 ಬಸ್‍ಗಳ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆ ಮಾಡಿದೆ. ರಸ್ತೆ ಉದ್ದಕ್ಕೂ 40 ಮಾರಾಟ ಮಳಿಗೆಗಳನ್ನು ನಿರ್ಮಿಸಿದ್ದು, ರಾಜ್ಯವಾರು ವಿಶೇಷತೆ ಆದ್ಯತೆ ನೀಡಿದೆ.

ಈ ಪ್ರದೇಶದಲ್ಲಿರುವ ಕಾಲುವೆಗಳ ಅಭಿವೃದ್ಧಿಯಾಗಿದ್ದು, ಬೋಟಿಂಗ್ ವ್ಯವಸ್ಥೆ ಕಲ್ಪಿಸಿದೆ. ಸೇತುವೆಗಳು, 15.5 ಕಿಮೀ ಉದ್ದದ ಕೆಂಪು ಗ್ರ್ಯಾನೈಟ್‍ನ ವಾಕ್ ವೇಗಳನ್ನು ನಿರ್ಮಿಸಿದೆ. ರಾಷ್ಟ್ರಪತಿ ಭವನದ ಭಾಗದಿಂದ ಇಂಡಿಯಾ ಗೇಟ್, ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ತೆರಳಲು ಅಂಡರ್ ಪಾಸ್ ಮಾಡಲಾಗಿದೆ. ಬೆಳಕು, ಭದ್ರತೆ ಹಾಗೂ ಸ್ವಚ್ಛತೆಗೆ ಹೆಚ್ಚುವರಿ ಸಿಬ್ಬಂದಿಗಳ ನೇಮಕ ಮಾಡಲಾಗಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *