LatestLeading NewsMain PostNational

ಉಗ್ರ ಯಾಕೂಬ್ ಮೆಮನ್ ಸಮಾಧಿ ಸೌಂದರ್ಯೀಕರಣ – ಉದ್ಧವ್‌ ವಿರುದ್ಧ ಬಿಜೆಪಿ ಕಿಡಿ

ಮುಂಬೈ: ಮುಂಬೈ ಸರಣಿ ಸ್ಫೋಟದ ಅಪರಾಧಿ ಯಾಕೂಬ್ ಮೆಮನ್(Yakub Memon) ಸಮಾಧಿಯನ್ನು ಅಮೃತಶಿಲೆ, ಹೂವುಗಳು ಮತ್ತು ಎಲ್ಇಡಿ ದೀಪಗಳಿಂದ ಅಲಂಕರಿಸಿದ ಫೋಟೋ ವೈರಲ್‌ ಆಗಿದೆ.

ಫೋಟೋ ವೈರಲ್‌ ಆದ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ಬಿಜೆಪಿ ಶಿವಸೇನೆ ವಿರುದ್ಧ ಕಿಡಿಕಾರಿದೆ. ಉದ್ಧವ್‌ ಠಾಕ್ರೆ(Uddhav Thackeray) ಸಿಎಂ ಆಗಿದ್ದಾಗ ಸಮಾಧಿ(Grave) ಸೌಂದರ್ಯೀಕರಣ ಕಾಮಗಾರಿ ನಡೆಸಲಾಗಿತ್ತು ಎಂದು ಆರೋಪಿಸಿದೆ.

ಬಿಜೆಪಿ ಶಾಸಕ ರಾಮ್ ಕದಮ್ ಅವರು, ಪಾಕಿಸ್ತಾನದ ಆದೇಶದ ಮೇರೆಗೆ 1993ರಲ್ಲಿ ಬಾಂಬ್ ಸ್ಫೋಟವನ್ನು ನಡೆಸಿದ ಭಯೋತ್ಪಾದಕ ಯಾಕೂಬ್ ಮೆಮನ್ ಸಮಾಧಿಯನ್ನು ಸುಂದರಗೊಳಿಸಲಾಗಿದೆ. ಉದ್ಧವ್‌ ಠಾಕ್ರೆ ಸಿಎಂ ಆಗಿದ್ದ ಅವಧಿಯಲ್ಲಿ ಸಮಾಧಿಯ ಸೌಂದರ್ಯೀಕರಣ ನಡೆದಿದೆ. ಇದೇನಾ ಅವರ ಮುಂಬೈ ಪ್ರೀತಿ? ಇದೇನಾ ಅವರ ದೇಶಪ್ರೇಮ? ಶರದ್ ಪವಾರ್ ಮತ್ತು ರಾಹುಲ್ ಗಾಂಧಿ ಜೊತೆಗೆ ಉದ್ಧವ್ ಠಾಕ್ರೆ ಮುಂಬೈ ಜನರಲ್ಲಿ ಕ್ಷಮೆಯಾಚಿಸಬೇಕು” ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಉಮೇಶ್‌ ಕತ್ತಿ ಸಮಾಧಿಗೆ ಪುತ್ರ, ಅಳಿಯನಿಂದ ಪೂಜೆ- ಗುಟ್ಕಾ ಪ್ಯಾಕೆಟ್ ಇಟ್ಟು ನಮನ

ಫೋಟೋ ವೈರಲ್‌ ಆದ ಬೆನ್ನಲ್ಲೇ ಹ್ಯಾಲೊಜೆನ್ ಲೈಟ್‌ಗಳನ್ನು ಮಾರ್ಚ್‌ಗೆ ಮೊದಲು ಇರಿಸಲಾಗಿತ್ತು ಮತ್ತು ಅವುಗಳನ್ನು ತೆಗೆದುಹಾಕಲಾಗುವುದು ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

257 ಮಂದಿಯನ್ನು ಬಲಿತೆಗೆದುಕೊಂಡ ಮತ್ತು 723 ಮಂದಿ ಗಾಯಗೊಂಡಿದ್ದ 1993ರ ಬಾಂಬೆ ಸ್ಫೋಟದ ಪ್ರಮುಖ ಅಪರಾಧಿ ಯಾಕೂಬ್ ಮೆಮನ್‌ ಸುಪ್ರೀಂ ಕೋರ್ಟ್‌ ಗಲ್ಲು ಶಿಕ್ಷೆ ವಿಧಿಸಿತ್ತು. ನಾಗ್ಪುರ ಕೇಂದ್ರ ಕಾರಾಗೃಹದಲ್ಲಿ 2015ರ ಜುಲೈ 30ರ 53ನೇ ಹುಟ್ಟುಹಬ್ಬದಂದು ಮೆಮನ್‌ನನ್ನು ಗಲ್ಲಿಗೇರಿಸಲಾಗಿತ್ತು. ಬಳಿಕ ಮೃತ ದೇಹವನ್ನು ಮುಂಬೈನ ಬಡಾ ಕಬರ್‌ಸ್ತಾನದಲ್ಲಿ ಅಂತ್ಯಸಂಸ್ಕಾರ ಮಾಡಲಾಗಿತ್ತು.

Live Tv

Leave a Reply

Your email address will not be published. Required fields are marked *

Back to top button