ನವದೆಹಲಿ: ಸುಪ್ರೀಂ ಕೋರ್ಟ್‌ಗೆ (Supreme Court) 75 ವರ್ಷದ ಸಂಭ್ರಮಾಚರಣೆಯ (Silver Jubilee) ಮಹೋತ್ಸವದ ಕಾರ್ಯಕ್ರಮವನ್ನು ನಾಳೆ (ಜ.28) ಪ್ರಧಾನಿ ನರೇಂದ್ರ ಮೋದಿ ( Narendra Modi) ಉದ್ಘಾಟನೆ ಮಾಡಲಿದ್ದಾರೆ.
ಸುಪ್ರೀಂ ಕೋರ್ಟ್ ಪ್ರಾರಂಭವಾಗಿ ಸುಮಾರು 75 ವರ್ಷಗಳು ಪೂರ್ಣಗೊಂಡಿದೆ. ಈ ಹಿನ್ನೆಲೆ ನಾಳೆ ಸುಪ್ರೀಂ ಕೋರ್ಟ್ ಅವರಣದಲ್ಲಿ ವಜ್ರ ಮಹೋತ್ಸವದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಲಾಗಿದ್ದಾರೆ. ಕೋರ್ಟ್‌ನ ಹಲವು ಹೊಸ ತಂತ್ರಜ್ಞಾನವನ್ನು ಪರಿಚಯಿಸಿದ್ದು, ಅದನ್ನು ಕೂಡ ಲೋಕಾರ್ಪಣೆ ಮಾಡಲಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಜೀವಂತವಾಗಿದ್ರೆ ಶಾಮನೂರು ಶಿವಶಂಕರಪ್ಪರನ್ನ ಸಸ್ಪೆಂಡ್ ಮಾಡಲಿ: ಹೆಚ್.ವಿಶ್ವನಾಥ್
Advertisement
Advertisement
75 ವರ್ಷದ ಸಂಭ್ರಮಾಚರಣೆಯ ಹಿನ್ನೆಲೆ ಮೋದಿಯವರು ನಾಗರಿಕ ಕೇಂದ್ರಿತ ಮಾಹಿತಿ ಮತ್ತು ತಂತ್ರಜ್ಞಾನದ ಉಪಕ್ರಮಗಳನ್ನು ಒಳಗೊಂಡಿರುವ ಡಿಜಿಟಲ್ ಅಪ್ಲಿಕೇಶನ್‌ಗಳನ್ನು ಲಂಚ್ ಮಾಡಲಿದ್ದಾರೆ. ಡಿಜಿಟಲ್ ಸುಪ್ರೀಂ ಕೋರ್ಟ್ ವರದಿಗಳು (ಡಿಜಿ (ಎಸ್‌ಸಿಆರ್)), ಡಿಜಿಟಲ್ ಕೋರ್ಟ್ 2.0 ಮತ್ತು ಸುಪ್ರೀಂ ಕೋರ್ಟ್ ಹೊಸ ಜಾಲತಾಣ (ವೆಬ್‌ಸೈಟ್) ಅನ್ನು ಪ್ರಧಾನಿ ನಾಳೆ ಪರಿಚಯಿಸಲಿದ್ದಾರೆ. ಇದನ್ನೂ ಓದಿ: ನನ್ನನ್ನು ರಾಷ್ಟ್ರೀಯ ಅಧ್ಯಕ್ಷ ಅಂತಿದ್ದಾರೆ, ಪುಣ್ಯಕ್ಕೆ ರಾಷ್ಟ್ರಪತಿ ಎಂದಿಲ್ಲ: ಪ್ರಹ್ಲಾದ್ ಜೋ
Advertisement
Advertisement
ಏನಿದು ಡಿಜಿಟಲ್ ಸುಪ್ರೀಂ ಕೋರ್ಟ್ ವರದಿ (ಎಸ್‌ಸಿಆರ್)?
ಸುಪ್ರೀಂ ಕೋರ್ಟ್‌ನ ಯಾವುದೇ ತೀರ್ಪುಗಳನ್ನು ದೇಶದ ನಾಗರಿಕರು ಎಲೆಕ್ಟ್ರಾನಿಕ್ ಸ್ವರೂಪದಲ್ಲಿ ಉಚಿತವಾಗಿ ಪಡೆಯಬಹುದಾಗಿದೆ. 1950 ರಿಂದ ಸುಪ್ರೀಂ ಕೋರ್ಟ್ ವರದಿಗಳನ್ನು 519 ಸಂಪುಟಗಳಲ್ಲಿ ದಾಖಲಿಸಲಾಗಿದೆ. 36,308 ಪ್ರಕರಣಗಳ ದಾಖಲೆ ಅದರಲ್ಲಿದೆ. ಇದೆಲ್ಲವೂ ಡಿಜಿಟಲ್ ಸ್ವರೂಪದಲ್ಲಿ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಇದನ್ನೂ ಓದಿ: ನಿಗಮ-ಮಂಡಳಿ ಬೇಡವೇ ಬೇಡ, ನನಗೆ ಸಚಿವ ಸ್ಥಾನ ಕೊಡಿ: ಶಾಸಕ ಸುಬ್ಬಾರೆಡ್ಡಿ ಪಟ್ಟು
ಜೊತೆಗೆ ಪ್ರಧಾನಿ ಮೋದಿ ಅವರು ಸುಪ್ರೀಂ ಕೋರ್ಟ್ನ ಹೊಸ ಡಿಜಿಟಲ್ ವೆಬ್‌ಸೈಟ್ ಅನ್ನು ಕೂಡ ಲೋಕಾರ್ಪಣೆ ಮಾಡಲಿದ್ದಾರೆ. ಹೊಸ ವೆಬ್‌ಸೈಟ್ ದ್ವಿಭಾಷಾ ಸ್ವರೂಪದಲ್ಲಿ(ಅಂಗ್ಲ ಮತ್ತು ಹಿಂದಿ ಭಾಷೆ) ಇರಲಿದೆ. ಇದನ್ನೂ ಓದಿ: ಎಲ್ಲರ ಅಭಿಪ್ರಾಯ ಪಡೆದು, ಸುದೀರ್ಘ ಚರ್ಚೆ ಬಳಿಕವೇ ನಿಗಮ-ಮಂಡಳಿಗಳಿಗೆ ನೇಮಕ ಮಾಡಲಾಗಿದೆ: ಡಿಕೆಶಿ