ಸಾಂದರ್ಭಿಕ ಚಿತ್ರ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ತಮ್ಮ 68ನೇ ವರ್ಷದ ಹುಟ್ಟುಹಬ್ಬವನ್ನು ಇಂದು ತಮ್ಮ ವಾರಾಣಾಸಿ ಕ್ಷೇತ್ರದ ಶಾಲಾಮಕ್ಕಳೊಂದಿಗೆ ಸರಳವಾಗಿ ಆಚರಿಸಿಕೊಳ್ಳುತ್ತಾರೆ ಎಂದು ಪ್ರಧಾನಿ ಕಾರ್ಯಾಲಯ ಮಾಹಿತಿ ನೀಡಿದೆ.
Advertisement
ಗುಜರಾತಿನ ಮೆಹ್ಸಾನ ಜಿಲ್ಲೆಯ ವಡ್ನಗರ್ ಎಂಬ ಸಣ್ಣ ಹಳ್ಳಿಯಿಂದ ನರೇಂದ್ರ ಮೋದಿ ಅವರ ಜೀವನ ಪಯಣ ಪ್ರಾರಂಭವಾಗಿದೆ. 1950ರ ಸೆಪ್ಟೆಂಬರ್ 17 ನೇ ತಾರೀಖಿನಂದು ದಾಮೋದರ್ ದಾಸ ಮೋದಿ ಮತ್ತು ಹೀರಾಮೋದಿ ಅವರುಗಳ 6 ಮಕ್ಕಳಲ್ಲಿ ಮೂರನೆಯವರಾಗಿ ಜನಿಸಿ ಸ್ವತಂತ್ರ ಭಾರತದಲ್ಲಿ ಜನಿಸಿದ ಮೊದಲ ಪ್ರಧಾನ ಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
Advertisement
Advertisement
ಪ್ರಧಾನಿ ಕಾರ್ಯಾಲಯದ ಮಾಹಿತಿಗಳ ಪ್ರಕಾರ, ಪ್ರಧಾನಿ ನರೇಂದ್ರ ಮೋದಿಯವರು ಮೊದಲು ಕಾಶಿ ವಿಶ್ವನಾಥ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದುಕೊಳ್ಳಲಿದ್ದಾರೆ. ನಂತರ ತಮ್ಮ ಕ್ಷೇತ್ರವಾದ ವಾರಾಣಾಸಿಯ ಶಾಲಾ ಮಕ್ಕಳೊಂದಿಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಬಳಿಕ ತಮ್ಮ ಜೀವನದ 35 ನಿಮಿಷದ `ಚಲೋ ಜೀತೆ ಹೈನ್’ ಕಿರುಚಿತ್ರವನ್ನು ಮಕ್ಕಳೊಂದಿಗೆ ವೀಕ್ಷಿಸಲಿದ್ದಾರೆ ಎಂದು ತಿಳಿದುಬಂದಿದೆ.
Advertisement
ವಾರಣಾಸಿಯಿಂದ ಗುಜರಾತ್‍ನ ಗಾಂಧಿನಗರಕ್ಕೆ ತೆರಳುವ ಅವರು ತಮ್ಮ 98 ವರ್ಷದ ತಾಯಿ ಹಿರಾಬೆನ್ ಅವರ ಆಶೀರ್ವಾದ ಪಡೆದುಕೊಳ್ಳಲಿದ್ದಾರೆ. ನಂತರ ಸರ್ದಾರ್ ಸರೋವರ್ ಜಲಾಶಯವನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ ಎನ್ನಲಾಗಿದೆ. ಪ್ರಧಾನಿ ಮೋದಿಯವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಹಣಕಾಸು ಸಚಿವ ಅರುಣ್ ಜೇಟ್ಲಿ, ಕಾಂಗ್ರೆಸ್, ಎಎಪಿ ಮುಖಂಡ ಅರವಿಂದ್ ಕೇಜ್ರಿವಾಲ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವು ಗಣ್ಯವ್ಯಕ್ತಿಗಳು ಪ್ರಧಾನಿಗಳ ಹುಟ್ಟುಹಬ್ಬಕ್ಕೆ ಶುಭಾಶಯವನ್ನು ಕೋರಿದ್ದಾರೆ.
Birthday greetings to our Prime Minister @narendramodi. Wish him a long life and many years of dedicated service to the people of the country #PresidentKovind
— President of India (@rashtrapatibhvn) September 17, 2018
We wish PM @narendramodi a Happy Birthday.
— Congress (@INCIndia) September 17, 2018
Warm birthday compliments to the dynamic & illustrious Prime Minister of India, Shri Narendra Modi ji. I wish him good health and a long life. May he continue to render for many more years his exceptional services to the nation and guide the country to its glory. @narendramodi
— Arun Jaitley (@arunjaitley) September 17, 2018
.@narendramodi A very happy birthday to Hon’ble Prime Minister. I wish him long and healthy life.
— Arvind Kejriwal (@ArvindKejriwal) September 17, 2018
Birthday greetings to Prime Minister @narendramodi ji
— Mamata Banerjee (@MamataOfficial) September 17, 2018
Warm greetings to Shri @narendramodi on his birthday. Under his leadership India has grown tremendously and became the 6th largest economy of the world. He is a man of vision and action who is working assiduously to fulfil the dream of New India. I wish him good health &long life
— Rajnath Singh (@rajnathsingh) September 17, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv