ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು I2U2(ಇಂಡಿಯಾ, ಇಸ್ರೇಲ್, ಯುಎಸ್‍ಎ, ಯುಎಇ) ಮೊದಲ ವರ್ಚುವಲ್ ಶೃಂಗಸಭೆಯಲ್ಲಿ ಇಂದು ಭಾಗಿಯಾಗಲಿದ್ದಾರೆ.
ಯುಎಸ್ ಅಧ್ಯಕ್ಷ ಜೋ ಬೈಡೆನ್, ಇಸ್ರೇಲ್ ಪಿಎಂ ಯೈರ್ ಲ್ಯಾಪಿಡ್ ಮತ್ತು ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
Advertisement
Advertisement
ಒಕ್ಕೂಟದ ಚೌಕಟ್ಟಿನಡಿಯಲ್ಲಿ ಆರ್ಥಿಕ ಸಹಕಾರವನ್ನು ಹೆಚ್ಚಿಸಲು ಜಂಟಿ ಆರ್ಥಿಕ ಯೋಜನೆಗಳ ಕುರಿತು ಈ ನಾಯಕರು ಚರ್ಚಿಸುವ ನಿರೀಕ್ಷೆಯಿದೆ. ಉಕ್ರೇನ್ ಸಂಘರ್ಷದಿಂದ ಉಂಟಾಗುವ ಜಾಗತಿಕ ಆಹಾರ ಮತ್ತು ಇಂಧನ ಬಿಕ್ಕಟ್ಟು ಕುರಿತು ಮಾತುಕತೆ ನಡೆಯಲಿದೆ. ಈ ಸಭೆಯು ಇಂದು ಸಂಜೆ 4 ಗಂಟೆಗೆ ನಡೆಯಲಿದೆ. 2021ರಲ್ಲಿ ‘I2U2’ ಅಸ್ತಿತ್ವಕ್ಕೆ ಬಂದಿದೆ. ಇದನ್ನೂ ಓದಿ: ಉತ್ತರ ಕೊರಿಯಾದೊಂದಿಗಿನ ಸಂಬಂಧವನ್ನು ಕಡಿತಗೊಳಿಸಿದ ಉಕ್ರೇನ್
Advertisement
Advertisement
‘ಐ2ಯು2’ ಚೌಕಟ್ಟಿನೊಳಗೆ ಸಂಭವನೀಯ ಜಂಟಿ ಯೋಜನೆಗಳ ಬಗ್ಗೆ ಚರ್ಚೆಯಾಗುತ್ತೆ. ಆಯಾ ಪ್ರದೇಶಗಳಲ್ಲಿ ವ್ಯಾಪಾರ ಮತ್ತು ಹೂಡಿಕೆಯಲ್ಲಿ ಆರ್ಥಿಕ ಪಾಲುದಾರಿಕೆಯನ್ನು ಬಲಪಡಿಸಲು ಪರಸ್ಪರ ಆಸಕ್ತಿಯ ಇತರ ಸಾಮಾನ್ಯ ಕ್ಷೇತ್ರಗಳ ಕುರಿತು ಎಲ್ಲ ನಾಯಕರು ಚರ್ಚಿಸುತ್ತಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.