Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮನ್ ಕಿ ಬಾತ್‌ನಲ್ಲಿ ಕಾರವಾರದ ವಾರ್‌ಶಿಪ್ ಮ್ಯೂಸಿಯಂ ಬಗ್ಗೆ ಮೋದಿ ಪ್ರಸ್ತಾಪ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಮನ್ ಕಿ ಬಾತ್‌ನಲ್ಲಿ ಕಾರವಾರದ ವಾರ್‌ಶಿಪ್ ಮ್ಯೂಸಿಯಂ ಬಗ್ಗೆ ಮೋದಿ ಪ್ರಸ್ತಾಪ

Latest

ಮನ್ ಕಿ ಬಾತ್‌ನಲ್ಲಿ ಕಾರವಾರದ ವಾರ್‌ಶಿಪ್ ಮ್ಯೂಸಿಯಂ ಬಗ್ಗೆ ಮೋದಿ ಪ್ರಸ್ತಾಪ

Public TV
Last updated: November 30, 2025 2:05 pm
Public TV
Share
2 Min Read
PM Modi Karwars Warship Museum
SHARE

ಕಾರವಾರ: ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಆಕಾಶವಾಣಿ ರೇಡಿಯೋ ಕಾರ್ಯಕ್ರಮದ ಮನ್‌ ಕಿ ಬಾತ್‌ನ (Mann Ki Baat) 128ನೇ ಸಂಚಿಕೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿರುವ (Karwar) ಭಾರತೀಯ ನೌಕಾಪಡೆಯ ಹೆಮ್ಮೆಯ ಯುದ್ಧನೌಕೆಯ ಮ್ಯೂಸಿಯಂ ಐಎನ್ಎಸ್ ಚಾಪೆಲ್ ಬಗ್ಗೆ ಪ್ರಸ್ತಾಪಿಸಿದ್ದಾರೆ.

ದೇಶದಲ್ಲಿ ಪ್ರವಾಸೋದ್ಯಮ ಹಾಗೂ ರಾಷ್ಟ್ರಭಕ್ತಿ ಬೆಳೆಸುವ ಉದ್ದೇಶದಿಂದ ನೌಕಾನೆಲೆಗೆ ಸಂಬಂಧಿಸಿದ ಕಾರವಾರ ಸೇರಿದಂತೆ ವಿವಿಧ ಮ್ಯೂಸಿಯಂ‌ಗಳಿಗೆ ಭೇಟಿ ನೀಡಿ ಎಂದು ಜನರಿಗೆ ಮೋದಿ ಕರೆ ನೀಡಿದ್ದಾರೆ. ಇದನ್ನೂ ಓದಿ: ಭಾರತದತ್ತ ವಿನಾಶಕಾರಿ ದಿತ್ವಾ ಚಂಡಮಾರುತ – ವೇಗ ಕಳೆದುಕೊಂಡ ಸೈಕ್ಲೋನ್; ಭಾರಿ ಮಳೆ ಸಾಧ್ಯತೆ

ಅಂದಹಾಗೆ, ರಷ್ಯಾ ನಿರ್ಮಿತ ಈ ಯುದ್ಧನೌಕೆ 1976 ರಲ್ಲಿ ವಿಶಾಖಪಟ್ಟಣಂ ನೌಕಾನೆಲೆಗೆ ಆಗಮಿಸಿತ್ತು. ಸುಮಾರು 375 ಟನ್ ತೂಕದ ಯುದ್ಧನೌಕೆ ಸಾಕಷ್ಟು ವಿಶೇಷತೆಯನ್ನು ಹೊಂದಿತ್ತು. ಗಂಟೆಗೆ 70 ಕಿಲೋಮೀಟರ್ ವೇಗವಾಗಿ ಸಾಗುವ ಶಕ್ತಿ ಹೊಂದಿದ್ದ ಚಾಪೆಲ್ ಯುದ್ಧನೌಕೆಯಲ್ಲಿ ನಾಲ್ಕು ಕ್ಷಿಪಣಿನಾಶಕ ಹಾಗೂ 2 ವಿಮಾನ ನಾಶಕಗಳು ಸದಾ ಸನ್ನದ್ಧವಾಗಿ ಕಾರ್ಯನಿರ್ವಹಿಸುತ್ತಿದ್ದವು. ಇನ್ನು 4 ಕಿಲೋಮೀಟರ್ ದೂರದ ವಿಮಾನಗಳನ್ನು ಹೊಡೆದುರುಳಿಸುವ ಶಕ್ತಿ ಇದ್ದ ಚಾಪೆಲ್ ಯುದ್ಧನೌಕೆ ಸತತವಾಗಿ 29 ವರ್ಷಗಳ ಕಾಲ ಕಡಲಿನಲ್ಲಿ ದೇಶ ರಕ್ಷಣೆಗಾಗಿ ಸೇವೆಯನ್ನು ಸಲ್ಲಿಸಿತ್ತು.

ಕಳೆದ 2005ರಲ್ಲಿ ತನ್ನ ಸೇವೆಯಿಂದ ನಿವೃತ್ತಿಯಾಗಿದ್ದ ಈ ಚಾಪೆಲ್ ನೌಕೆಯನ್ನು ನಂತರ ಕಾರವಾರಕ್ಕೆ ಕೊಡಲು ತೀರ್ಮಾನಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಚಾಪೆಲ್ ಯುದ್ದ ನೌಕೆಯನ್ನು ಪಡೆದ ಉತ್ತರ ಕನ್ನಡ ಜಿಲ್ಲಾಡಳಿತ ವಾರ್‌ಶಿಪ್ ಮ್ಯೂಸಿಯಂ (Warship Museum) ಆಗಿ ಪರಿವರ್ತನೆ ಮಾಡಿದೆ. ಐಎನ್ಎಸ್ ಚಾಪೆಲ್ ಯುದ್ಧನೌಕೆ 2006ರ ನ.7 ರಂದು ಕಾರವಾರದ ಟ್ಯಾಗೂರ್ ಕಡಲತೀರಕ್ಕೆ ಕಾಲಿಟ್ಟು ಸಾರ್ವಜನಿಕ ವೀಕ್ಷಣೆಗೆ ಮ್ಯೂಸಿಯಂ ಮೂಲಕ ತನ್ನ ಕಾರ್ಯವನ್ನು ಪ್ರಾರಂಭಿಸಿತ್ತು. ಕಾರವಾರಕ್ಕೆ ನೌಕೆ ತಂದು ಸಾಕಷ್ಟು ವರ್ಷಗಳಾಗಿದ್ದು, ಇದರ ನಿರ್ವಹಣೆಗಾಗಿ ಉತ್ತರ ಕನ್ನಡ ಜಿಲ್ಲಾಡಳಿತ ಸುಮಾರು 45 ಲಕ್ಷ ರೂ. ವೆಚ್ಚ ಮಾಡಿ ನೌಕೆಯನ್ನು ಮತ್ತೆ ರಿಪೇರಿ ಮಾಡುವ ಕೆಲಸ ಮಾಡಿದೆ.‌ ಇದನ್ನೂ ಓದಿ: ಕುಮಾರಸ್ವಾಮಿಗೂ ನಾನು ಪ್ರಾಮಾಣಿಕವಾಗಿದ್ದೆ, ನನ್ನ ಪಕ್ಷ ನಿಷ್ಠೆ ನನ್ನ ಆತ್ಮ ಸಾಕ್ಷಿಗೆ ಗೊತ್ತು: ಡಿಕೆಶಿ

ನೌಕೆಗೆ ಪ್ರತಿನಿತ್ಯ ನೂರಾರು ಪ್ರವಾಸಿಗರು ಆಗಮಿಸುತ್ತಿದ್ದು, ಕಳೆದ 19 ವರ್ಷಗಳಲ್ಲಿ ಲಕ್ಷಕ್ಕೂ ಅಧಿಕ ಜನ ಈ ನೌಕೆಯ ಮಾಹಿತಿಯನ್ನು ಪಡೆದಿದ್ದಾರೆ. ನೌಕೆ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ನೌಕೆಯಲ್ಲಿನ ಕಾರ್ಯಚಟುವಟಿಕೆ, ನೌಕೆಯ ಸಿಬ್ಬಂದಿ ಯಾವ ರೀತಿ ಜೀವನಶೈಲಿ ನಡೆಸುತ್ತಿದ್ದರು, ಯಾವ ರೀತಿ ಕಡಲಿನಲ್ಲಿ ಕಾರ್ಯನಿರ್ವಹಿಸುತ್ತಿತ್ತು, ಜೊತೆಗೆ ಭಾರತೀಯ ನೌಕಾಪಡೆಯ ಕಾರ್ಯಚಟುವಟಿಕೆ ಬಗ್ಗೆ ಮಾಹಿತಿಯನ್ನು ಒದಗಿಸುವ ಕಾರ್ಯವನ್ನು ಮಾಡಲಾಗುತ್ತಿದೆ.

TAGGED:karwarmann ki baatPM ModiWarship Museumಕಾರವಾರಪಿಎಂ ಮೋದಿಮನ್ ಕಿ ಬಾತ್ವಾರ್‌ಶಿಪ್‌ ಮ್ಯೂಸಿಯಂ
Share This Article
Facebook Whatsapp Whatsapp Telegram

Cinema news

Duniya Vijay 1
ಝಾಂಬಿ ಡ್ರಗ್ಸ್ ಕೇಸಲ್ಲಿ ನಟ ದುನಿಯಾ ವಿಜಯ್‌ಗೆ ಸಂಕಷ್ಟ – ಡಿಲೀಟ್ ವಿಡಿಯೋ ರಿಟ್ರೀವ್‌ಗಾಗಿ ಇನ್‌ಸ್ಟಾಗೆ ಪೊಲೀಸರ ಪತ್ರ
Bengaluru City Cinema Districts Karnataka Latest Sandalwood Top Stories
TVK Vijay
ಅಫಿಡವಿಟ್‌ನಲ್ಲಿ 105 ಕೋಟಿ ವ್ಯತ್ಯಾಸ – ನಾಮಪತ್ರ ತಿರಸ್ಕಾರ ಆತಂಕದಲ್ಲಿ ವಿಜಯ್‌
Cinema Court Latest Main Post National
Maharashtra Man Arrest
ಮಹಾರಾಷ್ಟ್ರ ‘ಲವ್ ಟ್ರ್ಯಾಪ್’ ಸಂತ್ರಸ್ತೆ ಆತ್ಮಹತ್ಯೆಗೆ ಯತ್ನ – ಮತ್ತೋರ್ವ ಆರೋಪಿ ಅಂದರ್
Cinema Latest National Top Stories
Atlee
ಹೆಣ್ಣು ಮಗು ಜನಿಸಿದ ಸಂಭ್ರಮದಲ್ಲಿ ನಿರ್ದೇಶಕ ಅಟ್ಲೀ ದಂಪತಿ
Cinema Latest Top Stories

You Might Also Like

Pakistan PM Shehbaz Sharif gets trolled over post on US Iran ceasefire Donald Trump
Latest

Ceasefire | ಪಾಕ್‌ ಮನವಿ ಮೇರೆಗೆ ಅಮೆರಿಕ -‌ ಇರಾನ್ ಕದನ ವಿರಾಮ ವಿಸ್ತರಣೆ: ಟ್ರಂಪ್‌

Public TV
By Public TV
3 minutes ago
Modi 2
Latest

One Year Of Pahalgam Attack | ಭಯೋತ್ಪಾದನೆಗೆ ಭಾರತ ಎಂದಿಗೂ ತಲೆಬಾಗುವುದಿಲ್ಲ: ಪ್ರಧಾನಿ ಮೋದಿ

Public TV
By Public TV
30 minutes ago
Bharath Bhushan Pahalagam Attack
Bengaluru City

ಪಹಲ್ಗಾಮ್ ದಾಳಿಗೆ ಒಂದು ವರ್ಷ – ಭರತ್ ಭೂಷಣ್ ನೆನೆದು ಪತ್ನಿ, ಪೋಷಕರು ಕಣ್ಣೀರು

Public TV
By Public TV
38 minutes ago
Baisaran Valley 2
Latest

ಪಹಲ್ಗಾಮ್‌ ನರಮೇಧ ನಡೆದ ಬೈಸರನ್‌ ಕಣಿವೆಯನ್ನ ʻಮಿನಿ ಸ್ವಿಟ್ಜರ್ಲೆಂಡ್ʼ ಅನ್ನೋದೇಕೆ? ಹಿಂದೂಗಳಿಗೆ ಏಕೆ ವಿಶೇಷ?

Public TV
By Public TV
49 minutes ago
pahalgam Terror 4
Latest

20 ನಿಮಿಷಗಳಲ್ಲೇ ನರಮೇಧ ನಡೆದಿದ್ದು ಹೇಗೆ? – ಈಗಲೂ ಕಣ್ಣಿಗೆ ಕಟ್ಟಿದಂತಿದೆ ಬೀಭತ್ಸ ದೃಶ್ಯ!

Public TV
By Public TV
60 minutes ago
Nelamangala Lorry Accident
Bengaluru City

ಪಂಚರ್ ಆಗಿ ನಿಂತಿದ್ದ ಲಾರಿಗೆ ಮತ್ತೊಂದು ಲಾರಿ ಡಿಕ್ಕಿ – ಚಾಲಕನ ಎರಡೂ ಕಾಲುಗಳು ಕಟ್

Public TV
By Public TV
1 hour ago

Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?