ಗದಗ: ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಪ್ರಯುಕ್ತ ಪಕ್ಷದ ಪರ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದಾರೆ. ಇಂದು ಗದಗ ನಗರದ ತೋಂಟದಾರ್ಯ ಎಂಜಿನಿಯರಿಂಗ್ ಕಾಲೇಜ್ ಪಕ್ಕದ ಜಮೀನಿನಲ್ಲಿ ನಡೆದ ಪ್ರಚಾರ ಸಮಾವೇಶದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ರು.
2007 ರಲ್ಲಿ ಗೋವಾ ರಾಜ್ಯದಲ್ಲಿ ಚುನಾವಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಕರ್ನಾಟಕಕ್ಕೆ ಮಹದಾಯಿ ನೀರನ್ನು ಕೊಡುವುದಿಲ್ಲ ಎಂದಿದ್ದರು. ಗೋವಾದಲ್ಲಿ ಕಾಂಗ್ರೆಸ್ ನಿರ್ನಾಮವಾಗಿದ್ದು, ಕರ್ನಾಟಕದಲ್ಲಿ ಬಂದು ಸಮಸ್ಯೆ ಸೃಷ್ಟಿ ಮಾಡಿದ್ದಾರೆ. ಮಹದಾಯಿ ಸಮಸ್ಯೆಯನ್ನ ಮುಂದೆ ಹಾಕುವ ಪ್ರವೃತ್ತಿ ನಮ್ಮದಲ್ಲ. ನೀರು ಪ್ರತಿಯೊಬ್ಬರ ಹಕ್ಕು, ಮಹದಾಯಿ ಸಮಸ್ಯೆ ಬಗೆಹರಿಸುವ ಸಂಕಲ್ಪ ಮಾಡ್ತಿದ್ದೇನೆ ಅಂದ್ರು.
Advertisement
Advertisement
2007ರಲ್ಲಿ ಸೋನಿಯಾ ಗಾಂಧಿ ಏನು ಹೇಳಿದ್ರು ಅಂತಾ ಸಿಎಂ ಸಿದ್ದರಾಮಯ್ಯರಿಗೆ ಗೊತ್ತಿಲ್ಲ. ಕಾರಣ ಸಿಎಂ ಕಾಂಗ್ರೆಸ್‍ನಲ್ಲಿ ಇರಲಿಲ್ಲ, ಆದ್ರೆ ಯಾವ ದಳದಲ್ಲಿ ಇದ್ರೆಂಬುದು ಅವರಿಗೂ ನೆನಪಿರಲಿಕ್ಕಿಲ್ಲ. ಯಾಕಂದ್ರೆ ಪಕ್ಷ ಬದಲಿಸೋದು ಸಿದ್ದರಾಮಯ್ಯರ ರೂಢಿಯಾಗಿದೆ ಅಂತಾ ವಾಗ್ದಾಳಿ ನಡೆಸಿದ್ರು.
Advertisement
ಈ ಹಿಂದೆ ಕರ್ನಾಟಕ, ಗೋವಾ ಮತ್ತು ಕೇಂದ್ರದಲ್ಲಿಯೂ ಕಾಂಗ್ರೆಸ್ ಸರ್ಕಾರಗಳಿದ್ದರೂ, ಮಹದಾಯಿ ಸಮಸ್ಯೆಯನ್ನು ಬಗೆಹರಿಸಲಿಲ್ಲ. ಮಹದಾಯಿ ವಿಷಯವನ್ನು ರಾಜಕೀಯವಾಗಿ ಬಳಸಿಕೊಂಡು ಅದನ್ನು ಟ್ರಿಬ್ಯೂನಲ್ ಗೆ ಹಾಕಲಾಯಿತು. ಈ ಸಮಸ್ಯೆ ಮುಂದಿನ ನಿಮ್ಮ ಪೀಳಿಗೆಗೂ ಮುಂದುವರೆಯಬಾರದು ಅಂತಾ ನಾನು ಆಶಿಸುತ್ತೇನೆ ಅಂತಾ ತಿಳಿಸಿದ್ರು.
Advertisement
PM Modi exposes Congress' hypocrisy on Mahadayi Water Dispute.#CongMahadayiHypocrisy pic.twitter.com/o696vAADe7
— BJP Karnataka (@BJP4Karnataka) May 5, 2018