ಹೈದರಾಬಾದ್: ಜಾಗತಿಕ ಉಪಗ್ರಹ ಉಡಾವಣಾ ವ್ಯವಸ್ಥೆಯಲ್ಲಿ ಭಾರತ ನಾಯಕನಾಗಿ ಹೊರಹೊಮ್ಮಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Modi) ತಿಳಿಸಿದ್ದಾರೆ.
ಹೈದರಾಬಾದ್‌ನಲ್ಲಿ ಪ್ರಮುಖ ಖಾಸಗಿ ಬಾಹ್ಯಾಕಾಶ ಕಂಪನಿ ಸ್ಕೈರೂಟ್‌ನ (Skyroot) ಇನ್ಫಿನಿಟಿ ಕ್ಯಾಂಪಸ್ ಅನ್ನು ವರ್ಚುವಲ್ ಆಗಿ ಉದ್ಘಾಟಿಸಿ ಮಾತನಾಡಿದ ಮೋದಿ, ಇಂದು ದೇಶವು ಬಾಹ್ಯಾಕಾಶ ಕ್ಷೇತ್ರದಲ್ಲಿ ಅಭೂತಪೂರ್ವ ಅವಕಾಶವನ್ನು ಕಾಣುತ್ತಿದೆ. ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ವಲಯವು ಮಹತ್ತರವಾದ ಪ್ರಗತಿಯನ್ನು ಸಾಧಿಸುತ್ತಿದೆ. ಸ್ಕೈರೂಟ್‌ನ ಇನ್ಫಿನಿಟಿ ಕ್ಯಾಂಪಸ್ ಹೊಸ ಚಿಂತನೆ, ನಾವೀನ್ಯತೆ ಮತ್ತು ಯುವ ಶಕ್ತಿಯ ಪ್ರತಿಬಿಂಬವಾಗಿದೆ. ನಮ್ಮ ಯುವಕರ ನಾವೀನ್ಯತೆ, ಉದ್ಯಮಶೀಲತೆ ಹೊಸ ಎತ್ತರವನ್ನು ಮುಟ್ಟುತ್ತಿವೆ. ಇಂದಿನ ಕಾರ್ಯಕ್ರಮವು ಭವಿಷ್ಯದಲ್ಲಿ ಭಾರತವು ಜಾಗತಿಕ ಉಪಗ್ರಹ ಉಡಾವಣಾ ಪರಿಸರ ವ್ಯವಸ್ಥೆಯಲ್ಲಿ ನಾಯಕನಾಗಿ ಹೊರಹೊಮ್ಮುತ್ತದೆ ಎಂದು ತೋರಿಸುತ್ತದೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 9 ಭಾಷೆಗಳಲ್ಲಿ ಭಾರತ ಸಂವಿಧಾನದ ಡಿಜಿಟಲ್ ಆವೃತ್ತಿ ಬಿಡುಗಡೆಗೊಳಿಸಿದ ರಾಷ್ಟ್ರಪತಿ ಮುರ್ಮು
ಭಾರತವು ಸೀಮಿತ ಸಂಪನ್ಮೂಲಗಳೊಂದಿಗೆ ತನ್ನ ಬಾಹ್ಯಾಕಾಶ ಪ್ರಯಾಣವನ್ನು ಪ್ರಾರಂಭಿಸಿತ್ತು. ಆದರೆ, ಅದರ ಸಂಕಲ್ಪವು ಜಾಗತಿಕ ಬಾಹ್ಯಾಕಾಶ ವಲಯದಲ್ಲಿ ಛಾಪು ಮೂಡಿಸಿದೆ. ದಶಕಗಳಿಂದ ಭಾರತದ ಬಾಹ್ಯಾಕಾಶ ಪ್ರಯಾಣಕ್ಕೆ ಹೊಸ ತಿರುವು ನೀಡಿರುವ ಇಸ್ರೋ ಕಾರ್ಯ ಶ್ಲಾಘನೀಯ ಎಂದು ಮೋದಿ ಮಾತನಾಡಿದ್ದಾರೆ.
ಭಾರತದ ಬಾಹ್ಯಾಕಾಶ ಪ್ರಯಾಣವು ಸೀಮಿತ ಸಂಪನ್ಮೂಲಗಳೊಂದಿಗೆ ಪ್ರಾರಂಭವಾಯಿತು. ಆದರೆ, ನಮ್ಮ ಮಹತ್ವಾಕಾಂಕ್ಷೆಗಳು ಎಂದಿಗೂ ಸೀಮಿತವಾಗಿರಲಿಲ್ಲ. ಸೈಕಲ್‌ನಲ್ಲಿ ರಾಕೆಟ್‌ನ ಒಂದು ಭಾಗವನ್ನು ಹೊತ್ತೊಯ್ಯುವುದರಿಂದ ಹಿಡಿದು ವಿಶ್ವದ ಅತ್ಯಂತ ವಿಶ್ವಾಸಾರ್ಹ ಉಡಾವಣಾ ವಾಹನದವರೆಗೆ, ಕನಸುಗಳನ್ನು ಸಂಪನ್ಮೂಲಗಳಿಂದ ಸಾಧಿಸಲಾಗುವುದಿಲ್ಲ. ಬದಲಿಗೆ ಸಂಕಲ್ಪದಿಂದ ಸಾಧಿಸಬಹುದು ಎಂದು ಭಾರತ ಸಾಬೀತುಪಡಿಸಿದೆ. ಭಾರತವು ವಿಶ್ವಾಸಾರ್ಹತೆ, ಸಾಮರ್ಥ್ಯ ಮತ್ತು ಮೌಲ್ಯದೊಂದಿಗೆ ತನ್ನದೇ ಆದ ಗುರುತನ್ನು ಸೃಷ್ಟಿಸಿದೆ. ದಶಕಗಳ ಕಾಲ ಭಾರತದ ಬಾಹ್ಯಾಕಾಶ ಪ್ರಯಾಣಕ್ಕೆ ಇಸ್ರೋ ಹೊಸ ಹಾರಾಟವನ್ನು ನೀಡಿತು ಎಂದು ಪ್ರಧಾನಿ ಬಣ್ಣಿಸಿದ್ದಾರೆ. ಇದನ್ನೂ ಓದಿ: ಬರ್ತಿದೆ `ಸೆನ್ಯಾರ್’ ಚಂಡಮಾರುತ – ತಮಿಳುನಾಡು, ಕೇರಳ ಸೇರಿ ಕೆಲ ರಾಜ್ಯಗಳಿಗೆ ಮಳೆ ಮುನ್ನೆಚ್ಚರಿಕೆ: IMD
ಇದೇ ವೇಳೆ ಮೋದಿ ಅವರು, ಸ್ಕೈರೂಟ್‌ನ ಮೊದಲ ಕಕ್ಷೆಯ ರಾಕೆಟ್ ವಿಕ್ರಮ್-I ಅನ್ನು ಅನಾವರಣಗೊಳಿಸಿದರು. ಇದು ಉಪಗ್ರಹಗಳನ್ನು ಕಕ್ಷೆಗೆ ಉಡಾಯಿಸುವ ಸಾಮರ್ಥ್ಯವನ್ನು ಹೊಂದಿದೆ. ಅತ್ಯಾಧುನಿಕ ಸೌಲಭ್ಯವು ಬಹು ಉಡಾವಣಾ ವಾಹನಗಳನ್ನು ವಿನ್ಯಾಸಗೊಳಿಸಲು, ಅಭಿವೃದ್ಧಿಪಡಿಸಲು, ಸಂಯೋಜಿಸಲು ಮತ್ತು ಪರೀಕ್ಷಿಸಲು ಸುಮಾರು 2,00,000 ಚದರ ಅಡಿ ಕಾರ್ಯಸ್ಥಳವನ್ನು ಹೊಂದಿರುತ್ತದೆ. ಪ್ರತಿ ತಿಂಗಳು ಒಂದು ಕಕ್ಷೆಯ ರಾಕೆಟ್ ಅನ್ನು ನಿರ್ಮಿಸುವ ಸಾಮರ್ಥ್ಯ ಹೊಂದಿರುತ್ತದೆ.

