– 25 ಕೋಟಿ ಜನ ಬಡತನದಿಂದ ಮುಕ್ತವಾಗಿದ್ದಾರೆ ಎಂದ ಪ್ರಧಾನಿ
– ಭಾರತದ ಬಗ್ಗೆ ಹಿಂದೆಂದೂ ಇಂತಹ ಸಕಾರಾತ್ಮಕ ಭಾವನೆ ಇರಲಿಲ್ಲ
ನವದೆಹಲಿ: ಕಳೆದ 10 ವರ್ಷಗಳಲ್ಲಿ ಭಾರತ ರೂಪಾಂತರಗೊಂಡಿದೆ. ಆದಾಯ, ಅವಕಾಶಗಳು ಹೆಚ್ಚಾಗುತ್ತಿದ್ದು, ಬಡತನ ಕಡಿಮೆಯಾಗುತ್ತಿದೆ. ಇಡೀ ವಿಶ್ವಕ್ಕೆ ಭಾರತದ ಮೇಲಿನ ವಿಶ್ವಾಸ ಹೆಚ್ಚಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ತಿಳಿಸಿದ್ದಾರೆ.
ಟೈಮ್ಸ್ ಗ್ಲೋಬಲ್ ಬ್ಯುಸಿನೆಸ್ ಶೃಂಗಸಭೆಯನ್ನುದ್ದೇಶಿಸಿ (Times Global Business Summit) ಮಾತನಾಡಿದ ಅವರು, ಈಗ ಭಾರತದ ಸಮಯ ಬಂದಿದೆ. ಇಡೀ ವಿಶ್ವಕ್ಕೆ ಭಾರತದ ಮೇಲಿನ ವಿಶ್ವಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಿಂದೆಂದೂ ಭಾರತದ ಬಗ್ಗೆ ಇಂತಹ ಸಕಾರಾತ್ಮಕ ಭಾವನೆ ಇರಲಿಲ್ಲ ಎಂದು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಪಾಕ್ ಚುನಾವಣೆ; ಪಿಎಂಎಲ್-ಎನ್ ಅತಿ ದೊಡ್ಡ ಪಕ್ಷ?- ಸಮ್ಮಿಶ್ರ ಸರ್ಕಾರ ರಚನೆಗೆ ಮುಂದಾದ ಮಾಜಿ ಪ್ರಧಾನಿ
Advertisement
Advertisement
ಕಳೆದ 10 ವರ್ಷಗಳಲ್ಲಿ ಭಾರತ ಹೇಗೆ ರೂಪಾಂತರಗೊಂಡಿದೆ ಎಂಬುದು ಪ್ರತಿಯೊಬ್ಬ ಅಭಿವೃದ್ಧಿ ತಜ್ಞರ ಗುಂಪಿನಲ್ಲಿ ಚರ್ಚೆಯಾಗುತ್ತಿದೆ. ಭಾರತದ ಶಕ್ತಿ ಸಾಮರ್ಥ್ಯದ ಬಗ್ಗೆ ಹಿಂದೆಂದೂ ಇಂತಹ ಸಕಾರಾತ್ಮಕ ಭಾವನೆ ಇರಲಿಲ್ಲ. ಆದ್ರೆ ನಮ್ಮ ಟೀಕಾಕಾರರು ಸಾರ್ವಕಾಲಿಕವಾಗಿ ಕೆಳಮಟ್ಟಕ್ಕಿಳಿಯುತ್ತಿದ್ದಾರೆ ಎಂದು ಪ್ರತಿಪಕ್ಷಗಳಿಗೆ ತಿರುಗೇಟು ಕೊಟ್ಟಿದ್ದಾರೆ.
Advertisement
ಭಾರತದ ನಿರಂತರ ಬೆಳವಣಿಗೆಯಿಂದಾಗಿ ಹಣದುಬ್ಬರ ಕಡಿಮೆಯಾಗಿದೆ, ರಫ್ತಿನಲ್ಲಿ ಹೆಚ್ಚಳವಾಗಿದೆ. ಅವಕಾಶಗಳು ಮತ್ತು ಆದಾಯ ಎರಡೂ ಹೆಚ್ಚಾಗುತ್ತಿವೆ. ಮುಖ್ಯವಾಗಿ ದೇಶದಲ್ಲಿ ಬಡತನ ಕಡಿಮೆಯಾಗುತ್ತಿದೆ ಎಂದು ಒತ್ತಿ ಹೇಳಿದ್ದಾರೆ. ಇದನ್ನೂ ಓದಿ: ಪಾಥುಮ್ ನಿಸ್ಸಾಂಕಾ ದ್ವಿಶತಕದ ಅಬ್ಬರ – 24 ವರ್ಷಗಳಿಂದ ಜಯಸೂರ್ಯ ಹೆಸರಲ್ಲಿದ್ದ ದಾಖಲೆ ನುಚ್ಚುನೂರು!
Advertisement
ಕಳೆದ 10 ವರ್ಷಗಳಲ್ಲಿ 25 ಕೋಟಿ ಜನ ಬಡತನದಿಂದ ಮುಕ್ತರಾಗಿದ್ದಾರೆ. ಇದು ನಮ್ಮ ಸರ್ಕಾರದ ನೀತಿಗಳು ಸರಿಯಾಗಿವೆ ಮತ್ತು ಸರ್ಕಾರ ಸರಿಯಾದ ಮಾರ್ಗದಲ್ಲಿ ಸಾಗುತ್ತಿದೆ ಎಂಬುದನ್ನು ತೋರಿಸುತ್ತದೆ. ಏಕೆಂದರೆ ನಮ್ಮ ಆಡಳಿತ ಮಾದರಿಯು ಏಕಕಾಲದಲ್ಲಿ ಎರಡು ವೇದಿಕೆಗಳಲ್ಲಿ ಮುನ್ನಡೆಯುತ್ತಿದೆ. ಒಂದೆಡೆ ನಾವು 20ನೇ ಶತಮಾನದಿಂದ ನಮಗೆ ಬಂದಿರುವ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಮತ್ತೊಂದು ಕಡೆ 21ನೇ ಶತಮಾನದ ಆಶಯಗಳನ್ನು ಈಡೇರಿಸುವಲ್ಲಿ ನಿರತರಾಗಿದ್ದೇವೆ. ದೊಡ್ಡ ಸವಾಲುಗಳನ್ನು ಮೆಟ್ಟಿ ನಿಲ್ಲುವ ಜೊತೆ ಜೊತೆಗೆ ದೊಡ್ಡ ದೊಡ್ಡ ಗುರಿಗಳನ್ನು ಸಾಧಿಸುತ್ತಿದ್ದೇವೆ ಎಂದು ತಮ್ಮ ಸರ್ಕಾರದ ಸಾಧನೆಗಳನ್ನ ಕೊಂಡಾಡಿದ್ದಾರೆ.