– ಸಂವಿಧಾನವನ್ನ ಕಾಂಗ್ರೆಸ್ ಹೇಗೆ ತುಳಿಯಿತು ಅನ್ನೋದು ನೆನಪಿದೆ: ಮೋದಿ
ನವದೆಹಲಿ: ʻತುರ್ತು ಪರಿಸ್ಥಿತಿʼಯು (Emergency 1975) ಸ್ವತಂತ್ರ ಭಾರತದ ಇತಿಹಾಸದಲ್ಲೊಂದು ಕರಾಳ ಅಧ್ಯಾಯವಾಗಿ ಉಳಿದುಕೊಂಡಿದೆ. 1975ರ ಜೂನ್ 25ರಂದು ಅಂದಿನ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹಮದ್ ಅವರು ದೇಶದಲ್ಲಿ ತುರ್ತುಪರಿಸ್ಥಿತಿ ಹೇರಿದ್ದರು. ಅಂದಿನ ಪ್ರಧಾನಿ ಇಂದಿರಾಗಾಂಧಿ (Indira Gandhi) ಅವರ ಸಲಹೆ ಮೇರೆಗೆ ಈ ಕ್ರಮ ತೆಗೆದುಕೊಂಡಿದ್ದರು. ತುರ್ತು ಪರಿಸ್ಥಿತಿ ಜಾರಿಯಾಗಿ ಜೂನ್ 25ಕ್ಕೆ 49 ವರ್ಷ ತುಂಬಿದ್ದು, 50ನೇ ವರ್ಷ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ನೆನೆದು ಪ್ರಧಾನಿ ಮೋದಿ (Narendra Modi) ತಮ್ಮ ಎಕ್ಸ್ ಖಾತೆಯಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅಲ್ಲದೇ ಕಾಂಗ್ರೆಸ್ ವಿರುದ್ಧವೂ ಕಿಡಿ ಕಾರಿದ್ದಾರೆ.
Advertisement
ಮೋದಿ ಎಕ್ಸ್ ಖಾತೆಯಲ್ಲಿ ಏನಿದೆ?
ಇಂದು ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ ಎಲ್ಲ ಮಹಾಪುರುಷರಿಗೆ ಮತ್ತು ಮಹಿಳೆಯರಿಗೆ ಗೌರವ ಸಲ್ಲಿಸುವ ದಿನವಾಗಿದೆ. ತುರ್ತು ಪರಿಸ್ಥಿತಿಯಿಂದ ಕಾಂಗ್ರೆಸ್ ಪಕ್ಷವು (Congress Party) ಮೂಲಭೂತ ಸ್ವಾತಂತ್ರ್ಯವನ್ನು ಹೇಗೆ ಬುಡಮೇಲು ಮಾಡಿತ್ತು? ಹಾಗೂ ಪ್ರತಿಯೊಬ್ಬ ಭಾರತೀಯರು ಗೌರವಿಸುವ ಸಂವಿಧಾನವನ್ನು (Constitution Of India) ಹೇಗೆ ತುಳಿಯಿತು? ಎಂಬುದನ್ನು ನಮಗೆ ನೆನಪಿಸುತ್ತದೆ.
Advertisement
The mindset which led to the imposition of the Emergency is very much alive among the same Party which imposed it. They hide their disdain for the Constitution through their tokenism but the people of India have seen through their antics and that is why they have rejected them…
— Narendra Modi (@narendramodi) June 25, 2024
Advertisement
ಅಸಂಖ್ಯಾತ ಸಂದರ್ಭಗಳಲ್ಲಿ 356ನೇ ವಿಧಿಯನ್ನು ಹೇರಿದವರು, ಪತ್ರಿಕಾ ಸ್ವಾತಂತ್ರ್ಯವನ್ನು ನಾಶಮಾಡುವ ಮಸೂದೆಯನ್ನು ಪಡೆದವರು, ಫೆಡರಲಿಸಂ ಅನ್ನು ನಾಶಪಡಿಸಿದರು ಮತ್ತು ಸಂವಿಧಾನದ ಪ್ರತಿಯೊಂದು ಅಂಶವನ್ನು ಉಲ್ಲಂಘಿಸಿದವರು ಇದೇ ಜನರು. ಇದನ್ನೂ ಓದಿ: ಉಪವಾಸ ಸತ್ಯಾಗ್ರಹದ ವೇಳೆ ಹದಗೆಟ್ಟ ಆರೋಗ್ಯ – ಆಪ್ ಸಚಿವೆ ಅತಿಶಿ ಆಸ್ಪತ್ರೆಗೆ ದಾಖಲು
Advertisement
ತುರ್ತು ಪರಿಸ್ಥಿತಿಯನ್ನು ಹೇರಲು ಕಾರಣವಾದ ಮನಸ್ಥಿತಿಯು ಇನ್ನೂ ಕಾಂಗ್ರೆಸ್ ಪಕ್ಷದಲ್ಲಿ ಜೀವಂತವಾಗಿದೆ. ಅವರು ತಮ್ಮ ಟೋಕನಿಸಂ ಮೂಲಕ ಸಂವಿಧಾನದ ಬಗ್ಗೆ ತಮ್ಮ ತಿರಸ್ಕಾರ ಮನೋಭಾವವನ್ನು ಮರೆಮಾಚುತ್ತಾರೆ. ತುರ್ತು ಪರಿಸ್ಥಿತಿ ಹೇರಿದವರಿಗೆ ನಮ್ಮ ಸಂವಿಧಾನದ ಮೇಲಿನ ಪ್ರೀತಿಯನ್ನು ಹೇಳಿಕೊಳ್ಳುವ ಹಕ್ಕು ಇಲ್ಲ. ಆದ್ರೆ ದೇಶದ ಜನರು ಅವರ ಭಾವನೆಗಳನ್ನು ವರ್ತನೆಗಳ ಮೂಲಕ ನೋಡಿಕೊಂಡಿದ್ದಾರೆ. ಅದಕ್ಕಾಗಿಯೇ ಅವರು ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನ ತಿರಸ್ಕಾರ ಮಾಡಿದ್ದಾರೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: `ಸನಾತನ ಧರ್ಮ ಡೆಂಗ್ಯೂ, ಮಲೇರಿಯಾ ಇದ್ದಂತೆ’ ಎಂದಿದ್ದ ಉದಯನಿಧಿ – ಇಂದು ಬೆಂಗ್ಳೂರು ಕೋರ್ಟ್‌ಮುಂದೆ ಹಾಜರ್ ಸಾಧ್ಯತೆ