– ಸುಧಾಮೂರ್ತಿ ಪ್ರಸ್ತಾಪಿಸಿದ್ದ ವಿಚಾರಗಳೇನು..?
ನವದೆಹಲಿ: ನೂತನವಾಗಿ ನೇಮಕಗೊಂಡ ರಾಜ್ಯಸಭಾ ಸಂಸದೆ ಸುಧಾ ಮೂರ್ತಿ ಅವರು ಮಹಿಳೆಯರ ಪರ ದನಿಯತ್ತಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಶ್ಲಾಘಿಸಿದ್ದಾರೆ.
ಬುಧವಾರ ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಕುರಿತು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (Narendra Modi), ಜುಲೈ 2 ರಂದು ಸದನದಲ್ಲಿ ಮಹಿಳೆಯರಿಗೆ ಸಂಬಂಧಿಸಿದ ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಿದ್ದಕ್ಕಾಗಿ ಸಮಾಜ ಸೇವಕಿ, ಲೇಖಕಿ ಮತ್ತು ಇನ್ಫೋಸಿಸ್ ಫೌಂಡೇಶನ್‌ನ ಮಾಜಿ ಅಧ್ಯಕ್ಷೆ ಸುಧಾ ಮೂರ್ತಿ (Sudha Murthy) ಅವರಿಗೆ ಧನ್ಯವಾದ ಅರ್ಪಿಸಿದರು.
Advertisement
"Where women are respected.. thats where Gods reside"
– Smt Sudha Murthy's very first speech in Parliament.pic.twitter.com/EhDEXFjSum
— Karthik Reddy (@bykarthikreddy) July 2, 2024
Advertisement
2 ಪ್ರಮುಖ ವಿಚಾರಗಳೇನು..?
ಗರ್ಭಕಂಠದ ಕ್ಯಾನ್ಸರ್: ಇನ್ಫೋಸಿಸ್ ಫೌಂಡೇಶನ್‌ನ ಮಾಜಿ ಅಧ್ಯಕ್ಷೆ ಸುಧಾ ಮೂರ್ತಿ ಅವರು ರಾಜ್ಯಸಭೆಯಲ್ಲಿ ತಮ್ಮ ಚೊಚ್ಚಲ ಭಾಷಣದಲ್ಲಿ ಎರಡು ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಿದರು. ರಾಜ್ಯಸಭೆಯಲ್ಲಿ ಅಧ್ಯಕ್ಷರ ಭಾಷಣದ ಮೇಲೆ ಮಂಡಿಸಿದ ಧನ್ಯವಾದ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೊರೊನಾ ಅವಧಿಯಲ್ಲಿ ಲಸಿಕೆ ಅಭಿಯಾನ ನಡೆಸಿದಂತೆಯೇ ಗರ್ಭಕಂಠದ ಕ್ಯಾನ್ಸರ್‌ನಿಂದ ಮಹಿಳೆಯರನ್ನು ರಕ್ಷಿಸಲು ಲಸಿಕೆಯ ಅಗತ್ಯತೆ ಇದೆ. ಈ ಕುರಿತು ಅಭಿಯಾನ ನಡೆಸಬೇಕು. ಮಹಿಳೆಯರಲ್ಲಿ ಈ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿದ್ದು, ಇದನ್ನು ತಡೆಗಟ್ಟಲು ಹದಿಹರೆಯದಲ್ಲಿ ಲಸಿಕೆ ಹಾಕುವ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.
Advertisement
ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಹೆಣ್ಣಿಗೆ ತನ್ನ ಆರೋಗ್ಯದ ಕಡೆ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಅವಳು ಆಸ್ಪತ್ರೆಯನ್ನು ತಲುಪಿದಾಗ, ಆಕೆಯ ಗರ್ಭಕಂಠದ ಕ್ಯಾನ್ಸರ್ ಮೂರನೇ ಅಥವಾ ನಾಲ್ಕನೇ ಹಂತದಲ್ಲಿರುತ್ತದೆ. ಆ ಸಂದರ್ಭದಲ್ಲಿ ಅವರನ್ನು ಉಳಿಸುವುದು ಕಷ್ಟವಾಗುತ್ತದೆ. ಹೆಣ್ಣೇ ಸಂಸಾರದ ಕೇಂದ್ರಬಿಂದು ಎಂದು ತಂದೆ ಹೇಳುತ್ತಿದ್ದು, ಹೆಣ್ಣಿನ ಮರಣದ ನಂತರ ಗಂಡನಿಗೆ ಮತ್ತೊಬ್ಬ ಹೆಂಡತಿ ಸಿಗುತ್ತಾಳೆ. ಆದರೆ ಮಕ್ಕಳಿಗೆ ಬೇರೆ ತಾಯಿ ಸಿಗುವುದಿಲ್ಲ ಎಂದು ಹೇಳಿದರು.
Advertisement
ಕೋವಿಡ್ ಅವಧಿಯಲ್ಲಿ ಕೊರೊನಾದಿಂದ ರಕ್ಷಿಸಲು ಸಮಗ್ರ ಲಸಿಕೆ ಅಭಿಯಾನವನ್ನು ಪ್ರಾರಂಭಿಸಿದಾಗ, ಗರ್ಭಕಂಠದ ಕ್ಯಾನ್ಸರ್‌ನಿಂದ ಮಹಿಳೆಯರನ್ನು ರಕ್ಷಿಸುವ ಅಭಿಯಾನವನ್ನು ಏಕೆ ಪ್ರಾರಂಭಿಸಬಾರದು ಎಂದು ಸುಧಾ ಮೂರ್ತಿ ಕೇಳಿದರು?. ಈ ಸಂಬಂಧ ಸರ್ಕಾರ ಮಧ್ಯಸ್ಥಿಕೆ ವಹಿಸಿದರೆ ದುಂದು ವೆಚ್ಚವಾಗುವುದಿಲ್ಲ. ಇದರಿಂದ ದೇಶದ ಹೆಚ್ಚಿನ ಜನಸಂಖ್ಯೆಗೆ ಅನುಕೂಲವಾಗಲಿದೆ ಎಂದು ಮೂರ್ತಿ ವಿವರಿಸಿದರು.
ಪ್ರವಾಸಿ ತಾಣಗಳ ಅಭಿವೃದ್ಧಿ: ಇದೇ ವೇಳೆ ದೇಶದ ಪ್ರವಾಸೋದ್ಯಮ ಕ್ಷೇತ್ರಗಳ ಬಗ್ಗೆ ಉಲ್ಲೇಖಿಸಿದ ಸುಧಾ ಮೂರ್ತಿ, ಅಜಂತಾ, ಎಲ್ಲೋರಾ ಮತ್ತು ತಾಜ್ ಮಹಲ್‌ಗೆ ಜನರು ಆಗಾಗ್ಗೆ ಭೇಟಿ ನೀಡುತ್ತಾರೆ. ಆದರೆ ಭಾರತದಲ್ಲಿ 42 ಪಾರಂಪರಿಕ ತಾಣಗಳಿವೆ. ಅವುಗಳು ಹೆಚ್ಚು ಪ್ರಚಾರವಾಗದ ಅಥವಾ ಅವುಗಳ ಬಗ್ಗೆ ಜನರಿಗೆ ತಿಳಿದಿಲ್ಲ. ನಮ್ಮ ದೇಶ ಮತ್ತು 12,500 ವರ್ಷಗಳಿಗಿಂತಲೂ ಹಳೆಯದಾದ ಈ ಸ್ಥಳವನ್ನು ಪಾರಂಪರಿಕ ತಾಣದಲ್ಲಿ ಸೇರಿಸಲಾಗಿಲ್ಲ. ದಕ್ಷಿಣದ ರಾಜ್ಯಗಳಲ್ಲಿ ಅದರ ಸಂಸ್ಕೃತಿಯ ಬಗ್ಗೆ ನಾವು ತಿಳಿದುಕೊಳ್ಳಬೇಕು ಎಂದರು.