ಕಠ್ಮಂಡು: ಪ್ರಧಾನಿ ನರೇಂದ್ರ ಮೋದಿ ಹಾಗೂ ನೇಪಾಳದ ಸಹವರ್ತಿ ಶೇರ್ ಬಹದ್ದೂರ್ ದೇವುಬಾ ಶನಿವಾರ ಗಡಿಯಾಚೆಗಿನ ರೈಲ್ವೇ ನೆಟ್‌ವರ್ಕ್, ವಿದ್ಯುತ್ ಪ್ರಸರಣ ಮಾರ್ಗವನ್ನು ಉದ್ಘಾಟಿಸಿದರು ಹಾಗೂ ಭಾರತದ ರುಪೇ ಪಾವತಿ ಕಾರ್ಡ್ ಅನ್ನು ನೇಪಾಳದಲ್ಲಿ ಪ್ರಾರಂಭಿಸಿದರು.
ಮೋದಿ ಹಾಗೂ ದೇವುಬಾ ಉದ್ಘಾಟನೆ ಸಂದರ್ಭದಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ವಿಸ್ತರಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ರೈಲ್ವೇ ಹಾಗೂ ಇಂಧನ ಕ್ಷೇತ್ರಗಳಲ್ಲಿ ಸಹಕಾರಗಳನ್ನು ಮುಂದುವರಿಸಲು ನಾಲ್ಕು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಉಭಯ ದೇಶಗಳ ನಡುವಿನ ಗಡಿ ಸಮಸ್ಯೆಗಳನ್ನು ಚರ್ಚಿಸಲಾಗಿದೆ ಹಾಗೂ ಅವುಗಳನ್ನು ಪರಿಹರಿಸಲು ಮೋದಿಗೆ ಒತ್ತಾಯಿಸಲಾಗಿದೆ ಎಂದು ದೇವುಬಾ ತಿಳಿಸಿದರು. ಇದನ್ನೂ ಓದಿ: ತಮಿಳುನಾಡು ಬಿಜೆಪಿ ನಾಯಕ ಕೆ ಅಣ್ಣಾಮಲೈಗೆ ವೈ ಶ್ರೇಣಿ ಭದ್ರತೆ
Advertisement
Addressing the joint press meet with PM @SherBDeuba. https://t.co/IjJfpbIokK
— Narendra Modi (@narendramodi) April 2, 2022
Advertisement
ಭಾರತ-ನೇಪಾಳ ಭಾಂದವ್ಯ:
ಭಾರತ ಹಾಗೂ ನೇಪಾಳದ ಸ್ನೇಹಮಯ ಸಂಬಂಧ ಅತ್ಯಂತ ವಿಶೇಷವಾದುದು. ಇಂತಹ ಭಾಂದವ್ಯ ಬೇರೆ ಯಾವ ದೇಶಗಳಲ್ಲೂ ಕಾಣಿಸಲು ಸಾಧ್ಯವಿಲ್ಲ ಎಂದು ಮೋದಿ ತಿಳಿಸಿದರು. ಇದನ್ನೂ ಓದಿ: ಆರ್ಥಿಕ ಬಿಕ್ಕಟ್ಟು ಪ್ರತಿಭಟನೆ ನಡುವೆ ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ
Advertisement
ನೇಪಾಳದ ಶಾಂತಿ, ಸಮೃದ್ಧಿ ಹಾಗೂ ಅಭಿವೃದ್ಧಿಯ ಪ್ರಯಾಣದಲ್ಲಿ ಭಾರತ ದೃಢವಾದ ಒಡನಾಡಿಯಾಗಿದೆ. ಮುಂದೆಯೂ ಇದೇ ರೀತಿಯಲ್ಲಿ ಮುಂದುವರಿಯುತ್ತದೆ ಎಂದು ಮೋದಿ ಭರವಸೆ ನೀಡಿದರು.