ನವದೆಹಲಿ: ಒಲಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರನ್ನು ಪ್ರಧಾನಿ ನರೇಂದ್ರ ಮೋದಿ ಪ್ರಶಂಸಿದ್ದಾರೆ.
Advertisement
ನೀರಜ್ ಚೋಪ್ರಾ ಅವರು ಅಹಮದಾಬಾದ್‍ನ ಸಂಸ್ಕರ್ಧಾಮ್ ಶಾಲೆಗೆ ಭೇಟಿ ನೀಡಿದ್ದು, ಸಮತೋಲಿತ ಆಹಾರ, ಫಿಟ್ನೆಸ್ ಮತ್ತು ಕ್ರೀಡೆಯ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದ್ದಾರೆ. ಇಲ್ಲಿಯವರೆಗೂ ಅವರು ಬಟ್ಟು 75 ವಿವಿಧ ಶಾಲೆಗಳ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು ಎಂದು ಗುಜರಾತ್ ಸರ್ಕಾರದ ಪ್ರಕಟಣೆ ತಿಳಿಸಿದೆ.
Advertisement
ಈ ಕುರಿತು ನೀರಜ್ ಅವರು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದರು. ಇದನ್ನು ನೋಡಿದ ಮೋದಿ ಅವರು ಆ ಟ್ವೀಟ್ ಅನ್ನು ರೀ-ಟ್ವೀಟ್ ಮಾಡಿ, ನೀರಜ್ ಅವರು ನಿಜಕ್ಕೂ ಅದ್ಭುತವಾದ ಕೆಲಸವನ್ನು ಮಾಡಿದ್ದಾರೆ. ಯುವ ವಿದ್ಯಾರ್ಥಿಗಳ ನಡುವೆ ಹೋಗಿ ಅವರಿಗೆ ಕ್ರೀಡೆ ಮತ್ತು ಫಿಟ್‍ನೆಸ್ ಬಗ್ಗೆ ಪ್ರೇರೇಪಿಸಲು ನೀರಜ್ ಚೋಪ್ರಾ ಅವರು ಉತ್ತಮ ಮುಂದಾಳತ್ವವನ್ನು ತೆಗೆದುಕೊಂಡಿದ್ದಾರೆ. ಇಂತಹ ಪ್ರಯತ್ನಗಳು ಮಕ್ಕಳಿಗೆ ಕ್ರೀಡೆ ಮತ್ತು ವ್ಯಾಯಾಮದ ಕಡೆಗೆ ಕುತೂಹಲವನ್ನು ಹೆಚ್ಚಿಸುತ್ತೆ ಎಂದು ಬರೆದು ಪ್ರಶಂಸಿದ್ದಾರೆ. ಇದನ್ನೂ ಓದಿ: ಇಂಡಿಯಾ ಬುಕ್ ಅಫ್ ರೆಕಾರ್ಡ್ಸ್‌ನಲ್ಲಿ ಸೇರ್ಪಡೆಗೊಂಡ ಕೊಡಗಿನ ಕುವರ ಕೆ.ರಾಹುಲ್
Advertisement
This is a great initiative by @Neeraj_chopra1, to go among young students and motivate them on sports and fitness.
Such efforts will increase curiosity towards sports and exercising. https://t.co/CPlKE1hXJg
— Narendra Modi (@narendramodi) December 5, 2021
Advertisement
ಮೋದಿ ಅವರ ಸರ್ಕಾರ, ಹೆಸರಾಂತ ಕ್ರೀಡಾಪಟುಗಳು ದೇಶದ ಶಾಲೆಗಳಿಗೆ ಭೇಟಿ ನೀಡುವ ರಾಷ್ಟ್ರೀಯ ಮಿಷನ್ ಅನ್ನು ಪ್ರಾರಂಭಿಸಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ಕ್ರೀಡೆ ಮತ್ತು ವ್ಯಾಯಾಮದ ಕಡೆಗೆ ಕುತೂಹಲವನ್ನು ಹೆಚ್ಚಾಗುತ್ತೆ. ಸಮತೋಲಿತ ಆಹಾರ, ಫಿಟ್ನೆಸ್ ಮತ್ತು ಕ್ರೀಡೆಯ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬಹುದು ಎಂದು ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ.
ಈ ಯೋಜನೆಗೆ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಸಾಥ್ ನೀಡಿದ್ದು, ಮೋದಿ ಅವರ ಪ್ರಶಂಸೆ ಬಂದಿದೆ. ಇದು ಮೋದಿ ಅವರ ಕನಸಿನ ಕೂಸಾಗಿದ್ದು, ಈ ಯೋಜನೆಯನ್ನು ಶಿಕ್ಷಣ ಸಚಿವಾಲಯ, ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ಜಂಟಿಯಾಗಿ ಆಯೋಜಿಸಿದೆ.
Had a wonderful day at @sanskardham_In interacting with students, playing sports with them and speaking to them about the importance of exercise and diet in fitness. It’s great to see a school that offers such a balance of sports & academics. @PMOIndia @ianuragthakur https://t.co/4IjftkLpYr
— Neeraj Chopra (@Neeraj_chopra1) December 4, 2021
ನೀರಜ್ ಟ್ವೀಟ್ ನಲ್ಲಿ, ಸಂಸ್ಕರ್ಧಾಮ್ ಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ, ಅವರೊಂದಿಗೆ ಕ್ರೀಡೆಗಳನ್ನು ಆಡುವಾಗ ಮತ್ತು ಫಿಟ್‍ನೆಸ್‍ನಲ್ಲಿ ವ್ಯಾಯಾಮ ಮತ್ತು ಆಹಾರದ ಮಹತ್ವದ ಕುರಿತು ಅವರೊಂದಿಗೆ ಮಾತನಾಡುವಾಗ ತುಂಬಾ ಖುಷಿಯಾಗಿದೆ. ಇದು ನನ್ನ ಅದ್ಭುತವಾದ ದಿನವಾಗಿದೆ. ಕ್ರೀಡೆ ಮತ್ತು ಶಿಕ್ಷಣವನ್ನು ಸಮತೋಲನವಾಗಿ ಪ್ರೋತ್ಸಾಹ ನೀಡುವ ಶಾಲೆಯನ್ನು ನೋಡುವುದು ತುಂಬಾ ಸಂತೋಷವಾಗಿದೆ ಎಂದು ಬರೆದುಕೊಂಡಿದ್ದರು.
ಅದು ಅಲ್ಲದೇ ಮಕ್ಕಳೊಂದಿಗೆ ಸಮತೋಲಿತ ಆಹಾರ, ಫಿಟ್ನೆಸ್ ಮತ್ತು ಕ್ರೀಡೆಗಳ ಪ್ರಾಮುಖ್ಯತೆಯ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದರ ಜೊತೆಗೆ, ಚೋಪ್ರಾ ಅವರು ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು.