* 65 ಅಡಿ ಎತ್ತರದ ಅಟಲ್ ಪ್ರತಿಮೆ ಉದ್ಘಾಟನೆ
ನವದೆಹಲಿ: ಮಾಜಿ ಪ್ರಧಾನಿ ಮತ್ತು ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ (Atal Bihari Vajpayee) ಅವರ 101 ನೇ ಜನ್ಮ ದಿನಾಚರಣೆಯ ಸ್ಮರಣಾರ್ಥ ಗುರುವಾರ ಲಕ್ನೋದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Modi) ಅವರು ರಾಷ್ಟ್ರ ಪ್ರೇರಣಾ ಸ್ಥಳವನ್ನು ಉದ್ಘಾಟಿಸಿದರು. ಈ ಹೆಗ್ಗುರುತು ರಾಷ್ಟ್ರೀಯ ಸ್ಮಾರಕವನ್ನು ವಾಜಪೇಯಿ ಅವರ ಜೀವನ ಮತ್ತು ಆದರ್ಶಗಳಿಗೆ ಸಮರ್ಪಿಸಲಾಗಿದೆ.
ಇಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 101 ನೇ ಜನ್ಮ ದಿನಾಚರಣೆ. ಅಜಾತಶತ್ರುವಿನ ಜನ್ಮದಿನ ಹಿನ್ನೆಲೆ ದೇಶಾದ್ಯಂತ ಬಿಜೆಪಿ ನಾಯಕರು ನಮನ ಸಲ್ಲಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಸೇರಿ ಹಲವು ಗಣ್ಯರು ಸದೈವ ಅಟಲ್‌ಗೆ ತೆರಳಿ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು. ಇನ್ನು ಮಧ್ಯಾಹ್ನ ನಂತರ ಮೋದಿ ಲಕ್ನೋದಲ್ಲಿ ರಾಷ್ಟ್ರೀಯ ಪ್ರೇರಣಾ ಸ್ಥಳ ಲೋಕಾರ್ಪಣೆಗೊಳಿಸಿದರು. ಇದನ್ನೂ ಓದಿ: ವಾಜಪೇಯಿ 101ನೇ ಜಯಂತಿ – 100 ಹೊಸ `ಅಟಲ್ ಕ್ಯಾಂಟೀನ್’ಗಳ ಉದ್ಘಾಟನೆ
230 ಕೋಟಿ ವೆಚ್ಚದಲ್ಲಿ ಗೋಮತಿ ನದಿ ತಟದಲ್ಲಿ ಕಮಲಾಕಾರದಲ್ಲಿ ಪ್ರೇರಣಾ ಸ್ಥಳ ನಿರ್ಮಿಸಲಾಗಿದೆ. ಇನ್ನು ಇದೇ ಸ್ಥಳದಲ್ಲಿರುವ ವಾಜಪೇಯಿ, ಶ್ಯಾಮ ಪ್ರಸಾದ್ ಮುಖರ್ಜಿ, ಪಂಡಿತ್ ದೀನದಯಾಳ್ ಅವರ 65 ಅಡಿ ಎತ್ತರ ಕಂಚಿನ ಪ್ರತಿಮೆ ಉದ್ಘಾಟಿಸಲಾಯ್ತು. ಕಸದ ಜಾಗದಲ್ಲಿ ತಲೆ ಎತ್ತಿದ ಸ್ಥಳದಲ್ಲಿ ಈಗ 98,000 ಚದರ ಅಡಿ ವಿಸ್ತೀರ್ಣದಲ್ಲಿ ಪ್ರೇರಣಾ ಸ್ಥಳ ನಿರ್ಮಿಸಲಾಗಿದೆ.
ದೆಹಲಿಯಲ್ಲಿ ಇಂದಿರಾ ಕ್ಯಾಂಟೀನ್ ಮಾದರಿಯಲ್ಲಿ ಇಂದಿನಿಂದ ‘ಅಟಲ್ ಕ್ಯಾಂಟೀನ್’ ಆರಂಭಿಸಲಾಗಿದೆ. 100 ಸ್ಥಳಗಳಲ್ಲಿ 5 ರೂಪಾಯಿಗೆ ಊಟ ಒದಗಿಸಲು ದೆಹಲಿ ಸರ್ಕಾರ ಈ ಕ್ಯಾಂಟೀನ್ ಆರಂಭಿಸಿದೆ. ಇದನ್ನೂ ಓದಿ: ಕರ್ನಾಟಕದಲ್ಲಿ 30 ಸಾವಿರ ಉದ್ಯೋಗ – ರಾಹುಲ್ ಗಾಂಧಿ, ಅಶ್ವಿನಿ ವೈಷ್ಣವ್ ಮಧ್ಯೆ ಕ್ರೆಡಿಟ್ ವಾರ್


