ಬಿಹಾರದ ರಾಜ್‌ಗಿರ್‌ನಲ್ಲಿ 1,700 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ನಳಂದಾ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್ (Nalanda University New Campus) ಅನ್ನು ಪ್ರಧಾನಿ ನರೇಂದ್ರ ಮೋದಿ ಅವರಿಂದು ಉದ್ಘಾಟಿಸಿದ್ದಾರೆ. ಈ ಸಮಾರಂಭಕ್ಕೆ ಬಿಹಾರ ಸಿಎಂ ನಿತೀಶ್ ಕುಮಾರ್, ವಿದೇಶಾಂಗ ಸಚಿವ ಎಸ್.ಜೈಶಂಕರ್ ಹಾಗೂ ಆಸ್ಟ್ರೇಲಿಯಾ, ಬಾಂಗ್ಲಾದೇಶ, ಭೂತಾನ್, ಬ್ರೂನೈ, ದರುಸ್ಸಲಾಮ್, ಕಾಂಬೋಡಿಯಾ, ಚೀನಾ, ಇಂಡೋನೇಷ್ಯಾ, ಲಾವೋಸ್, ಮಾರಿಷಸ್, ಮ್ಯಾನ್ಮಾರ್, ನ್ಯೂಜಿಲೆಂಡ್, ಪೋರ್ಚುಗಲ್, ಸಿಂಗಾಪುರ, ದಕ್ಷಿಣ ಕೊರಿಯಾ, ಶ್ರೀಲಂಕಾ ಮತ್ತು ವಿಯೆಟ್ನಾಂ ಸೇರಿದಂತೆ ಒಟ್ಟು 17 ದೇಶಗಳ ವಿದೇಶಿ ರಾಯಭಾರಿಗಳು ಸಾಕ್ಷಿಯಾಗಿದ್ದಾರೆ.
ಕ್ಯಾಂಪಸ್ ವಿಶೇಷತೆ ಏನು?: ನೂತನ ಕ್ಯಾಂಪಸ್ ಅನ್ನು ಎರಡು ಶೈಕ್ಷಣಿಕ ಬ್ಲಾಕ್‌ಗಳಾಗಿ ವಿಂಗಡಿಸಲಾಗಿದೆ. ಒಟ್ಟು 40 ಕೊಠಡಿಗಳನ್ನ ಒಳಗೊಂಡಿದ್ದು, ಒಟ್ಟು 1900 ಆಸನ ಸಾಮರ್ಥ್ಯವಿದೆ. ಜೊತೆಗೆ ಎರಡೂ ಸಭಾಂಗಣಗಳನ್ನು ಕ್ಯಾಂಪಸ್ ಒಳಗೊಂಡಿದ್ದು, ಪ್ರತಿಯೊಂದೂ ಸಭಾಂಗಣ 300 ಆಸನ ಸಾಮರ್ಥ್ಯ ಹೊಂದಿದೆ. ಜೊತೆಗೆ 550 ಸಾಮರ್ಥ್ಯಗಳ ವಿದ್ಯಾರ್ಥಿನಿಲಯ, 2000 ಜನ ಕುಳಿತುಕೊಳ್ಳಬಹುದಾದ ವಿಶಾಲ ಸಭಾಂಗಣ, ಫ್ಯಾಕಲ್ಟಿ ಕ್ಲಬ್ (ಅಧ್ಯಾಪಕರ ಸಭಾಂಗಣ), ಕ್ರೀಡಾ ಸಂಕೀರ್ಣ ಹಾಗೂ ಅಂತಾರಾಷ್ಟ್ರೀಯ ಕೇಂದ್ರಗಳನ್ನು ಒಳಗೊಂಡಿದೆ. ಈ ದೃಶ್ಯಗಳನ್ನು ಫೋಟೋಗಳಲ್ಲಿ ಕಣ್ತುಂಬಿಕೊಳ್ಳಲು ಮುಂದೆ ನೋಡಿ…