ನವದೆಹಲಿ: ಸೆಂಟ್ರಲ್ ವಿಸ್ಟಾ (Central Vista) ಪ್ರಾಜೆಕ್ಟ್ ಭಾಗವಾಗಿ ಕರ್ತವ್ಯ ಭವನ (Kartavya Bhavan) ಕಟ್ಟಡವನ್ನು ಪ್ರಧಾನಿ ಮೋದಿ (Narendra Modi) ಲೋಕಾರ್ಪಣೆ ಮಾಡಿದರು. ಇದಕ್ಕೆ ಕಾಮನ್ ಸೆಂಟ್ರಲ್ ಸೆಕ್ರಟರಿಯೇಟ್ 3 ಎಂದು ಹೆಸರಿಡಲಾಗಿದೆ.
ಗೃಹ, ವಿದೇಶಾಂಗ, ಗ್ರಾಮೀಣಾಭಿವೃದ್ಧಿ, ಪೆಟ್ರೋಲಿಯಂ, ಎಂಎಸ್‌ಎಂಇ ಇಲಾಖೆಗಳ ಕಚೇರಿಗಳು ಒಂದೇ ಸೂರಿನಡಿ ಇರಬೇಕು ಎಂದು ಈ ಕಟ್ಟಡವನ್ನು ನಿರ್ಮಿಸಲಾಗಿದೆ. ಇತರ ಏಳು ಪ್ರಸ್ತಾವಿತ ಕಟ್ಟಡಗಳು ಸಹ ಏಪ್ರಿಲ್ 2027ರ ವೇಳೆಗೆ ಸಿದ್ಧವಾಗುತ್ತವೆ. ಸಚಿವಾಲಯಗಳಿಗಾಗಿ ನಿರ್ಮಿಸಲಾಗುತ್ತಿರುವ ಈ ಕಟ್ಟಡಗಳಲ್ಲಿ, ತಂತ್ರಜ್ಞಾನ, ಭದ್ರತೆ ಮತ್ತು ಪರಿಸರ ಸ್ನೇಹಪರತೆಯ ಬಗ್ಗೆ ಸಂಪೂರ್ಣ ಕಾಳಜಿ ವಹಿಸಲಾಗಿದೆ.
ಸಚಿವಾಲಯಗಳ ಅಸ್ತಿತ್ವದಲ್ಲಿರುವ ಕಟ್ಟಡಗಳನ್ನು 1950 ಮತ್ತು 1970ರ ನಡುವೆ ನಿರ್ಮಿಸಲಾಗಿರುವುದರಿಂದ ಹೊಸ ಮತ್ತು ಅತ್ಯಾಧುನಿಕ ಕಟ್ಟಡಗಳನ್ನು ನಿರ್ಮಿಸುವ ಅವಶ್ಯಕತೆಯಿದೆ ಎಂದು ನಿರ್ಮಿಸಲಾಗಿದೆ. ಇದರಿಂದಾಗಿ ಇಲಾಖೆಗಳ ಮಧ್ಯೆ ಸಹಕಾರ, ಟೀಮ್ ವರ್ಕ್ಗೆ ಉತ್ತೇಜನ ಹೆಚ್ಚಾಗಲಿದೆ. ಈವರೆಗೆ ಇದ್ದ ನಾರ್ತ್ & ಸೌತ್ ಬ್ಲಾಕ್‌ಗಳನ್ನು ರಾಷ್ಟ್ರೀಯ ವಸ್ತು ಸಂಗ್ರಹಾಲಯ ಮಾಡಲಾಗುತ್ತದೆ. ಕರ್ತವ್ಯ ಪಥಕ್ಕೆ ಹೊಂದಿಕೊಂಡಂತಿರುವ ಈ ಕಟ್ಟಡವು 1.5 ಲಕ್ಷ ಚದರ ವಿಸ್ತೀರ್ಣ, 2 ನೆಲಮಾಳಿಗೆ, 7 ಅಂತಸ್ತು ಹೊಂದಿದೆ.
ಕರ್ತವ್ಯ ಭವನದ ವಿಶೇಷತೆಯೇನು?
* ಸೆನ್ಸಾರ್‌ಯುಕ್ತ ಎಲ್‌ಇಡಿ ಲೈಟಿಂಗ್
* ಸೋಲಾರ್ ಪವರ್ ಪ್ಲಾಂಟ್
* ಮಳೆ ನೀರು ಕೊಯ್ಲು ಪದ್ಧತಿ ಅಳವಡಿಕೆ
* ನಿತ್ಯ 1.10 ಲಕ್ಷ ಲೀಟರ್ ವೇಸ್ಟ್ ನೀರಿನ ಮರುಬಳಕೆ
* ಗೊಬ್ಬರವಾಗಿ ಘನತ್ಯಾಜ್ಯ ಬಳಕೆ
* ದಿನಕ್ಕೆ 650 ವಾಹನ ಚಾರ್ಚಿಂಗ್‌ಗೆ ಅನುಕೂಲವಾಗಿ 120 ಇವಿ ಚಾರ್ಚಿಂಗ್ ಪಾಯಿಂಟ್
* 324 ವಾಹನಗಳಿಗೆ ಪಾರ್ಕಿಂಗ್ ಸ್ಲಾಟ್