– ಗುಜರಾತ್‌ನಲ್ಲಿ 241 ಕೋಟಿ ಮೌಲ್ಯ ಅಭಿವೃದ್ಧಿ ಯೋಜನೆಗಳಿಗೆ ಅಮಿತ್ ಶಾ ಚಾಲನೆ
– ಸೇವಾ ಮನೋಭಾವ ಜಾತ್ಯತೀತತೆಯ ಸಂಕೇತ; ಮೋದಿ ಬಣ್ಣನೆ
ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರಿಂದು ಮಹಾರಾಷ್ಟ್ರದ ನವಿ ಮುಂಬೈನ ಖಾರ್ಘರ್ ಪ್ರದೇಶದಲ್ಲಿ ನೂತನ ಇಸ್ಕಾನ್ ದೇವಾಲಯ (ISKCON Temple) ಉದ್ಘಾಟಿಸಿದರು.
ಬಳಿಕ ಮಾತನಾಡಿದ ಪ್ರಧಾನಿ ಮೋದಿ (Narendra Modi), ಭಾರತದ ಆಧ್ಯಾತ್ಮಿಕ ಸಂಸ್ಕೃತಿಯು ಸೇವಾ ಮನೋಭಾವದಲ್ಲಿ ಆಳವಾಗಿ ಬೇರೂರಿದೆ. ಹಾಗಾಗಿಯೇ ನಮ್ಮ ಸರ್ಕಾರ ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲ ಜನರ ಕಲ್ಯಾಣಕ್ಕಾಗಿ ನಿಸ್ವಾರ್ಥವಾಗಿ ಕೆಲಸ ಮಾಡುತ್ತಿದೆ. ಬಡವರಿಗಾಗಿ ಮನೆ, ಶೌಚಾಲಯಗಳನ್ನು ನಿರ್ಮಿಸುವ ಕಾರ್ಯಕ್ರಮವನ್ನು ನಮ್ಮ ಸರ್ಕಾರ ಜಾರಿಗೊಳಿಸಿದೆ. ನಾಗರಿಕರಿಗೆ ಎಲ್‌ಪಿಜಿ ಸಂಪರ್ಕ, ವೈದ್ಯಕೀಯ ವಿಮೆ ಒದಗಿಸುವ ಹತ್ತು ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ ಎಂದು ಸರ್ಕಾರದ ಸಾಧನೆಗಳನ್ನು ಬಣ್ಣಿಸಿದರು.
ನಮ್ಮ ಆಧ್ಯಾತ್ಮಿಕ ಸಂಸ್ಕೃತಿಯ ಮುಖ್ಯ ಅಡಿಪಾಯ ಸೇವಾ ಮನೋಭಾವ. ಆ ಸೇವಾ ಮನೋಭಾವವು ಜಾತ್ಯತೀತತೆಯ ಸಂಕೇತವಾಗಿದೆ. ಭಾರತವು ಕೇವಲ ಭೌಗೋಳಿಕ ಗಡಿಗಳಿಂದ ಸುತ್ತುವರಿದ ತುಂಡು ಭೂಮಿ ಅಲ್ಲ. ಇದು ಜೀವಂತ ಭೂಮಿ, ಜೀವಂತ ಸಂಸ್ಕೃತಿ ಹೊಂದಿರುವ. ಈ ಜ್ಞಾನವನ್ನು ಅರ್ಥಮಾಡಿಕೊಳ್ಳಬೇಕಾದ್ರೆ ನಾವು ಆಧ್ಯಾತ್ಮಿಕತೆ ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
- Advertisement3
- Advertisement
241 ಕೋಟಿ ರೂ. ಯೋಜನೆಗಳಿಗೆ ಅಮಿತ್ ಶಾ ಚಾಲನೆ
ಗುಜರಾತ್‌ನ ಮಾನ್ಸಾದಲ್ಲಿ ಸುಮಾರು 241 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಾಲನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ಇತರ ಗಣ್ಯರು ಸಾಥ್ ನೀಡಿದ್ದಾರೆ.
ಬಳಿಕ ಮಾತನಾಡಿರುವ ಅಮಿತ್ ಶಾ, ನರೇಂದ್ರ ಮೋದಿ ಅವರು ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದಾಗ ನೀರಿನ ಕೊರತೆಯನ್ನು ನೀಗಿಸಲು ಪರಿವರ್ತನಾಶೀಲ ಪ್ರಯತ್ನಗಳನ್ನು ಎತ್ತಿತೋರಿಸಿದರು ಎಂದರು.
ಒಂದು ಕಾಲದಲ್ಲಿ ಅಂತರ್ಜಲ ಮಟ್ಟ 1,200 ಅಡಿ ಆಳಕ್ಕೆ ಕುಸಿದಿತ್ತು. ಆದ್ರೆ ನರೇಂದ್ರ ಮೋದಿ ಅವರ ಪ್ರಯತ್ನಗಳು ಅಂತರ್ಜಲದ ಮಟ್ಟ ಹೆಚ್ಚಾಗಲು ಕಾರಣವಾಯಿತು. ಪ್ರಧಾನಿಯಾದ ಬಳಿಕ ನರ್ಮದಾ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೋಳಿಸಿದರು. ಈಗ ಗುಜರಾತ್‌ನಾದ್ಯಂತ ಪ್ರತಿ ಮನೆಗೂ ನರ್ಮದಾ ನೀರು ಹರಿಯುತ್ತಿದೆ. ಅಲ್ಲದೇ ಮಳೆ ನೀರು ಸಂರಕ್ಷಣೆಯಿಂದ ರಾಜ್ಯದ 9,000ಕ್ಕೂ ಹೆಚ್ಚು ಕೋಳಗಳಿಗೆ ಜೀವಕಳೆ ಬಂದಿದೆ ಎಂದು ಶ್ಲಾಘಿಸಿದರೆಂದು ಪ್ರಕಟಣೆ ತಿಳಿಸಿದೆ.