-ತಾಯಿಯೇ ನಮ್ಮ ಜಗತ್ತು, ತಾಯಿಯೇ ನಮ್ಮ ಸ್ವಾಭಿಮಾನ
– ಬಡತನದಿಂದ ನನ್ನ ತಾಯಿ ಒಂದು ಸೀರೆಯನ್ನೂ ಖರೀದಿಸಲಿಲ್ಲ: ಮೋದಿ ಭಾವುಕ
ನವದೆಹಲಿ: ತಾಯಿಯೇ (Mother) ನಮ್ಮ ಜಗತ್ತು, ತಾಯಿಯೇ ನಮ್ಮ ಸ್ವಾಭಿಮಾನ, ಬಿಹಾರದಂತಹ (Bihar) ಸಾಂಪ್ರದಾಯಿಕ ರಾಜ್ಯದಿಂದ ಆರ್‌ಜೆಡಿ (RJD) ಮತ್ತು ಕಾಂಗ್ರೆಸ್ (Congress) ನಾಯಕರು ನನ್ನ ತಾಯಿಯನ್ನು ನಿಂದಿಸಿದರು. ಈ ನಿಂದನೆಗಳು ನನ್ನ ತಾಯಿಗೆ ಮಾಡಿದ ಅವಮಾನ ಮಾತ್ರವಲ್ಲ. ಇದು ದೇಶದ ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳಿಗೆ ಮಾಡಿದ ಅವಮಾನವಾಗಿದೆ ಎಂದ ಪ್ರಧಾನಿ ನರೇಂದ್ರ ಮೋದಿ (Narendra Modi) ಭಾವುಕರಾದರು.
ಬಿಹಾರ ರಾಜ್ಯ ಜೀವಿಕಾ ನಿಧಿ ಸಖ್ ಸಹಕಾರಿ ಸಂಘ ಲಿಮಿಟೆಡ್ ಅನ್ನು ವರ್ಚುವಲ್ ಆಗಿ ಉದ್ಘಾಟಿಸಿ, ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ ಪಕ್ಷದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು. ಆರ್‌ಜೆಡಿ-ಕಾಂಗ್ರೆಸ್ ತಮ್ಮ ತಾಯಿಯನ್ನು ನಿಂದಿಸಬಹುದು ಎಂದು ಯಾರೂ ಊಹಿಸಿರಲಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಪಕ್ಷ ವಿರೋಧಿ ಚಟುವಟಿಕೆ; ಪುತ್ರಿ ಕವಿತಾರನ್ನೇ ಪಕ್ಷದಿಂದ ಹೊರಹಾಕಿದ ಕೆಸಿಆರ್
ಆ ಮಾತುಗಳನ್ನು ಬಿಹಾರದ ಪ್ರತಿಯೊಬ್ಬ ತಾಯಿಯೂ ಕೇಳಿದ ನಂತರ ನೀವೂ ಎಷ್ಟು ಕೆಟ್ಟದಾಗಿ ಭಾವಿಸಿದ್ದೀರಿ. ನನ್ನ ಹೃದಯದಲ್ಲಿ ನನಗೆ ಎಷ್ಟು ನೋವಿದೆಯೋ ಅಷ್ಟೇ ನೋವು ಬಿಹಾರದ ಜನರಲ್ಲೂ ಅಷ್ಟೆ ನೋವಿದೆ ಎಂದು ನನಗೆ ತಿಳಿದಿದೆ. ರಾಜಕೀಯದೊಂದಿಗೆ ಯಾವುದೇ ಸಂಬಂಧವಿಲ್ಲದ ತಮ್ಮ ತಾಯಿಯನ್ನು ಆರ್‌ಜೆಡಿ-ಕಾಂಗ್ರೆಸ್ ಏಕೆ ನಿಂದಿಸಿತು ಎಂದು ಪ್ರಶ್ನಿಸಿದರು. ಇದನ್ನೂ ಓದಿ:
ಕೆಲವು ಸಮಯದ ಹಿಂದೆ, 100 ವರ್ಷಗಳನ್ನು ಪೂರೈಸಿದ ನಂತರ, ನನ್ನ ತಾಯಿ ನಮ್ಮೆಲ್ಲರನ್ನೂ ತೊರೆದರು. ರಾಜಕೀಯದೊಂದಿಗೆ ಯಾವುದೇ ಸಂಬಂಧವಿಲ್ಲದ ಅವರನ್ನು ಈಗ ಆರ್‌ಜೆಡಿ, ಕಾಂಗ್ರೆಸ್‌ನಿಂದ ನಿಂದಿಸಲಾಯಿತು. ಸಹೋದರಿಯರೇ ಮತ್ತು ತಾಯಂದಿರೇ, ನಾನು ನಿಮ್ಮ ಮುಖಗಳನ್ನು ನೋಡಬಲ್ಲೆ. ನೀವು ಅನುಭವಿಸಿದ ನೋವನ್ನು ನಾನು ಊಹಿಸಬಲ್ಲೆ. ಕೆಲವು ತಾಯಂದಿರ ಕಣ್ಣಲ್ಲಿ ಕಣ್ಣೀರು ನನಗೆ ಕಾಣುತ್ತಿದೆ. ಇದು ತುಂಬಾ ದುಃಖಕರ, ನೋವಿನ ಸಂಗತಿ ಎಂದು ಅವರು ಹೇಳಿದರು. ಇದನ್ನೂ ಓದಿ: ತಲೆಬುರುಡೆ ರಹಸ್ಯ | ಶೀಘ್ರದಲ್ಲೇ ಎಲ್ಲದಕ್ಕೂ ಕ್ಲ್ಯಾರಿಟಿ ಕೊಡ್ತೀನಿ: ಯೂಟ್ಯೂಬರ್ ಸಮೀರ್ ಫಸ್ಟ್ ರಿಯಾಕ್ಷನ್
ನನ್ನ ತಾಯಿ ನಮ್ಮೆಲ್ಲರನ್ನೂ ತೀವ್ರ ಬಡತನದಲ್ಲಿ ಬೆಳೆಸಿದರು. ಅವರು ಎಂದಿಗೂ ತನಗಾಗಿ ಹೊಸ ಸೀರೆಯನ್ನು ಖರೀದಿಸಲಿಲ್ಲ ಮತ್ತು ನಮ್ಮ ಕುಟುಂಬಕ್ಕಾಗಿ ಪ್ರತಿ ಪೈಸೆಯನ್ನೂ ಉಳಿಸುತ್ತಿದ್ದರು. ನನ್ನ ತಾಯಿಯಂತೆ, ನನ್ನ ದೇಶದ ಕೋಟ್ಯಂತರ ತಾಯಂದಿರು ಪ್ರತಿದಿನ ‘ತಪಸ್ಸು’ ಮಾಡುತ್ತಾರೆ ಎಂದು ಭಾವುಕರಾದರು. ಇದನ್ನೂ ಓದಿ: ಚಿಕ್ಕಮಗಳೂರು | ಗಣೇಶ ಉತ್ಸವದಲ್ಲಿ ಡ್ಯಾನ್ಸ್ ಮಾಡ್ತಿದ್ದ ಯುವತಿಯರ ಮೇಲೆ ನೋಟು ತೂರಿ ದರ್ಪ
ಬಿಹಾರ ರಾಜ್ಯ ಜೀವಿಕಾ ನಿಧಿ ಸಖ್ ಸಹಕಾರಿ ಸಂಘ ಲಿಮಿಟೆಡ್ ಜೀವಿಕಾದೊಂದಿಗೆ ಸಂಬಂಧ ಹೊಂದಿರುವ ಸಮುದಾಯದ ಸದಸ್ಯರಿಗೆ ಕೈಗೆಟುಕುವ ಬಡ್ಡಿದರದಲ್ಲಿ ಹಣವನ್ನು ಸುಲಭವಾಗಿ ಪಡೆಯಲು ಅವಕಾಶ ನೀಡುವುದಾಗಿದೆ. ಜೀವಿಕಾದ ಎಲ್ಲಾ ನೋಂದಾಯಿತ ಕ್ಲಸ್ಟರ್ ಮಟ್ಟದ ಒಕ್ಕೂಟಗಳು ಸೊಸೈಟಿಯ ಸದಸ್ಯರಾಗುತ್ತವೆ. ಈ ಸಂಸ್ಥೆಯ ಕಾರ್ಯಾಚರಣೆಗಾಗಿ, ಬಿಹಾರ ಸರ್ಕಾರ ಮತ್ತು ಕೇಂದ್ರ ಸರ್ಕಾರವು ಹಣವನ್ನು ಕೊಡುಗೆ ನೀಡುತ್ತವೆ. ಇದಕ್ಕೆ ಪ್ರಧಾನಿ ಮೋದಿ 105 ಕೋಟಿ ರೂ. ನೆರವು ವರ್ಗಾಯಿಸಿದರು. ಇದು ಸಂಪೂರ್ಣವಾಗಿ ಡಿಜಿಟಲ್ ವ್ಯವಸ್ಥೆಯಾಗಿದೆ. ಇದನ್ನೂ ಓದಿ: Exclusive: ನಟಿ ರನ್ಯಾ ರಾವ್‌ಗೆ ಬರೋಬ್ಬರಿ 102 ಕೋಟಿ ರೂ. ದಂಡ