ನವದೆಹಲಿ: ರಾಜಧಾನಿಯಲ್ಲಿ ಪೊಂಗಲ್ (Pongal) ಸಂಭ್ರಮಾಚರಣೆ ವೇಳೆ ಗಾಯನ ಪ್ರಸ್ತುತಪಡಿಸಿದ ಬಾಲಕಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಶಾಲನ್ನು ಉಡುಗೊರೆಯಾಗಿ ನೀಡಿದ್ದಾರೆ.
ಭಾನುವಾರ ಕೇಂದ್ರ ರಾಜ್ಯ ಸಚಿವ ಎಲ್.ಮುರುಗನ್ ಅವರ ನಿವಾಸದಲ್ಲಿ ಪೊಂಗಲ್ ಸಂಭ್ರಮಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಮಾರಂಭದಲ್ಲಿ ಪ್ರಧಾನಿ ಮೋದಿ ಪಾಲ್ಗೊಂಡಿದ್ದರು. ಪೊಂಗಲ್ ಆಚರಣೆ ವೇಳೆ ಬಾಲಕಿಯೊಬ್ಬಳು ಗಾಯನ ಪ್ರಸ್ತುತಪಡಿಸಿದ್ದಳು. ಇದನ್ನೂ ಓದಿ: ಪಂಚೆ ಧರಿಸಿ ಪೊಂಗಲ್ ಆಚರಿಸಿದ ಪ್ರಧಾನಿ ಮೋದಿ- ವೀಡಿಯೋ ವೈರಲ್
Advertisement
Advertisement
ಯುವ ಗಾಯಕಿ ಕಾರ್ಯಕ್ರಮ ನಡೆಸಿಕೊಟ್ಟಳು. ನಂತರ ಪ್ರಧಾನಿ ಮೋದಿಯವರ ಕಾಲಿಗೆ ನಮಸ್ಕರಿಸಿದಳು. ಬಾಲಕಿ ಪ್ರತಿಭೆಗೆ ಮೆಚ್ಚುಗೆ ಸೂಚಿಸಿದ ಪ್ರಧಾನಿಯವರು ತಮ್ಮ ಶಾಲನ್ನು ಉಡುಗೊರೆಯಾಗಿ ನೀಡಿದ್ದಾರೆ.
Advertisement
ಇಂದು ಮುಂಜಾನೆ ಪೊಂಗಲ್ ಹಬ್ಬದ ಶುಭಾಶಯಗಳನ್ನು ಕೋರಿದ ಪ್ರಧಾನಿ ಮೋದಿ, ಹಬ್ಬವು ‘ಏಕ್ ಭಾರತ್ ಶ್ರೇಷ್ಠ ಭಾರತ’ದ ಭಾವನೆಯನ್ನು ಬಿಂಬಿಸುತ್ತದೆ. ದೇಶವು ನಿನ್ನೆ ಲೋಹ್ರಿ ಹಬ್ಬವನ್ನು ಆಚರಿಸಿತು. ಕೆಲವರು ಇಂದು ಮಕರ ಸಂಕ್ರಾಂತಿಯನ್ನು ಆಚರಿಸುತ್ತಾರೆ. ಕೆಲವರು ನಾಳೆ ಆಚರಿಸುತ್ತಾರೆ. ಮಾಘ ಬಿಹು ಕೂಡ ಬರುತ್ತಿದೆ. ಈ ಹಬ್ಬಗಳಿಗಾಗಿ ದೇಶವಾಸಿಗಳಿಗೆ ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ತೊರೆದು ಶಿವಸೇನೆ ಸೇರ್ಪಡೆಗೊಂಡ ಮಿಲಿಂದ್ ದಿಯೋರಾ
Advertisement
ನಿಮ್ಮೆಲ್ಲರಿಗೂ ಪೊಂಗಲ್ ಹಬ್ಬದ ಶುಭಾಶಯಗಳು. ಈ ಪುಣ್ಯ ಸಂದರ್ಭದಲ್ಲಿ ನಿಮ್ಮ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಸಂತೃಪ್ತಿ ಇರಬೇಕೆಂದು ನಾನು ಬಯಸುತ್ತೇನೆ. ಇಂದು ನಾನು ಸಂಬಂಧಿಕರೊಂದಿಗೆ ಪೊಂಗಲ್ ಆಚರಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ತೆಲಂಗಾಣ ರಾಜ್ಯಪಾಲ ತಮಿಳಿಸೈ ಸೌಂದರರಾಜನ್ ಕೂಡ ಉಪಸ್ಥಿತರಿದ್ದರು. ಎಲ್ಲ ಹಬ್ಬಗಳೂ ಒಂದಲ್ಲ ಒಂದು ರೀತಿಯಲ್ಲಿ ಕೃಷಿಗೆ ಸಂಬಂಧಿಸಿವೆ ಎಂದು ಮೋದಿ ತಿಳಿಸಿದ್ದಾರೆ. ಪೊಂಗಲ್ ಹಬ್ಬದಂದು ಮುರುಗನ್ ಅವರ ನಿವಾಸದಲ್ಲಿ ಪ್ರಧಾನಿ ಮೋದಿ ಅವರು ಸಾಂಸ್ಕೃತಿಕ ಕಾರ್ಯಕ್ರಮ ನೋಡಿ ಖುಷಿಪಟ್ಟರು. ಇದನ್ನೂ ಓದಿ: ರಾಹುಲ್ ಗಾಂಧಿ ಮೊದಲು ಪಕ್ಷದ ನಾಯಕರಿಗೆ ನ್ಯಾಯ ಕೊಡಿಸಲಿ- ʼಕೈʼ ಯಾತ್ರೆಗೆ ಅಮಿತ್ ಮಾಳವಿಯಾ ವ್ಯಂಗ್ಯ
ಪೊಂಗಲ್ ತಮಿಳರು ಆಚರಿಸುವ ಸುಗ್ಗಿಯ ಹಬ್ಬ. ಸಮೃದ್ಧವಾದ ಸುಗ್ಗಿಗೆ ಕೊಡುಗೆ ನೀಡಲು ಸಹಾಯ ಮಾಡುವ ಸೂರ್ಯ, ಪ್ರಕೃತಿ ಮತ್ತು ವಿವಿಧ ಕೃಷಿ ಪ್ರಾಣಿಗಳಿಗೆ ಧನ್ಯವಾದ ಅರ್ಪಿಸುವ ಆಚರಣೆಯಾಗಿದೆ. ಈ ಹಬ್ಬವನ್ನು ನಾಲ್ಕು ದಿನಗಳ ಕಾಲ ಆಚರಿಸಲಾಗುತ್ತದೆ. ಪೊಂಗಲ್ ಥಾಯ್ ಎಂಬ ತಮಿಳು ತಿಂಗಳ ಆರಂಭವನ್ನು ಸೂಚಿಸುತ್ತದೆ. ಇದನ್ನು ಮಂಗಳಕರ ತಿಂಗಳು ಎಂದು ಪರಿಗಣಿಸಲಾಗಿದೆ.