ಚೆನ್ನೈ: ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಸೋಲಾಪುರದ (Solapur )ರಾಯನಗರ ಹೌಸಿಂಗ್ ಸೊಸೈಟಿಯ 15,000 ಮನೆಗಳ ಕೀಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿದ್ದಾರೆ. ಈ ವೇಳೆ ಅವರು ತಮ್ಮ ಬಾಲ್ಯವನ್ನು ನೆನೆದು ಭಾವುಕರಾಗಿದ್ದಾರೆ. ನಾನು ಇದೇ ರೀತಿಯ ಮನೆಯಲ್ಲಿ ಇರಲು ಬಯಸಿದ್ದೆ ಎಂದಿದ್ದಾರೆ.
ಸಾವಿರಾರು ಕೈಮಗ್ಗ ಕಾರ್ಮಿಕರು, ಮಾರಾಟಗಾರರು, ವಿದ್ಯುತ್ ಮಗ್ಗ ಕಾರ್ಮಿಕರು, ಚಿಂದಿ ಆಯುವವರು, ಬೀಡಿ ಕಾರ್ಮಿಕರು ಮತ್ತು ಚಾಲಕರು ಸೇರಿದಂತೆ ಅನೇಕ ಫಲಾನುಭವಿಗಳಿಗೆ ಈ ಯೋಜನೆ ಇಂದು ತಲುಪಿದೆ. ಪಿಎಂಎವೈ-ಅರ್ಬನ್ ಅಡಿಯಲ್ಲಿ ಪೂರ್ಣಗೊಂಡ 90,000ಕ್ಕೂ ಹೆಚ್ಚು ಮನೆಗಳನ್ನು ಮೋದಿ ಫಲಾನುಭವಿಗಳಿಗೆ ಹಸ್ತಾಂತರಿಸಿದ್ದಾರೆ. ಇದನ್ನೂ ಓದಿ: ಬಾಲರಾಮನ ಪ್ರಾಣಪ್ರತಿಷ್ಠೆಗೆ ಆಗಮಿಸುವ ಗಣ್ಯರಿಗೆ ಕ್ಯೂಆರ್ ಕೋಡ್ ಪಾಸ್ ಕಡ್ಡಾಯ- ಸ್ಕ್ಯಾನ್ ಆದ ಬಳಿಕವಷ್ಟೇ ಪ್ರವೇಶ
Advertisement
Advertisement
ಇದೇ ವೇಳೆ ಮಾತನಾಡುವಾಗ ಪ್ರಧಾನಿ ಮೋದಿ ಭಾವುಕರಾಗಿದ್ದಾರೆ. ಇಂತಹ ಮನೆಗಳಲ್ಲಿ ವಾಸಿಸುವ ಬಗ್ಗೆ ಕನಸು ಕಂಡಿದ್ದೆ ಎಂದು ತಮ್ಮ ಬಾಲ್ಯದ ನೆನಪನ್ನು ಮೆಲುಕು ಹಾಕಿದ್ದಾರೆ. ಅಲ್ಲದೇ ಸಾವಿರಾರು ಕುಟುಂಬಗಳ ಕನಸುಗಳು ಸಾಕಾರಗೊಂಡಾಗ ಮತ್ತು ಅವರ ಆಶೀರ್ವಾದವು ನನ್ನ ದೊಡ್ಡ ಸಂಪತ್ತಾದಾಗ ಅದು ಅಪಾರ ತೃಪ್ತಿಯನ್ನು ನೀಡುತ್ತದೆ ಎಂದಿದ್ದಾರೆ.
Advertisement
Advertisement
ರಾಜ್ಯದಲ್ಲಿ ಸುಮಾರು 2,000 ಕೋಟಿ ರೂಪಾಯಿ ಮೌಲ್ಯದ 8 ಅಮೃತ್ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಅವರು ರಾಜ್ಯದಲ್ಲಿ ಪಿಎಂ-ಸ್ವನಿಧಿಯ 10,000 ಫಲಾನುಭವಿಗಳಿಗೆ 1 ಮತ್ತು 2ನೇ ಕಂತುಗಳ ವಿತರಣೆಗೆ ಚಾಲನೆ ನೀಡಿದರು.
ಕಳೆದ 10 ವರ್ಷಗಳಲ್ಲಿ ಸರ್ಕಾರವು ವಿವಿಧ ಯೋಜನೆಗಳ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರ ವರ್ಗಾವಣೆ ಮೂಲಕ 30 ಲಕ್ಷ ಕೋಟಿ ರೂ. ಜಮಾ ಮಾಡಿದೆ. ಕಳೆದ ಹತ್ತು ವರ್ಷಗಳಲ್ಲಿ 25 ಕೋಟಿ ಜನರು ಬಿಪಿಎಲ್ ಪಟ್ಟಿಯಿಂದ ಹೊರಬಂದಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ, ಬಡತನದಿಂದ ಹೊರಬರಲು ಎಲ್ಲಾ ಅಡೆತಡೆಗಳ ವಿರುದ್ಧ ಹೋರಾಡಿದ 25 ಕೋಟಿ ಜನರ ಸಬಲೀಕರಣದ ಆಶಯವನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಾಮಾಜಿಕ ಮಾಧ್ಯಮದಲ್ಲಿ ರಾಮಲಲ್ಲಾ ‘ದಿವ್ಯ ದರ್ಶನ’; ವಿಗ್ರಹದ ಫೋಟೋಗಳು ವೈರಲ್ – ಜೈ ಶ್ರೀರಾಮ್ ಘೋಷಣೆ