ಬೆಂಗಳೂರು: ನಮ್ಮಲ್ಲಿ (ಕಾಂಗ್ರೆಸ್+ಜೆಡಿಎಸ್) 117 ಶಾಸಕರಿದ್ದಾರೆ. ಹಾಗೆಯೇ ಬಿಜೆಪಿಯಲ್ಲಿ 104 ಶಾಸಕರು ಇರೋದು ಗೊತ್ತಿದ್ರೂ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ನಾವೇ ಸರ್ಕಾರ ರಚನೆ ಮಾಡ್ತೀವಿ ಅಂತಾ ಸಂವಿಧಾನ ಬಾಹಿರವಾದ ಹೇಳಿಕೆಯನ್ನ ನೀಡುತ್ತಿದ್ದಾರೆ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ಅವರ ಮಾತಿನ ಅರ್ಥ ಕುದುರೆ ವ್ಯಾಪಾರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ಮೋದಿಯವರೇ ರಾಜ್ಯದಲ್ಲಿ ಕುದುರೆ ವ್ಯಾಪಾರಕ್ಕೆ ಮುಂದಾಗ್ತಿದ್ದಾರೆ. ನಾವು ಈಗಾಗಲೇ ಜೆಡಿಎಸ್ ಗೆ ಷರತ್ತು ರಹಿತವಾಗಿ ಬೆಂಬಲ ನೀಡಿದ್ದೇವೆ. ರಾಜ್ಯಪಾಲರು ನಮಗೆ ಸರ್ಕಾರ ರಚಿಸಲು ಅನುಮತಿ ನೀಡಬೇಕೆಂದು ಮನವಿ ಮಾಡಿಕೊಂಡಿದ್ದೇವೆ ಅಂತಾ ತಿಳಿಸಿದ್ರು.
Advertisement
ಇದೇ ವೇಳೆ ಆಪರೇಷನ್ ಕಮಲದ ಬಗ್ಗೆ ಮಾತನಾಡಿದ ಸಿಎಂ, ನಾವೆಲ್ಲರೂ ಒಗ್ಗಟ್ಟಾಗಿ ಇದ್ದೇವೆ. ಹಾಗಾಗಿ ಆಪರೇಷನ್ ಕಮಲ ನಮ್ಮ ಮೇಲೆ ಯಾವುದೇ ಪರಿಣಾಮ ಬೀರಲ್ಲ. ಒಂದು ವೇಳೆ ಅಗತ್ಯ ಬಿದ್ದರೆ ರೆಸಾರ್ಟ್ ಗೆ ಹೋಗುತ್ತೇವೆ. ಆಪರೇಷನ್ ಕಮಲದಿಂದ ರೆಸಾರ್ಟ್ ಗೆ ಹೋಗಲ್ಲ, ಬಿಜೆಪಿ ಅವರ ಕಿರುಕುಳ ತಪ್ಪಿಸಿಕೊಳ್ಳಲು ಹೋಗ್ತಿವಿ. ಬಿಜೆಪಿಯವರು ನಮ್ಮ ಶಾಸಕರಿಗೆ ಹಣ, ಸಚಿವ ಸ್ಥಾನ ನೀಡುತ್ತೇವೆ ಅಂತಾ ಕಿರುಕುಳ ಕೊಡುತ್ತಾರೆ. ಹಾಗಾಗಿ ರೆಸಾರ್ಟ್ ಗೆ ತೆರಳಿ ಒಂದೇ ಕಡೆ ಉಳಿದುಕೊಳ್ಳುತ್ತೇವೆ ಅಂತಾ ಸ್ಪಷ್ಟಪಡಿಸಿದ್ರು.