ದೇಶಕ್ಕೆ ನರೇಂದ್ರ ಮೋದಿ, ರಾಜ್ಯಕ್ಕೆ ಕುಮಾರಣ್ಣ; ಹೆಚ್‌ಡಿಕೆ ಮತ್ತೆ ಸಿಎಂ ಆಗಲಿ ಎಂದ ನಿಖಿಲ್

Public TV
2 Min Read
Nikhil Kumaraswamy 1

ಚಿಕ್ಕಬಳ್ಳಾಪುರ: ದೇಶಕ್ಕೆ ನರೇಂದ್ರ ಮೋದಿ (PM Modi), ರಾಜ್ಯಕ್ಕೆ ಕುಮಾರಣ್ಣ ಎನ್ನುವ ಮೂಲಕ ಕುಮಾರಸ್ವಾಮಿ ಮತ್ತೆ ಸಿಎಂ ಆಗಬೇಕು ಅಂತ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಹೇಳಿದರು.

ಗೌರಿಬಿದನೂರಿನಲ್ಲಿ ಜನರೊಂದಿಗೆ ಜೆಡಿಎಸ್ ಸದಸ್ಯತ್ವ ಅಭಿಯಾನದ ಕಾರ್ಯಕ್ರಮದ ಅಂಗವಾಗಿ ವೇದಿಕೆಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ (H.D.Kumaraswamy) ಸಿಎಂ ಆಗಬೇಕು ಎಂಬ ಇಂಗಿತ ಹೊರಹಾಕಿದರು. ಇದನ್ನೂ ಓದಿ: ಖಾಲಿ ಮಾತು ಬೇಡ, ಮೊದಲು ದುಡ್ಡು ಕೊಡಿಸಲಿ: ಕುಮಾರಸ್ವಾಮಿಯನ್ನು ಛೇಡಿಸಿದ ಡಿಕೆಶಿ

modi hd kumaraswamy

ಕಾರ್ಯಕ್ರಮದ ನಂತರ ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿ, ಇದು ಕೇವಲ ಜೆಡಿಎಸ್ ಕಾರ್ಯಕರ್ತರ ಭಾವನೆ ಅಷ್ಟೇ ಅಲ್ಲ, ರಾಜ್ಯದ ಜನರ ಭಾವನೆ. ಕುಮಾರಣ್ಣ ಸಿಎಂ ಆಗಿದ್ದಾಗ ಕೊಟ್ಟ ಕೊಡುಗೆಗಳನ್ನ ಜನ ಈಗಲೂ ಸ್ಮರಿಸಿಕೊಳ್ಳುತ್ತಿದ್ದಾರೆ. ಅಂತಹ ವ್ಯಕ್ತಿ ಸಿಎಂ ಆದರೆ ರಾಜ್ಯದಲ್ಲಿ ಸಮೃದ್ಧಿಯ ವಾತವಾರಣ ನಿರ್ಮಾಣವಾಗಲಿದೆ. ನಾನು ರಾಜ್ಯದ ನಾನಾ ಕಡೆ ಪ್ರವಾಸ ಮಾಡಿದಾಗ, ಜನ ಕುಮಾರಣ್ಣ ಸಿಎಂ ಆಗಲಿ ಎಂದು ಬಯಸುತ್ತಿದ್ದಾರೆ ಎಂದರು.

ಜೆಡಿಎಸ್ ಬಿಜೆಪಿ ಮೈತ್ರಿ ಶಾಶ್ವತ
ಜೆಡಿಎಸ್-ಬಿಜೆಪಿ ಮೈತ್ರಿ ಶಾಶ್ವತವಾಗಿ ಇರಲಿದೆ. ಮುಂದಿನ 2028 ರಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿಗೆ 180 ಸ್ಥಾನಗಳು ಸಿಗಲಿದ್ದು, ಸರ್ಕಾರ ರಚನೆ ಮಾಡಲಿದ್ದೇವೆ. ನಮ್ಮ ನಾಯಕರು ಕುಮಾರಣ್ಣ. ಫೇಸ್ ವ್ಯಾಲ್ಯೂ ಇರುವ ನಾಯಕರು ದೇವೇಗೌಡರು, ಕುಮಾರಣ್ಣ. ಕುಮಾರಣ್ಣ ಸಿಎಂ ಆಗಬೇಕು ಎಂಬುದು ನಮ್ಮ ಅಪೇಕ್ಷೆ ಅಲ್ಲ, ಇದು ಕಾರ್ಯಕರ್ತರ ಅಪೇಕ್ಷೆ. ನಾವು 3 ವರ್ಷ ಯಾವುದೇ ವಾಮಮಾರ್ಗದಿಂದ ಅಧಿಕಾರ ಹಿಡಿಯಲ್ಲ. ಮುಂದೆ 2028 ರಲ್ಲಿ 180 ಸ್ಥಾನ ಪಡೆದು ಕೇಂದ್ರದ ನಾಯಕರ ಜೊತೆ ಚರ್ಚೆ ಮಾಡಿ ಸಿಎಂ ಸ್ಥಾನದ ತೀರ್ಮಾನ ಮಾಡಲಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ರಾಜ್ಯದ ಆರು ನೀರಾವರಿ ಯೋಜನೆಗಳಿಗೆ 11,122.76 ಕೋಟಿ ಅನುದಾನಕ್ಕಾಗಿ ಮನವಿ: ಡಿಸಿಎಂ ಡಿಕೆಶಿ

ನನಗೆ ರಾಜ್ಯಾಧ್ಯಕ್ಷ ಸ್ಥಾನದ ಅಪೇಕ್ಷೆ ಇಲ್ಲ
ನಾನು ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇನೆ. ಮುಂದೆ ಗ್ರಾಮ, ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಗಳು ಎದುರಾಗಲಿವೆ. ಅದಕ್ಕಾಗಿ ನಾನು ಹೋರಾಟ ಮಾಡುತ್ತಿದ್ದೇನೆ. ನಾನು ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಅಪೇಕ್ಷೆ ಇಟ್ಟಿಲ್ಲ ಎಂದರು.

Share This Article