ಟೆಲ್ ಅವಿವ್: ಇಸ್ರೇಲ್ ಪ್ಯಾಲೆಸ್ತೀನ್ (Israel Palestinian) ನಡುವೆ ಹೊತ್ತಿರುವ ಯುದ್ಧದ ಕಿಚ್ಚು ಸದ್ಯಕ್ಕೆ ತಣ್ಣಗಾಗುವ ಲಕ್ಷಣಗಳು ಕಂಡು ಬರ್ತಿಲ್ಲ. 13ನೇ ದಿನವೂ ದಾಳಿ ಮುಂದುವರಿದಿದೆ. ಗಾಜಾದ ಹಲವು ನಾಗರಿಕ ಪ್ರದೇಶಗಳ ಮೇಲೆ ಇಸ್ರೇಲ್ ದಾಳಿ ನಡೆಸಿದೆ.
ಗಾಜಾ ನಗರದ ಅಲ್-ಕುಡ್ಸ್ ಆಸ್ಪತ್ರೆಯ ಸುತ್ತಮುತ್ತಲಿನ ನಾಗರಿಕ ಕಟ್ಟಡಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ. ಸೆಂಟ್ರಲ್ ಗಾಜಾದಲ್ಲಿನ ಅಲ್-ಜಹ್ರಾ ಟವರ್ಸ್ ಮೇಲೆ ಇಸ್ರೇಲ್ ಏರ್‌ಸ್ಟ್ರೈಕ್ ಮಾಡಿದ್ದು, ಈ ದಾಳಿಯಲ್ಲಿ ಹಮಾಸ್‌ನ ರಾಜಕೀಯ ಬ್ಯೂರೋದ ಮಹಿಳಾ ನಾಯಕಿ ಜಮೀಲಾ ಬಲಿ ಆಗಿದ್ದಾರೆ. ಮತ್ತೊಂದೆಡೆ ಇಸ್ರೇಲ್ ಮೇಲೆ ಹೆಜ್ಬುಲ್ಲಾ ದಾಳಿ ದಾಳಿ ಮುಂದುವರೆಸಿದೆ. ನಿನ್ನೆ ರಾತ್ರಿ ಇಸ್ರೇಲ್‌ನ 9 ಕಡೆ ಹೆಜ್ಬುಲ್ಲಾ ರಾಕೆಟ್ ಹಾರಿಸಿದೆ. ಟ್ಯಾಂಕ್ ವಿರೋಧಿ ಕ್ಷಿಪಣಿಗಳನ್ನು ಸಹ ಉಡಾಯಿಸಿದೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಕೂಡ ದಾಳಿ ತೀವ್ರಗೊಳಿಸಿ ಹಲವರನ್ನು ಹತ್ಯೆ ಮಾಡಿದೆ.
Advertisement
Advertisement
ಈ ಮಧ್ಯೆ, ದಕ್ಷಿಣ ಗಾಜಾ ಗಡಿಯಲ್ಲಿ ಯುದ್ಧ ಟ್ಯಾಂಕರ್‌ಗಳನ್ನು ಇಸ್ರೇಲ್ ಸಜ್ಜಾಗಿ ನಿಲ್ಲಿಸಿದೆ. ದೊಡ್ಡ ಪ್ರಮಾಣದಲ್ಲಿ ಸೈನಿಕರನ್ನು ನಿಯೋಜಿಸಿದೆ. ಈ ಮೂಲಕ ಮತ್ತಷ್ಟು ದಾಳಿಯ ಸುಳಿವು ನೀಡಿದೆ. ಇಷ್ಟೆಲ್ಲಾ ಉದ್ವಿಗ್ನತೆ ನಡ್ವೆ ಟೆಲ್ ಅವೀವ್‌ಗೆ ಬ್ರಿಟನ್ ಪ್ರಧಾನಿ ರಿಶಿ ಸುನಾಕ್ ಭೇಟಿ ನೀಡಿದ್ದಾರೆ. ಇಸ್ರೇಲ್‌ಗೆ ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ. ಈ ವೇಳೆ, ಹಮಾಸ್ ಉಗ್ರರನ್ನು ನಾಜಿಗಳಿಗೆ, ಐಸಿಸ್‌ಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೋಲಿಸಿ ಟೀಕೆ ಮಾಡಿದ್ದಾರೆ. ಇದನ್ನೂ ಓದಿ:
Advertisement
Advertisement
ಇಸ್ರೇಲ್ ದಾಳಿಯಿಂದ ಜರ್ಜರಿತವಾಗಿರುವ ಪ್ಯಾಲೆಸ್ತೀನ್‌ಗೆ ನೆರವಿನ ಮಹಾಪೂರವೇ ಹರಿದುಬರುತ್ತಿದೆ. ಯುದ್ಧದ ಕಾರಣ ಬಂದ್ ಆಗಿದ್ದ ರಫಾ ಬಾರ್ಡರ್ ಕ್ರಾಸಿಂಗ್ ಮಾರ್ಗವನ್ನು ತೆರೆಯಲು ಈಜಿಪ್ಟ್ ಒಪ್ಪಿಕೊಂಡಿದೆ. ಹೀಗಾಗಿ ಪ್ಯಾಲೆಸ್ತೀನ್‌ಗೆ ಮಾನವೀಯ ನೆರವು ನೀಡಲು ಮಾರ್ಗ ಸುಗಮವಾಗಿದೆ. ಇಸ್ರೇಲ್ ಪರ ನಿಂತಿರುವ ಅಮೆರಿಕ ಮಾನವೀಯ ದೃಷ್ಟಿಯಿಂದ ಗಾಜಾಗೆ 100 ಮಿಲಿಯನ್ ಡಾಲರ್ ನೆರವು ಘೋಷಿಸಿದೆ. ಇಸ್ರೇಲ್ ಮತ್ತು ಈಜಿಪ್ಟ್ ಜೊತೆ ಮಾತಾಡಿರುವ ಅಮೆರಿಕ, ರಫಾ ಗಡಿ ಮೂಲಕ ನಿತ್ಯ 20 ಟ್ರಕ್ ಆಹಾರ ಮತ್ತು ವೈದ್ಯಕೀಯ ಸಾಮಾಗ್ರಿ ಕಳಿಸಲು ಏರ್ಪಾಟು ಮಾಡಿದೆ. ಇದನ್ನೂ ಓದಿ: ಐರನ್ ಡೋಮ್ ಆಯ್ತು ಈಗ ಐರನ್ ಬೀಮ್ – ಏನಿದು ಇಸ್ರೇಲ್ ಪವರ್‌ಫುಲ್ ವೆಪನ್?
ಇನ್ನೂ ಪ್ಯಾಲೆಸ್ತೀನ್ ಪ್ರಾಧಿಕಾರದ ಅಧ್ಯಕ್ಷ ಮೊಹಮ್ಮದ್ ಅಬ್ಬಾಸ್‌ಗೆ ಕರೆ ಮಾಡಿರುವ ಪ್ರಧಾನಿ ಮೋದಿ, ಮಾತುಕತೆ ನಡೆಸಿದ್ದಾರೆ. ಆಸ್ಪತ್ರೆ ಮೇಲಿನ ದಾಳಿಯಲ್ಲಿ ಮೃತಪಟ್ಟವರಿಗೆ ಸಂತಾಪ ತಿಳಿಸಿದ್ದಾರೆ. ಅಗತ್ಯ ಮಾನವೀಯ ನೆರವು ಕಳಿಸುವ ಭರವಸೆಯನ್ನೂ ನೀಡಿದ್ದಾರೆ. ಇಸ್ರೇಲ್-ಪ್ಯಾಲೆಸ್ತೀನ್ ವಿಚಾರವಾಗಿ ನಮ್ಮ ದೀರ್ಘಕಾಲದ ನಿಲುವು ಮುಂದುವರೆಯುತ್ತೆ ಎಂದು ಪ್ರಧಾನಿ ಮೋದಿ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಗಾಜಾ ಆಸ್ಪತ್ರೆಯ ಮೇಲೆ ರಾಕೆಟ್ ದಾಳಿಗೆ 500 ಬಲಿ – ದಾಳಿ ಮಾಡಿದವರು ಯಾರು?
ಹೆಚ್ಚು ನೆರವು ಗಾಜಾದೊಳಗೆ ಹೋದ್ರೆ ಅದು ಹಮಾಸ್ ಉಗ್ರರ ಪಾಲಾಗುತ್ತವೆ ಎಂಬ ಕಾರಣಕ್ಕೆ ನಿತ್ಯ 20 ಟ್ರಕ್ ಅಷ್ಟೇ ಗಾಜಾಗೆ ಪೂರೈಕೆ ಮಾಡಲಾಗುತ್ತದೆ. ಇದು ಉಗ್ರರ ಕೈಗೆ ಸಿಗಬಾರದು ಎಂಬ ಷರತ್ತು ವಿಧಿಸಲಾಗಿದೆ. ಸದ್ಯ ರಫಾ ಗಡಿಯಲ್ಲಿ ನೆರವಿನ ಸಾಮಗ್ರಿ ಹೊತ್ತ ನೂರಾರು ಟ್ರಕ್ ನಿಂತಿವೆ. ಗಾಜಾದ ರಫಾ ಮತ್ತು ಖಾನ್ ಯೂನಿಸ್‌ನಲ್ಲಿ ಲಕ್ಷಾಂತರ ಪ್ಯಾಲಿಸ್ತೇನಿಯರು ನೀರು ಆಹಾರಕ್ಕಾಗಿ ಕಾಯ್ತಿದ್ದಾರೆ. ಮತ್ತೊಂದ್ಕಡೆ, ನಿನ್ನೆ ಆಸ್ಪತ್ರೆಯ ಮೇಲೆ ನಡೆದಿರುವ ದಾಳಿಯನ್ನು ಖಂಡಿಸಿ ವಿಶ್ವದ ವಿವಿಧೆಡೆ ಪ್ರತಿಭಟನೆಗಳು ಮುಂದುವರೆದಿವೆ.
Web Stories