ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಪ್ರಭಾವ ಬಳಸಿ ರಷ್ಯಾ-ಉಕ್ರೇನ್ (Russia-Ukraine War) ಯುದ್ಧವನ್ನು ನಿಲ್ಲಿಸಬಹುದು ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelenskyy) ಹೇಳಿದ್ದಾರೆ.
ಭಾರತದ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ನಿಸ್ಸಂದೇಹವಾಗಿ ಪ್ರಧಾನಿ ಮೋದಿ ಈ ಕೆಲಸ ಮಾಡಬಹುದು. ಅಗ್ಗದ ಶಕ್ತಿಯನ್ನು ನಿರಾಕರಿಸುವುದು ಮತ್ತು ಆದ್ದರಿಂದ ಯುದ್ಧಗಳನ್ನು ನಡೆಸುವ ಮಾಸ್ಕೋದ ಸಾಮರ್ಥ್ಯವನ್ನು ಕಡಿಮೆ ಮಾಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
Advertisement
Advertisement
ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ದಿನಾಂಕ ಹತ್ತಿರ ಬರುತ್ತಿದ್ದಂತೆ ಝೆಲೆನ್ಸ್ಕಿ ಅವರಿಂದ ಈ ಹೇಳಿಕೆ ಬಂದಿರುವುದು ವಿಶೇಷ. ಒಂದು ವೇಳೆ ನಾನು ಗೆದ್ದರೆ ಉಕ್ರೇನ್ ನೀಡುತ್ತಿರುವ ಸೇನಾ ನೆರವನ್ನು ಕಡಿತಗೊಳಿಸುತ್ತೇನೆ ಎಂದು ರಿಪಬ್ಲಿಕನ್ ಅಭ್ಯರ್ಥಿ ಟ್ರಂಪ್ ಈಗಾಗಲೇ ಹೇಳಿಕೆ ನೀಡಿದ್ದಾರೆ. ಟ್ರಂಪ್ ಅಧ್ಯಕ್ಷರಾಗಿ ಆಯ್ಕೆಯಾದರೆ ಉಕ್ರೇನ್ ಹೋರಾಟಕ್ಕೆ ಭಾರೀ ಹಿನ್ನಡೆಯಾಗಲಿದೆ.
Advertisement
ನಿರ್ದಿಷ್ಟವಾಗಿ ಹೇಳುವುದಾದರೆ, ಬಲವಂತವಾಗಿ ರಷ್ಯಾಕ್ಕೆ ಗಡೀಪಾರು ಮಾಡಲಾದ ಉಕ್ರೇನಿಯನ್ ಮಕ್ಕಳನ್ನು ಮರಳಿ ಕರೆತರಲು ಸಹಾಯ ಮಾಡುವಂತೆ ಝೆಲೆನ್ಸ್ಕಿ ಮೋದಿ ಅವರನ್ನು ಕೇಳಿದರು. ರಷ್ಯಾ ಅಧ್ಯಕ್ಷ ಪುಟಿನ್ (Vladimir Putin) ಬಳಿ ಮೋದಿ ತಮ್ಮ ಪ್ರಭಾವ ಬಳಸಿ ಉಕ್ರೇನಿಯನ್ ಮಕ್ಕಳನ್ನು ಮರಳಿ ಕರೆತರಲು ಒತ್ತಾಯಿಸಬಹುದು ಎಂದು ಹೇಳಿದರು. ಇದನ್ನೂ ಓದಿ: ಗಡಿಯಲ್ಲಿ ಶಾಂತಿ ಸ್ಥಾಪನೆಗೆ ಭಾರತ-ಚೀನಾ ಹ್ಯಾಂಡ್‌ಶೇಕ್; ಫಲ ನೀಡುತ್ತಾ ಒಪ್ಪಂದ?
Advertisement
ನಾವು ಈಗಲೇ ನ್ಯಾಟೋ ಸದಸ್ಯತ್ವವನ್ನು ಕೇಳುತ್ತಿಲ್ಲ. ಏಕೆಂದರೆ ಯುದ್ಧದ ಸಮಯದಲ್ಲಿ ಅದು ಸಾಧ್ಯವಿಲ್ಲ ಎಂದು ಝೆಲೆನ್ಸ್ಕಿ ತಿಳಿಸಿದರು.