ಮೋದಿಯನ್ನು ಹೊಗಳಿ ಮೆಟ್ರೋದಲ್ಲಿ ಸೆಲ್ಫಿ ಕ್ಲಿಕ್ಕಿಸಿದ ಆಸ್ಟ್ರೇಲಿಯಾದ ಪ್ರಧಾನಿ

Public TV
1 Min Read
PM Modi and PM Malcolm Turnbull

ನವದೆಹಲಿ: ಭಾರತದ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ಪ್ರಧಾನಿ ಮಾಲ್ಕಂ ಟರ್ನ್‍ಬುಲ್ ಪ್ರಧಾನಿ ಮೋದಿ ಅವರ ಜೊತೆಗೆ ದೆಹಲಿಯಲ್ಲಿ ಮೆಟ್ರೋ ಪ್ರಯಾಣ ಮಾಡಿದ್ದಾರೆ.

ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಭಾರತಕ್ಕೆ ಆಗಮಿಸಿರುವ ಆಸ್ಟ್ರೇಲಿಯಾ ಪ್ರಧಾನಿ ಮಾಲ್ಕಂ ಟರ್ನ್‍ಬುಲ್ ಪ್ರಧಾನಿ ಮೋದಿ ಜೊತೆ ಮಾತುಕತೆ ನಡೆಸಿದ ಬಳಿಕ ಮೆಟ್ರೋದಲ್ಲಿ ಅಕ್ಷರಧಾಮ ದೇವಾಲಯಕ್ಕೆ ಭೇಟಿ ನೀಡಿದರು. ದೆಹಲಿಯ ಮೆಟ್ರೋದಲ್ಲಿ ಮಾಲ್ಕಂ ಟರ್ನ್‍ಬುಲ್ ಅವರು ಮೋದಿ ಜೊತೆಗೆ ಸೆಲ್ಫಿ ಫೋಟೋ ಕ್ಲಿಕ್ಕಿಸಿದರು.

ಪ್ರಧಾನಿಯಾಗಿ ಅಧಿಕಾರ ವಹಿಸಿದ ಬಳಿಕ ಮೊದಲ ಬಾರಿಗೆ ಟರ್ನ್‍ಬುಲ್ ಭಾರತ ಭೇಟಿ ನೀಡಿದ್ದು, ರಾಷ್ಟ್ರಪತಿ ಭವನದಲ್ಲಿ ಪ್ರಧಾನಿ ಮೋದಿ ಅವರನ್ನು ಬರ ಮಾಡಿಕೊಂಡರು. ಟರ್ನ್‍ಬುಲ್ ನಾಲ್ಕು ದಿನದ ಭೇಟಿಯಲ್ಲಿದ್ದು, ದ್ವಿಪಕ್ಷೀಯ ಸಭೆ ನಡೆಯಲಿದ್ದು, ಹಲವು ಒಪ್ಪಂದಗಳಿಗೆ ಸಹಿ ಬೀಳಲಿದೆ.

ಮೋದಿಗೆ ಹೊಗಳಿಕೆ: ಮೆಟ್ರೋ ಪ್ರಯಾಣಕ್ಕೂ ಮುನ್ನಾ ಮಾತನಾಡಿದ ಅವರು ಮೋದಿ ಅವರು ಭಾರತವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುತ್ತಿದ್ದಾರೆ. ಭಾರತದ ಸಾಧನೆಗಳು ಇಡೀ ವಿಶ್ವ ಮೆಚ್ಚುವಂಥದ್ದಾಗಿವೆ ಎಂದು ಹೇಳುವ ಮೂಲಕ ಹೊಗಳಿದರು. ಆಸ್ಟ್ರೇಲಿಯಾದಲ್ಲಿ 5 ಲಕ್ಷ ಮಂದಿ ಭಾರತೀಯರಿದ್ದಾರೆ. ಭಾರತದೊಂದಿಗೆ ಮತ್ತಷ್ಟು ನಿಕಟವಾಗಿ ಕೆಲಸ ಮಾಡಲಿದ್ದೇವೆ ಎಂದು ಟರ್ನ್‍ಬುಲ್ ಹೇಳಿದರು.

Modi and MalcolmTurnbull 8

Modi and MalcolmTurnbull 9

Modi and MalcolmTurnbull 10

Modi and MalcolmTurnbull 11

Modi and MalcolmTurnbull 12
The Prime Minister of Australia, Mr. Malcolm Turnbull paying floral tributes at the Samadhi of Mahatma Gandhi, at Rajghat, in Delhi on April 10, 2017.

Modi and MalcolmTurnbull 13

Modi and MalcolmTurnbull 1

Modi and MalcolmTurnbull 2

 

Modi and MalcolmTurnbull 3

 

Modi and MalcolmTurnbull 4

 

Modi and MalcolmTurnbull 5

 

Modi and MalcolmTurnbull 6

 

Modi and MalcolmTurnbull 7

 

Share This Article
Leave a Comment

Leave a Reply

Your email address will not be published. Required fields are marked *