ಚೆನ್ನೈ: ಪಿಎಂ ಕಿಸಾನ್ (PM Kisan) ಯೋಜನೆಯ 21ನೇ ಕಂತಿನ 18,000 ಕೋಟಿಗೂ ಅಧಿಕ ಹಣವನ್ನು ಪ್ರಧಾನಿ ನರೇಂದ್ರ ಮೋದಿ (PM Modi) ಅವರಿಂದು ಬಿಡುಗಡೆ ಮಾಡಿದರು.
ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ದಕ್ಷಿಣ ಭಾರತ ನೈಸರ್ಗಿಕ ಕೃಷಿ ಶೃಂಗಸಭೆ 2025 ಅನ್ನು ಉದ್ಘಾಟಿಸಿದ ನಂತರ ಪಿಎಂ ಕಿಸಾನ್ ಯೋಜನೆಯ 21 ನೇ ಕಂತನ್ನು ಬಿಡುಗಡೆ ಮಾಡಿದರು.ಇದನ್ನೂ ಓದಿ: ಆಪರೇಷನ್ ಸಿಂಧೂರಕ್ಕೆ ಪ್ರತಿಯಾಗಿ ಮಹಿಳೆಯರಿಂದಲೇ ಭಾರತದ ಮೇಲೆ ದಾಳಿ – ಜೈಶ್ ಸಂಚು
ದೇಶಾದ್ಯಂತ ಸುಮಾರು ಒಂಬತ್ತು ಕೋಟಿ ರೈತರಿಗೆ ಈ ಯೋಜನೆಯಿಂದ ಪ್ರಯೋಜನ ಸಿಗುತ್ತಿದ್ದು, 21ನೇ ಕಂತಿನಲ್ಲಿ 18,000 ಕೋಟಿ ರೂ.ಗಳಿಗಿಂತ ಹೆಚ್ಚು ಹಣ ರೈತರ ಖಾತೆಗೆ ಜಮೆಯಾಗಿದೆ.
ಲಭ್ಯವಿರುವ ಮಾಹಿತಿಯ ಪ್ರಕಾರ, ಈ ಯೋಜನೆಯಡಿಯಲ್ಲಿ 11 ಕೋಟಿಗೂ ಹೆಚ್ಚು ರೈತ ಕುಟುಂಬಗಳಿಗೆ ಈಗಾಗಲೇ 3.70 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ವಿತರಿಸಲಾಗಿದೆ. ಈ ನಿಧಿಯು ರೈತರಿಗೆ ಕೃಷಿ ಸಾಮಾಗ್ರಿಗಳ ಖರೀದಿಸಲು ಸಹಾಯ ಮಾಡಿದೆ.ಇದನ್ನೂ ಓದಿ: ದೆಹಲಿಯಲ್ಲಿ ಡಿಕೆಶಿಯಿಂದ ಚೆಕ್‌ಮೇಟ್ ಆಟ – ಖರ್ಗೆ ಬಳಿ ಡಿಸೈಡ್ ರಹಸ್ಯ ಏನು?

