ಬೆಂಗಳೂರು: ಪ್ರೀತಿಯ ತಮ್ಮನಿಗೆ ಐರಾ ತಿಂಡಿ ತಿನ್ನಿಸುತ್ತಿರುವ ಕ್ಯೂಟ್ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Advertisement
ನಟ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಆಗಾಗ ತಮ್ಮ ಮಕ್ಕಳು ಆಟ ಆಡುತ್ತಿರುವ, ತುಂಟ ಮತ್ತು ಚೇಷ್ಟೆಯ ಕ್ಯೂಟ್ ವೀಡಿಯೋಗಳನ್ನು ಅಭಿಮಾನಿಗಳೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಯಶ್ ಕೂಡ ತಮ್ಮ ಬ್ಯೂಸಿ ಶೆಡ್ಯೂಲ್ಗಳ ಮಧ್ಯೆ ಪತ್ನಿ ಹಾಗೂ ಮಕ್ಕಳನ್ನು ಡಿನ್ನರ್, ಪ್ರವಾಸ, ಔಟಿಂಗ್ ಎಂದು ಕರೆದುಕೊಂಡು ಹೋಗುವ ಮೂಲಕ ಫ್ಯಾಮಿಲಿ ಜೊತೆಗೆ ಆಗಾಗ ಕಾಲ ಕಳೆಯುತ್ತಿರುವ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
Advertisement
Advertisement
ಸದ್ಯ ಮದುವೆ ಬಳಿಕ ರಾಧಿಕ ಪಂಡಿತ್ ಸಿನಿಮಾದಿಂದ ದೂರ ಉಳಿದಿದ್ದು, ಮಕ್ಕಳ ಬಗ್ಗೆ ಕಾಳಜಿ ವಹಿಸುವುದರಲ್ಲಿ ಫುಲ್ ಬ್ಯೂಸಿಯಾಗಿದ್ದಾರೆ. ಈ ಮಧ್ಯೆ ಐರಾ ಮತ್ತು ಯಥರ್ವ್ನ ಹಳೆಯ ವಿಡಿಯೋವೊಂದನ್ನು ರಾಧಿಕಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಐರಾಗೆ ಹುಟ್ಟುಹಬ್ಬದ ಸಂಭ್ರಮ – ನಿನ್ನ ಕೈ ಹಿಡಿಯಲು ಯಾವಾಗಲೂ ಇರುತ್ತೇನೆ ಅಂದ ರಾಧಿಕಾ
Advertisement
ವೀಡಿಯೋದಲ್ಲಿ ಐರಾ ಪ್ಲೇಟ್ ಹಿಡಿದುಕೊಂಡು ತಾನು ತಿನ್ನುತ್ತಿರುವ ತಿಂಡಿಯನ್ನು ಯಥರ್ವ್ಗೆ ತಿನ್ನಿಸಲು ಕೈ ಚಾಚುತ್ತಾಳೆ. ಆಗ ರಾಧಿಕಾ ಪಂಡಿತ್ ಐರಾಗೆ ತಿನ್ನಿಸದಂತೆ ತಡೆತ್ತಾರೆ. ಆದರೂ ತಮ್ಮನನ್ನು ಮುದ್ದು ಮಾಡುತ್ತಾ, ಐರಾ ತಿಂಡಿಯನ್ನು ತಿನ್ನಿಸಲು ಮತ್ತೆ ಪ್ರಯತ್ನಿಸುವುದನ್ನು ಕಾಣಬಹುದಾಗಿದೆ. ಈ ವೀಡಿಯೋ ಜೊತೆಗೆ ಯಾರಾದರೂ ಪ್ಲೀಸ್ ನನ್ನ ತಮ್ಮನಿಗೆ ತಿನ್ನಿಸಲು ಬಿಡಿ ಎಂದು ಕ್ಯಾಪ್ಷನ್ನಲ್ಲಿ ಬರೆಯಲಾಗಿದೆ.
View this post on Instagram
ಸದ್ಯ ಈ ಕ್ಯೂಟ್ ವೀಡಿಯೋ ಸೋಶಿಯಲ್ ಮೀಡಿಯದಲ್ಲಿ ವೈರಲ್ ಆಗುತ್ತಿದ್ದು, ಅಕ್ಕ- ತಮ್ಮನ ಪ್ರೀತಿ ನೋಡಿ ಅಭಿಮಾನಿಗಳು ಕ್ಯೂಟ್ ಎಂದು ಕಾಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ 3 ನೇ ವಸಂತಕ್ಕೆ ಕಾಲಿಟ್ಟ ಐರಾಗೆ ರಾಧಿಕಾ ಪಂಡಿತ್ ಸೋಶಿಯಲ್ ಮೀಡಿಯಾದಲ್ಲಿ ಫೋಟೋವೊಂದನ್ನು ಪೋಸ್ಟ್ ಮಾಡಿ, ನಿನ್ನ ಕೈ ಹಿಡಿಯಲು ಸದಾ ಯಾವಾಗಲೂ ನಿನ್ನೊಂದಿಗೆ ಇರುತ್ತೇನೆ. ಹುಟ್ಟುಹಬ್ಬದ ಶುಭಾಶಯಗಳು ಎಂಜೆಲ್ ಎಂದು ಭಾವನಾತ್ಮಕವಾಗಿ ಶುಭಾಶಯ ತಿಳಿಸಿದ್ದರು. ಇದನ್ನೂ ಓದಿ: ಜನ ಥಿಯೇಟರ್ಗೆ ಬಂದು ಸಿನಿಮಾ ನೋಡಿದ್ರೆ ನಮಗೆ ಖುಷಿ: ಶ್ರೀಮುರಳಿ