ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರನ್ನು ಈ ಕೂಡಲೇ ಲಾಕ್‍ಡೌನ್ ಮಾಡುವುದು ಒಳ್ಳೆಯದು, ಕೂಡಲೇ ಲಾಕ್‍ಡೌನ್ ಮಾಡಿ ಪರಿಸ್ಥಿತಿ ತುಂಬಾ ಕೈ ಮೀರಿ ಹೋಗಿದೆ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಸಂಘದ ವೈದ್ಯರು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.
ಜಿಲ್ಲೆಯ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆ ಎರಡನ್ನೂ ಸೇರಿಸಿದ್ರು ಜಿಲ್ಲೆಯಲ್ಲಿ ಇರುವುದು ಹತ್ತೇ ಹತ್ತು ವೆಂಟಿಲೇಟರ್. ಉದಾಹರಣೆಗೆ ಹೇಳೋದಾದ್ರೆ, ನಗರದಲ್ಲಿ ಒಂದೂವರೆ ಲಕ್ಷ ಜನ ಎಂದು ಭಾವಿಸಿ, ಶೇ. 10ರಷ್ಟು ಜನಕ್ಕೆ ಇನ್ಫೆಕ್ಟ್ ಆದ್ರು 15 ಸಾವಿರ ಜನ ಆಗ್ತಾರೆ. ಅವರಲ್ಲಿ ಒಂದು ಪರ್ಸೆಂಟ್ ಜನಕ್ಕೆ ರೆಸ್ಪಿರೇಟರ್ ಪ್ರಾಬ್ಲಂ ಆದ್ರು 150 ಜನ ಆಗ್ತಾರೆ. ನಮ್ಮಲ್ಲಿ ಇರೋದು 10 ವೆಂಟಿಲೇಟರ್. ಬಂದವರೆಲ್ಲರನ್ನೂ ಹಾಸನ, ಮಂಗಳೂರು ಕಳುಹಿಸಲು ಸಾಧ್ಯವಿಲ್ಲ. ಹಾಗಾಗಿ ಕೂಡಲೇ ಜಿಲ್ಲೆಯನ್ನು ಲಾಕ್‍ಡೌನ್ ಮಾಡೋದು ಒಳ್ಳೆಯದು ಎಂದು ವೈದ್ಯರು ಮನವಿ ಮಾಡಿದ್ದಾರೆ.
Advertisement
Advertisement
ಸೋಂಕಿತರ ಸಂಖ್ಯೆ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. ಡಿಟೆಕ್ಟ್ ಆಗಿಲ್ಲ. ಜನ ಹೇಗೆ ಬೇಕು ಹಾಗೇ ಓಡಾಡಿಕೊಂಡಿದ್ದಾರೆ. ಪರಿಸ್ಥಿತಿ ಕೈಮೀರಿದ್ರೆ ಏನೂ ಮಾಡಲು ಸಾಧ್ಯವಿಲ್ಲ. ಹಾಗಾಗಿ ಜಿಲ್ಲಾಡಳಿತ ಕೂಡಲೇ ಚಿಕ್ಕಮಗಳೂರನ್ನು ಲಾಕ್ ಡೌನ್ ಮಾಡೋದು ಒಳ್ಳೆಯದು ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಂಡಿದ್ದಾರೆ. ಈಗ ಇರೋ ಹತ್ತು ವೆಂಟಿಲೇಟರ್‍ಗಳ ಜೊತೆ ಇನ್ನತ್ತು ವೆಂಟಿಲೇಟರ್ ಬಂದ್ರೆ ಹೇಗೋ ನಿಭಾಯಿಸಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.
Advertisement
ಅಲ್ಲದೆ ಸಿಬ್ಬಂದಿಗಳ ಕೊರತೆ ಇಲ್ಲ, ವೈದ್ಯರು ಇದ್ದಾರೆ. 50-100 ಜನಕ್ಕೆ ಸಮಸ್ಯೆಯಾದರೆ ನಿಬಾಯಿಸಬಹುದು. ಜಾಸ್ತಿಯಾದರೆ ಕಷ್ಟ. ಏನೂ ಮಾಡಲು ಆಗಲ್ಲ. ಹಾಗಾಗಿ ಕೂಡಲೇ ಜಿಲ್ಲೆಯನ್ನ ಲಾಕ್‍ಡೌನ್ ಮಾಡೋದು ಒಳ್ಳೆಯದು ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಂಡಿದ್ದಾರೆ.