ಕೋಲ್ಕತ್ತಾ: ದಯವಿಟ್ಟು ಪ್ರಜಾಪ್ರಭುತ್ವವನ್ನು ಉಳಿಸಿ ಎಂದು ಸುಪ್ರೀಂ ಕೋರ್ಟ್ (Supreme Court) ಮುಖ್ಯ ನ್ಯಾಯಮೂರ್ತಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಒತ್ತಾಯಿಸಿದ್ದಾರೆ.
ದೇಶದಲ್ಲಿ ಪ್ರಜಾಪ್ರಭುತ್ವ ಸಂಸ್ಥೆಗಳ ಉಸಿರುಗಟ್ಟಿಸಲಾಗುತ್ತಿದೆ. ಇದೇ ಪ್ರವೃತ್ತಿಯನ್ನು ಮುಂದುವರಿಸಿದರೆ, ರಾಷ್ಟ್ರವು ಅಧ್ಯಕ್ಷೀಯ ಸರ್ಕಾರಕ್ಕೆ ನೇತೃತ್ವ ವಹಿಸಬೇಕಾಗುತ್ತದೆ ಎಂದು ಎಚ್ಚರಿಸಿದ ಬ್ಯಾನರ್ಜಿ ಅವರು, ಪ್ರಜಾಪ್ರಭುತ್ವ ಮತ್ತು ಫೆಡರಲ್ ರಚನೆಯ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸಿಜೆಐಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಮನ್ ಕಿ ಬಾತ್‍ನಲ್ಲಿ ಬೆಂಗಳೂರಿನ ಸುರೇಶ್ ಕುಮಾರ್ರನ್ನು ಪ್ರಶಂಸಿಸಿದ ಮೋದಿ
Advertisement
Advertisement
ಕೋಲ್ಕತ್ತಾದಲ್ಲಿ ನ್ಯಾಷನಲ್ ಯೂನಿವರ್ಸಿಟಿ ಆಫ್ ಜ್ಯೂರಿಡಿಕಲ್ ಸೈನ್ಸಸ್ (ಎನ್‌ಯುಜೆಎಸ್) ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ ಸಿಜೆಐ ಯು.ಯು.ಲಲಿತ್ (UU Lalit) ಅವರ ಉಪಸ್ಥಿತಿಯಲ್ಲಿ ಬ್ಯಾನರ್ಜಿ ಮಾತನಾಡಿದ್ದಾರೆ.
Advertisement
ಜನರನ್ನು ಕಿರುಕುಳದಿಂದ ರಕ್ಷಿಸಲು ನ್ಯಾಯಾಂಗ ಮುಂದಾಗಬೇಕು. ಎಲ್ಲಾ ಪ್ರಜಾಸತ್ತಾತ್ಮಕ ಅಧಿಕಾರವನ್ನು ಸಮಾಜದ ಒಂದು ನಿರ್ದಿಷ್ಟ ವರ್ಗವು ವಶಪಡಿಸಿಕೊಳ್ಳುತ್ತಿದೆ. ಪ್ರಜಾಪ್ರಭುತ್ವ ಎಲ್ಲಿದೆ? ದಯವಿಟ್ಟು ಪ್ರಜಾಪ್ರಭುತ್ವವನ್ನು ಉಳಿಸಿ ಎಂದು ಕೇಳಿಕೊಂಡಿದ್ದಾರೆ. ಇದನ್ನೂ ಓದಿ: ಒಟ್ಟು 9 ಸಾವಿರ ವ್ಯಾಗನ್ ಆರ್, ಸೆಲೆರಿಯೊ, ಇಗ್ನಿಸ್ ಕಾರುಗಳನ್ನು ಹಿಂದಕ್ಕೆ ಪಡೆದ ಮಾರುತಿ
Advertisement
ನಾನು ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ಅವರನ್ನು ಅಭಿನಂದಿಸಬೇಕು. ನಾನು ಈ ವೇದಿಕೆಯನ್ನು ಬಳಸಬಹುದೇ ಎಂದು ನನಗೆ ತಿಳಿದಿಲ್ಲ. ಆದರೆ ಎರಡು ತಿಂಗಳಲ್ಲಿ ಅವರು ನ್ಯಾಯಾಂಗ ಎಂದರೆ ಏನು ಎಂದು ತೋರಿಸಿದ್ದಾರೆ ಎಂದು ಬಣ್ಣಿಸಿದ್ದಾರೆ.
ಜನರು ನ್ಯಾಯಾಂಗದ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದಾರೆ ಎಂದು ನಾನು ಹೇಳುತ್ತಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ನ್ಯಾಯಾಂಗವು ಜನರನ್ನು ಅನ್ಯಾಯದಿಂದ ರಕ್ಷಿಸಬೇಕು. ಜನರ ಕೂಗನ್ನು ಆಲಿಸಬೇಕು. ಇದೀಗ ಜನರು ಮುಚ್ಚಿದ ಬಾಗಿಲುಗಳ ಹಿಂದೆ ಅಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.