ಬೆಂಗಳೂರು: ಇಂದು ಮಧ್ಯರಾತ್ರಿ ಹೊಸ ವರ್ಷದ ಆಚರಣೆ ಕೇಕ್ ಕತ್ತರಿಸುವ ಮೂಲಕ ಆರಂಭವಾಗುತ್ತದೆ. ಹೊಸ ವರ್ಷಕ್ಕೆ ಸ್ಪೆಷಲ್ ಕೇಕ್ ಹುಡ್ಕೊಂಡು ಹೊರಡುವ ಮಂದಿಯೇ ಎಚ್ಚರವಾಗಿರಿ. ಯಾಕಂದ್ರೆ ಹೊಸ ವರ್ಷದ ಮೂಡ್ ಕೆಡಿಸಲು ಸಪ್ಲೈ ಆಗುತ್ತಿದೆ ಕಿಲ್ಲರ್ ಕೇಕ್.
ಹೌದು. ಪಬ್ಲಿಕ್ ಟಿವಿಯ ರಹಸ್ಯ ಕ್ಯಾಮೆರಾ ಕಣ್ಣಿನಲ್ಲಿ ಹಾಗೂ ರಿಯಾಲಿಟಿ ಚೆಕ್‍ನಲ್ಲಿ ಕಲರ್ ಕೇಕ್‍ನ ಅಸಲಿ ಬಣ್ಣಗಳು ಬಯಲಾಗಿದೆ. ಜೀವನದಲ್ಲಿ ಮತ್ತೆಂದೂ ಕೇಕ್ ತಿನ್ನಬಾರದು ಅಂತಾ ಅನ್ನಿಸುವಷ್ಟು ಕೆಟ್ಟದಾಗಿ ಕೇಕ್ ತಯಾರಾಗುತ್ತದೆ. ಬೆಂಗಳೂರು ಮಾತ್ರವಲ್ಲದೇ ಗದಗ್ ಹಾಗೂ ಹುಬ್ಬಳ್ಳಿಯಲ್ಲೂ ಇದೇ ರೀತಿಯಲ್ಲಿ ಕೇಕ್ ಗಳು ತಯಾರಾಗುತ್ತವೆ.
Advertisement
Advertisement
ಅದೇನ್ ಕಲರ್ರು. ಅದೇನು ಸಾಫ್ಟು. ವೆರೈಟಿ ಡಿಸೈನು. ಬೆಣ್ಣೆಯಂತಹ ಕ್ರೀಂನಲ್ಲಿ ಸ್ಟ್ರಾಬರಿ, ಚೆರ್ರಿ, ಹಿಂಗೆ ಕಣ್ಣು ಕುಕ್ಕುವಂತಹ ಡಿಸೈನ್ಸ್ ಗಳು. ಇದು ಹೊಸ ವರ್ಷಕ್ಕೆ ರೆಡಿಯಾಗಿರೋ ವೆರೈಟಿ ವೆರೈಟಿ ಕೇಕುಗಳು. ನ್ಯೂ ಇಯರ್ ಸೆಲಬ್ರೇಷನ್‍ಗೆ ಎಣ್ಣೆ ಹೊಡೆಯೋ ಮುಂಚೆ ಕೇಕ್ ಕಟ್ಟಿಂಗ್ ಮಾಡೋದು ಕಾಮನ್. ಆದ್ರೆ ಈ ಕಲರ್‍ಫುಲ್ ಕೇಕ್‍ನ ಅಸಲಿ ಕಥೆ ಇಲ್ಲಿದೆ. ಇದನ್ನೂ ಓದಿ: ‘ವೆಲ್’ಕಂ 2019- ಆರೋಗ್ಯಕರ ರೀತಿಯಲ್ಲಿ ವರ್ಷಾಚರಣೆ
Advertisement
ನಾಗಾವರ ಬೇಕರಿ:
ಬೇಕರಿಯ ಗ್ಲಾಸ್‍ನಲ್ಲಿ ಅತ್ಯಾಕರ್ಷಕವಾಗಿ ಕಾಣೋ ಕೇಕ್ ಗಳು ಹೇಗೆ ತಯಾರಾಗ್ತವೆ ಅನ್ನೋದನ್ನು ನೋಡಲು ಕೇಕ್ ರೆಡಿಮಾಡ್ತೀರೋ ನಾಗವಾರದ ಒಂದು ಬೇಕರಿ ಬಳಿ ಹೋಗಿದ್ವಿ. ಆದ್ರೆ ಅಲ್ಲಿ ಹೋಗಿ ಕಿಚನ್ ಕಡೆ ದೃಷ್ಟಿ ಹಾಯಿಸಿದ್ರೆ ವಾಕರಿಕೆ ಬರೋದೊಂದು ಬಾಕಿಯಿತ್ತು. ಕೋಳಿಫಾರಂಗೆ ಹೊಂದಿಕೊಂಡಂತೆ ಇರುವ ಈ ಬೇಕರಿಯವನದ್ದು ಬೆಂಗಳೂರಿನಲ್ಲಿ ಮೂರು ಬ್ರ್ಯಾಂಚ್ ಇದ್ಯಂತೆ. ಜಗತ್ತಿನ ಅಷ್ಟು ಗಲೀಜುಗಳನ್ನು ಈತನ ಬೇಕರಿಯ ಕಿಚನ್‍ನಲ್ಲಿಯೇ ಇದ್ಯೋ ಅನ್ನೋ ಹಾಗಿತ್ತು ಆ ಬೇಕರಿಯ ಸ್ಥಿತಿ. ಇದನ್ನೂ ಓದಿ: ಮನೆಯಲ್ಲೇ ಸಿಂಪಲ್ ಎಗ್‍ಲೆಸ್ PLUM CAKE ಮಾಡೋದು ಹೇಗೆ?
Advertisement
ಅಲಲ್ಲಿ ಕಸ, ಗಲೀಜು ಬಟ್ಟೆ ಧರಿಸಿ ಕೇಕ್ ಲಟ್ಟಿಸೋ ಈತ ಕಪ್ಪು ಕಪ್ಪಾಗಿ ಅಲ್ಲಲ್ಲಿ ತುಕ್ಕು ಹಿಡಿದಿರುವ ಕಬ್ಬಿಣದ ಟ್ರೇನಲ್ಲಿ ಬ್ರೆಡ್‍ಗಳನ್ನು ಇಟ್ಟಿದ್ದಾನೆ. ಜೊತೆಗೆ ನೊಣಗಳ ಹಾರಾಟ, ಬ್ರೆಡ್‍ಗಳಿಗೆ ಮಾಸಿದ ಬಣ್ಣದ ಪೇಪರ್‍ಗಳನ್ನೂ ಇಟ್ಟಿದ್ದಾರೆ. ಜನರಿಗೆ ವಿಷವನ್ನು ಉಣಿಸೋ ರಾಕ್ಷಸನಂತಿರುವ ಈ ಮನುಷ್ಯನತ್ರ ಹೊಸ ವರ್ಷಕ್ಕೆ ಕೇಕ್ ಸಿಗುತ್ತಾ ಅಂತಾ ಮಾತಾನಾಡಿಸಿದಾಗ, ನಮ್ಮಲ್ಲಿ ಫುಲ್ ಫ್ರೆಶ್ ಕೇಕ್ ಸಿಗೋದು, ಇಡೀ ಹೊಸ ವರ್ಷದ ಅಷ್ಟು ಆರ್ಡರ್ ತನಗೆ ಸಿಗುತ್ತೆ ಅನ್ನೋ ರೇಂಜಿಗೆ ಮಾತನಾಡಿದ್ದಾನೆ.
ಪ್ರತಿನಿಧಿ: ಇಲ್ಲೇ ರೆಡಿ ಮಾಡೋದಾ ಕೇಕ್?
ಬೇಕರಿ ಮಾಲೀಕ: ನಮ್ಮದು ಮೂರು ಅಂಗಡಿ ಇದೆ. ಕಂಟ್ಮೋನ್ಮೆಂಟ್‍ನಲ್ಲಿ ಇದೆ. ಇಲ್ಲೆ ಎರಡು ಇದೆ.
ಪ್ರತಿನಿಧಿ: ಇಲ್ಲೆ ರೆಡಿ ಮಾಡ್ತೀರಾ, ಈ ಸ್ಪಾಟ್‍ನಲ್ಲೇ?
ಬೇಕರಿ ಮಾಲೀಕ: ಹೌದು
ಪ್ರತಿನಿಧಿ: ಪ್ರೆಶ್ ಸಿಗುತ್ತಾ?
ಬೇಕರಿ ಮಾಲೀಕ: ಫ್ರೆಶ್ಶೆ ಸಿಗುತ್ತೆ. ನಮ್ಮಲ್ಲಿ ನ್ಯೂ ಇಯರ್‍ಗೆ , ಪ್ಲೇನ್ ಕೇಕ್ ಇದೆ. ಕ್ರೀಂ ಹಾಕ್ತೀವಿ.
ಪ್ರತಿನಿಧಿ: ಕೆಮಿಕಲ್ ಹಾಕ್ತೀರಾ ಲೈಟ್ ಆಗಿ?
ಬೇಕರಿಮಾಲೀಕ: ಕೆಮಿಕಲ್ ಯೂಸ್ ಮಾಡೇ ಮಾಡ್ತೀವಿ..
ಪ್ರತಿನಿಧಿ: ಕೆಮಿಕಲ್ ಬಳಸಿದ್ರೆ ಮಕ್ಕಳಿಗೆ ಕೊಟ್ರೆ ಪ್ರಾಬ್ಲಂ ಆಗಲ್ವಾ?
ಬೇಕರಿ ಮಾಲೀಕ: ಏನಿಲ್ಲ ಮಕ್ಕಳಿಗೆ ಏನು ಆಗಲ್ಲ. ಈ ಕ್ರೀಂ ಯ್ಯೂಸ್ ಮಾಡ್ತೀವಿ…ಸ್ವಲ್ಪ ತಿನ್ನಿ ಬೇಕಾದ್ರೆ.. ಹೀಗಂತ ಹೇಳಿ ಕಿತ್ತೋಗಿರೋ ಗಲೀಜು ಗ್ರೈಂಡರ್‍ಗೆ ತನ್ನ ಕೊಳಕು ಕೈ ಹಾಕಿ ಕ್ರೀಂ ತಂದು ತಿಂದು ನೋಡಿ ಅಂತಾ ಬೇರೆ ಹೇಳಿದ್ದಾನೆ. ಜೊತೆಗೆ ನಮ್ಮಲ್ಲಿ ಐಸ್ ಕ್ರೀಂ ಕೇಕ್ ಅಂತೆಲ್ಲ ವೆರೈಟಿ ಸಿಗುತ್ತೆ. ಕಲರ್‍ಗೆ ಯಾವ ಕೆಮಿಕಲ್ ಯೂಸ್ ಮಾಡ್ತೀರಾ ಅಂತಾ ಕೇಳಿದಾಗ ಆ ಡಬ್ಬನೂ ತೋರಿಸಿದ. ಅದ್ನ ನೋಡಿ ನಾವು ಫುಲ್ ಶಾಕ್ ಆದೆವು. ಆತ ಈ ಕೇಕ್‍ಗೆ ಹಾಕುವ ಲಿಕ್ವಿಡ್ ಕಲರ್ ಕೆಮಿಕಲ್ ಬಾಟಲ್ ಕೂಡ ಪಬ್ಲಿಕ್ ಟಿವಿಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಸಿಂಪಲ್ ಕೇಕ್ ರೆಸಿಪಿ
ಬಾಣಸವಾಡಿ ಬೇಕರಿ:
ಇದು ತೀರಾ ಸ್ಲಂ ಏರಿಯಾ ಅಲ್ವೇ ಅಲ್ಲ. ಹೈ-ಫೈ ಏರಿಯಾ, ಬೇಕರಿ ಕೂಡ ಹೊಚ್ಚ ಹೊಸದು. ಈ ಬೇಕರಿಯ ಹೊರಗಡೆ ಅದೇನು ನೀಟ್ ನೆಸ್. ಫಳ ಫಳ ಅಂತ ಹೊಳೆಯುವ ಗ್ಲಾಸ್. ಥಳ ಥಳ ಅಂತಾ ಕಣ್ಣಿಗೆ ರಾಚುವಂತೆ ಸ್ವಚ್ವವಿರುವ ಟೈಲ್ಸ್. ಹೊಚ್ಚ ಹೊಸ ಈ ಬೇಕರಿನಲ್ಲಿ ಕೇಕ್‍ನ್ನು ಹಾಯಾಗಿ ತಿನ್ನಬಹುದು ಬಿಡಿ ಅಂತಾ ಕಾನ್ಫಿಡೆನ್ಸ್ ಮೇಲೆನೇ ನಾವು ಹೆಂಗೋ ಕಿಚನ್‍ಗೆ ಎಂಟ್ರಿ ಪಡ್ಕೊಂಡ್ವಿ.
ಆದ್ರೆ ಹೊರಗಡೆ ನೋಡಿದ ಬ್ಯೂಟಿಫುಲ್ ಬೇಕರಿಯ ಕಲರ್ ಫುಲ್ ಡಿಸೈನ್ ಕೇಕ್ ತಯಾರೋಗೋದು ಕೊಳಕು ಸ್ಥಳದಲ್ಲಿ. ಹೊರಗಡೆ ಥಳಕು ಒಳಗಡೆ ಹುಳುಕು. ಕಸದ ರಾಶಿ, ಅಲ್ಲಲ್ಲಿ ಬಿದ್ದಿರೋ ಮೊಟ್ಟೆ ಸಿಪ್ಪೆ. ಕಪ್ಪು ಕಪ್ಪು ಹಿಟ್ಟು ನೆಲದ ಮೇಲೆ ಕಸದ ಜೊತೆ ಅಂಟಿ ಹೋಗಿದ್ರೂ ಅದರ ಮೇಲೆಯೇ ಕೇಕ್ ತಯಾರಿಸುವ ಬ್ರೆಡ್ ಹಾಕಲಾಗಿತ್ತು. ಇದನ್ನೂ ಓದಿ: ಸಿಂಪಲ್ ಚಾಕ್ಲೇಟ್ ಕೇಕ್
ಹನುಮಂತ ನಗರ:
ಬಳಿಕ ಹನುಮಂತ ನಗರದ ಬಳಿ ಇರುವ ಶ್ರೀ ಕೃಷ್ಣ ಬೇಕರಿಯತ್ತ ರಿಯಾಲಿಟಿ ಚೆಕ್‍ಗೆ ಇಳಿದ್ವಿ. ಈ ಏರಿಯಾದ ತೀರಾ ಡಿಮ್ಯಾಂಡ್‍ನಲ್ಲಿರುವ ಬೇಕರಿಯಿದು. ಇಲ್ಲಿನ ಸ್ವೀಟ್ಸ್, ಕೇಕ್ ಅಂದ್ರೆ ಜನ ಕಣ್ಣುಮುಚ್ಚಿ ದೇವ್ರ ಪ್ರಸಾದಂತೆ ತಿನ್ನುತ್ತಾರೆ. ಆದ್ರೆ ಈ ಬೇಕರಿಗೂ ಈ ಹಿಂದೆ ತೋರಿಸಿದ ಬೇಕರಿಗೂ ಯಾವುದೇ ವ್ಯತ್ಯಾಸ ಇರಲಿಲ್ಲ.
ಗೋರಿಪಾಳ್ಯ:
ಇದೊಂಥರ ತಿಪ್ಪೆಗುಂಡಿನೇ ಬಿಡಿ. ವರ್ಣನೆ ಬೇರೆ ಇಲ್ಲ. ಈ ಬೇಕರಿಯಲ್ಲಿ ಕೇಕ್‍ಗಿಂತ ಹೆಚ್ಚಾಗಿ ಕಣ್ಣಿಗೆ ರಾಚುವಂತೆ ಇದ್ದಿದ್ದು ಡೇಂಜರಸ್ ಕೆಮಿಕಲ್ ಬಾಟಲ್ಸ್. ಜೆಲ್, ಕ್ರೀಂ, ಚಾಕ್ಲೇಟ್ ಅಂತಾ ಇರೋ ಬರೋ ಕೆಮಿಕಲ್ ದ್ರಾವಣನಾ ಕೇಕ್ ಮೇಲೆ ಸಿಂಪರಣೆ ಮಾಡ್ತಾರೆ.
ಕೇಕ್‍ಗೆ ನಾನಾ ಪ್ಲೇವರ್ ಹಾಗೂ ಬಣ್ಣಗಳು ಬರೋದಕ್ಕೆ ಡೇಂಜರಸ್ ಕೆಮಿಕಲ್ ದ್ರಾವಣ ಬಳಸಲಾಗುತ್ತೆ. ಅದ್ರಲ್ಲೂ ಎಕ್ಸ್‍ಪೈರಿ ಡೇಟ್ ಮೀರಿದ ವಿಷಕಾರಿ ಕೆಮಿಕಲ್‍ಗಳ ಬಳಕೆಯನ್ನು ಕೂಡ ಮಾಡಲಾಗುತ್ತದೆ. ಅಶುಚಿತ್ವದ ಕೇಕ್ ವಿಷವಾಗೋದ್ರ ಜೊತೆಗೆ ಇಲ್ಲಿ ಬಳಸಲಾಗುವ ವಿಷಯುಕ್ತ ಕೆಮಿಕಲ್‍ನಿಂದ ಕ್ಯಾನ್ಸರ್, ಹೊಟ್ಟೆ ಹುಣ್ಣು, ಕರುಳಿನ ಬೇನೆ, ಹೃದಯ ಸಂಬಂಧಿ ಕಾಯಿಲೆಗಳು ಕೂಡ ಬರುವ ಸಾಧ್ಯತೆಗಳಿವೆ.
ಒಟ್ಟಿನಲ್ಲಿ ಹೊಸ ವರ್ಷದ ಆಚರಣೆ ಸಿಹಿಯಾಗಿರಲಿ, ಸವಿಯಾಗಿರಲಿ ಅಂತಾ ನಾವು ಕೇಕ್ ಕಟ್ ಮಾಡಿ ಅಚರಣೆ ಮಾಡೋಕೆ ರೆಡಿಯಾದ್ರೇ ಅದ್ರೊಳಗೆ ವಿಷದ ಬಾಂಬ್ ಅನ್ನೇ ಇಟ್ಟಿದ್ದಾರೆ ಅಂದ್ರೆ ತಪ್ಪಾಗಲಾರದು. ಹೀಗಾಗಿ ಸಿಕ್ಕ ಸಿಕ್ಕಲ್ಲಿ ಕೇಕ್ ಖರೀದಿಸಿ ಬಾಯಿ ಚಪ್ಪರಿಸಿಕೊಂಡು ತಿನ್ನುವ ಮೊದಲು ಎಚ್ಚರವಾಗಿರಿ.
https://www.youtube.com/watch?v=Re5e1teDMiQ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv