ಕೀವ್: ಯುದ್ಧ ಪೀಡಿತ ಉಕ್ರೇನ್‍ನಲ್ಲಿ ಸಿಲುಕಿರುವ ವಿದ್ಯಾರ್ಥಿ ತನ್ನ ಜೊತೆಗೆ ಇರುವ ಶ್ವಾನವನ್ನು ಬಿಟ್ಟು ಬರುವುದಿಲ್ಲ, ಸಹಾ ಮಾಡಿ ಎಂದು ಸೋಶಿಯಲ್ ಮೀಡಿಯಾ ಮೂಲಕವಾಗಿ ಮನವಿ ಮಾಡಿದ್ದಾರೆ.
Advertisement
ಪೂರ್ವ ಉಕ್ರೇನ್‍ನ ಖಾರ್ಕಿವ್ ನ್ಯಾಷನಲ್ ಯೂನಿವರ್ಸಿಟಿ ಆಫ್ ರೇಡಿಯೋ ಎಲೆಕ್ಟ್ರಾನಿಕ್ಸ್‌ನಲ್ಲಿ ಮೂರನೇ ವರ್ಷದ ಎಂಜಿನಿಯರಿಂಗ್ ಓದುತ್ತಿರುವ ರಿಷಭ್ ಕೌಶಿಕ್, ಕಳೆದ ಫೆಬ್ರವರಿಯಲ್ಲಿ ಖಾರ್ಕಿವ್‍ನಲ್ಲಿ ನಾಯಿಮರಿ ‘ಮಾಲಿಬು’ ಸಿಕ್ಕಿದೆ. ಅದು ನನ್ನ ಜೊತೆಗೆ ಇದೆ. ನಾನು ವಿಮಾನಯಾನ ಮಾಡುವಾಗ ತನ್ನ ನಾಯಿಯು ತನ್ನೊಂದಿಗೆ ಬರಲು ಎಲ್ಲಾ ದಾಖಲೆಗಳು ಮತ್ತು ಅನುಮತಿಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದೇನೆ ಎಂದು ಹೇಳಿಕೊಂಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಶುಭ ಭಾನುವಾರ, ಶುಭ ಗಳಿಗೆಯಲ್ಲಿ ಇಂದು ಪಾದಯಾತ್ರೆಗೆ ಚಾಲನೆ: ಡಿಕೆಶಿ
Advertisement
Advertisement
ನನ್ನ ಜೊತೆಗೆ ನಾಯಿಯನ್ನು ಕರೆದುಯಕೊಂಡು ಬರಲು ವಿಮಾನ ಟಿಕೆಟ್ ಕೇಳುತ್ತಿದ್ದಾರೆ. ಉಕ್ರೇನ್‍ನಲ್ಲಿ ನಾವು ಹೊರಗೆ ಹೋಗುವ ಪರಿಸ್ಥಿತಿ ಇಲ್ಲ. ವಿಮಾನ ನಿಲ್ಧಾಣವನ್ನು ಮುಚ್ಚಿದ್ದಾರೆ. ನಾನು ಹೇಗೆ ಟಿಕೆಟ್ ತೆಗೆದು ಕೊಳ್ಳಬೇಕು. ದೆಹಲಿಯಲ್ಲಿರುವ ಭಾರತೀಯ ಸರ್ಕಾರದ ಎನಿಮಲ್ ಕ್ವಾರಂಟೈನ್ ಮತ್ತು ಪ್ರಮಾಣೀಕರಣ ಸೇವೆ (ಎಕ್ಯೂಸಿಎಸ್) ಮತ್ತು ಉಕ್ರೇನ್‍ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿದೆ. ಆದರೆ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಹೇಳುತ್ತಾ ಬೇಸರ ವ್ಯಕ್ತಪಡಿಸಿದ್ದಾರೆ.
Advertisement
ಕಾನೂನುಗಳ ಪ್ರಕಾರ ಭಾರತ ಸರ್ಕಾರವು ನನಗೆ ಅಗತ್ಯವಿರುವ ಎನ್‍ಒಸಿ (ನಿರಾಕ್ಷೇಪಣೆ ಪ್ರಮಾಣಪತ್ರ) ನೀಡಿದ್ದರೆ ನಾನು ಈಗ ಭಾರತದಲ್ಲಿರುತ್ತಿದ್ದೆನು. ರಷ್ಯಾದ ಪಡೆಗಳು ಗುಂಡಿನ ದಾಳಿ ಮಾಡಿದಾಗ, ಸೈರನ್‍ಗಳು ಮತ್ತು ಬಾಂಬ್‍ಗಳ ಶಬ್ದ ಕೇಳಿದ ಕೂಡಲೆ ನಾವು ನಾವು ಬಂಕರ್‌ನಲ್ಲಿ ಅಡಗಿ ಕುಳಿತ್ತಿದ್ದೇವೆ. ನಾಯಿ ಬಾಂಬ್ ಶಬ್ಧ ಕೇಳಿದರೆ ಅಳುತ್ತದೆ. ನೆಲದಡಿಯಲ್ಲಿ ನಾವು ಪ್ರೀಜ್ ಆಗುತ್ತಿದ್ದೇವೆ. ನಾಯಿ ಬೆಚ್ಚಗಾಗಲು ಬಂಕರ್‍ನಿಂದ ಮೇಲಕ್ಕೆ ಬರಬೇಕಾದ ಪರಿಸ್ಥಿತಿ ನಿರ್ಮಾಣ ವಾಗುತ್ತಿದೆ ಎಂದು ಅಲ್ಲಿನ ಪರಿಸ್ಥಿತಿಯನ್ನು ವರ್ಣಿಸಿದ್ದಾರೆ.