ವಿಜಯಪುರ: ನಗರದ ಜನತೆ ಮುಖ್ಯಮಂತ್ರಿಗಳು ಬರುವ ರಸ್ತೆಯಲ್ಲಿ ನೀರು ಕೊಡಿ, ಬದುಕಲು ಬಿಡಿ, ಬೇಕೇ ಬೇಕು ಎಂದು ವಿನೂತನ ಪ್ರತಿಭಟನೆ ನಡೆಸುವ ಮೂಲಕ ಸಿಎಂ ಸಿದ್ದರಾಮಯ್ಯನವರನ್ನು ಸ್ವಾಗತಿಸಿದ್ದಾರೆ
Advertisement
ಇಂದು ಸಿದ್ದರಾಮಯ್ಯ ಅವರು ಶಾಸಕ ರಾಜು ಆಲಗೂರು ಪುತ್ರಿಯ ವಿವಾಹಕ್ಕೆ ನಗರಕ್ಕೆ ಆಗಮಿಸಿದ್ದರು. ಈ ವೇಳೆ ನಗರದ ಜೋರಾಪೂರ ಪೇಟೆಯಿಂದ ಬಿಎಲ್‍ಡಿಇ ಸಂಸ್ಥೆಯವರೆಗಿನ ಮಧ್ಯದ ರಸ್ತೆಯಲ್ಲಿ ನೀರು ಕೊಡಿ ಎಂದು ಬರೆಯಲಾಗಿತ್ತು. ಕರ್ನಾಟಕ ಪಬ್ಲಿಕ್ ಪವರ್ ಸಂಘಟನೆಯ ಅವರಿಂದ ಸಿಎಂ ಗಮನ ಸೆಳೆಯಲು ವಿನೂತನ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
Advertisement
Advertisement
ಹುಬ್ಬಳ್ಳಿಯಿಂದ ಹೆಲಿಕಾಪ್ಟರ್ ಮೂಲಕ ವಿಜಯಪುರ ನಗರಕ್ಕೆ ಆಗಮಿಸಿ, ಅಲ್ಲಿಂದ ನೇರವಾಗಿ ಶಾಸಕ ರಾಜ ಆಲಗೂರು ಮಗಳ ಮದುವೆಗೆ ತೆರಳಿ, ವಧು-ವರರಿಗೆ ಆಶೀರ್ವದಿಸಿದರು. ಈ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಜಮೀರ್ ಅಹ್ಮದ್ ಅವರಿಗೆ ಕಾಂಗ್ರೆಸ್‍ನಿಂದ ಟಿಕೆಟ್ ಕೊಡುವ ಕುರಿತಾಗಿ, ಅವರು ಮೊದಲು ಪಕ್ಷಕ್ಕೆ ಬರಲಿ ಆಮೇಲೆ ನೋಡೋಣ ಎಂದು ಸಿಎಂ ಹೇಳಿದರು.
Advertisement
ತಪ್ಪಿದ ದುರಂತ: ಮುಖ್ಯಮಂತ್ರಿಗಳು ಹೆಲಿಪ್ಯಾಡ್‍ಗೆ ಬಂದು ಪೊಲೀಸರಿಂದ ಗೌರವ ವಂದನೆ ಸ್ವೀಕರಿಸುವ ವೇಳೆ ಪಕ್ಕದಲ್ಲಿಯೇ ಬೆಂಕಿ ಕಾಣಿಸಿಕೊಂಡಿತ್ತು. ಕೂಡಲೇ ಸ್ಥಳದಲ್ಲಿದ್ದ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದರು. ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿಗಳು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‍ಗೆ ಹದ್ದು ಡಿಕ್ಕಿ ಹೊಡೆದಿತ್ತು.
ಉಪಚುನಾವಣೆ ಸೋಲಿನ ಬಳಿಕ ಬಿಜೆಪಿ ಅವ್ರು ಹತಾಷರಾಗಿದ್ದಾರೆ. ಬಿಜೆಪಿ ಅವ್ರಿಗೆ ಬರ ಎಂದ್ರೆ ಗೊತ್ತಿಲ್ಲ. ಕಾರ್ಯಕಾರಣಿ ಸಭೆ ಎಷ್ಟು ನೀರಸ ಆಗಿತ್ತು ಎಂಬುದನ್ನು ರಾಜ್ಯದ ಜನ ನೋಡ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಸ್ಥಾನಕ್ಕಾಗಿ ಯಾವಾಗಲೂ ಸ್ಪರ್ಧೆಯಿಲ್ಲ ಎಂದು ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.