ದುಬೈ: ಟೀಂ ಇಂಡಿಯಾ ಆಟಗಾರ ಅರ್ಶ್‌ದೀಪ್ ಸಿಂಗ್ ಅವರನ್ನು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಬೆಂಬಲಿಸಿದ್ದಾರೆ.
My request to all Indian team fans. In sports we make mistakes as we r human. Please don’t humiliate anyone on these mistakes. @arshdeepsinghh
— Mohammad Hafeez (@MHafeez22) September 4, 2022
Advertisement
ಏಷ್ಯಾಕಪ್‌ನ ಸೂಪರ್ ಫೋರ್ ಲೀಗ್ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ಭಾನುವಾರ ಹಣಾಹಣಿ ನಡೆಯಿತು. ಈ ಪಂದ್ಯದ 18ನೇ ಓವರ್‌ನಲ್ಲಿ ಎಡಗೈ ವೇಗಿ ಬೌಲರ್ ಅರ್ಶ್‌ದೀಪ್ ಸಿಂಗ್ ಒತ್ತಡದ ಸಮಯದಲ್ಲಿ ಸುಲಭ ಕ್ಯಾಚ್ ಅನ್ನು ಕೈಚೆಲ್ಲಿದರು.
Advertisement
Advertisement
ಇದರಿಂದ ಭಾರೀ ಟಿಕೆಗಳು ವ್ಯಕ್ತವಾಯಿತು. ಅಲ್ಲದೇ ಅರ್ಶ್‌ದೀಪ್ ಅವರ ಪುಟದಲ್ಲಿ ಖಲಿಸ್ತಾನ ಆಟಗಾರ ಎಂದು ಎಡಿಟ್ ಮಾಡಲಾಗಿತ್ತು. ಇದರಿಂದ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಚರ್ಚೆ ಆಗುತ್ತಿದ್ದಂತೆ ಮಾಹಿತಿ ಮತ್ತು ತಂತ್ರಜ್ಞಾನ ಖಾತೆಯ ಸಚಿವಾಲಯ ವಿಕಿಪೀಡಿಯಾದ ಭಾರತದ ಪ್ರತಿನಿಧಿಗೆ ಸಮನ್ಸ್ ಜಾರಿ ಮಾಡಿತ್ತು. ಇದನ್ನೂ ಓದಿ: ಸುಷ್ಮಿತಾ ಸೇನ್ ಜೊತೆ ಬ್ರೇಕ್ ಅಪ್ ಘೋಷಿಸಿಕೊಂಡ ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ
Advertisement
ಅನೇಕ ಕಡೆ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ಭಾರತೀಯ ಹಿರಿಯ ಹಾಗೂ ಮಾಜಿ ಕ್ರಿಕೆಟಿಗರು ಅರ್ಶ್‌ದೀಪ್ ಸಿಂಗ್ ಬೆಂಬಲಕ್ಕೆ ನಿಂತರು. ಈ ಬೆನ್ನಲ್ಲೇ ಇಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಸಹ ಅರ್ಶ್‌ದೀಪ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅವರನ್ನು ಅವಮಾನಿಸದಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ರಿಷಭ್ ಪಂತ್‌ನ ಆ ಆಟ ಅಗತ್ಯವಿರಲಿಲ್ಲ – ಗೌತಮ್ ಗಂಭೀರ್ ಅಸಮಾಧಾನ
ಈ ಕುರಿತು ಟ್ವೀಟ್ ಮಾಡಿರುವ ಮೊಹಮ್ಮದ್ ಹಫೀಜ್, ಎಲ್ಲಾ ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳಿಗೆ ನನ್ನ ವಿನಂತಿ ಏನೆಂದರೆ ನಾವು ಕ್ರೀಡೆಯಲ್ಲಿ ಮನುಷ್ಯರಾಗಿ ಸಹಜ ತಪ್ಪುಗಳನ್ನು ಮಾಡುತ್ತೇವೆ. ಆದರೆ ದಯವಿಟ್ಟು ಈ ತಪ್ಪುಗಳಿಂದ ಯಾರನ್ನೂ ಅವಮಾನಿಸಬೇಡಿ ಎಂದು ಮನವಿ ಮಾಡಿದ್ದಾರೆ.