ಬೆಂಗಳೂರು: ಆನ್‍ಲೈನ್ ನಲ್ಲಿ ಕಡಿಮೆ ಬೆಲೆಗೆ ಕಾರು ಸಿಗುತ್ತದೆ ಎಂದು ಬುಕ್ ಮಾಡುವ ಮೊದಲು ಎಚ್ಚರವಾಗಿರಿ. ಯಾಕಂದ್ರೆ ಕಡಿಮೆ ಬೆಲೆಗೆ ಕಾರು ಸಿಗುತ್ತದೆ ಅಂತ ಬುಕ್ ಮಾಡಿದ್ದ ವ್ಯಕ್ತಿಯೊಬ್ಬರು ಮೋಸಹೋಗಿದ್ದಾರೆ.
ಬೆಂಗಳೂರು ನಿವಾಸಿ ನವೀನ್ ವಂಚನೆಗೆ ಒಳಗಾದ ವ್ಯಕ್ತಿ. ಇವರು ಕಳೆದ ತಿಂಗಳ 17 ರಂದು ಓಎಲ್ ಎಕ್ಸ್ ನಲ್ಲಿ ಶಾಪಿಂಗ್ ಮಾಡಲು ಮುಂದಾಗಿದ್ದಾರೆ. ಈ ವೇಳೆ ಕಡಿಮೆ ಬೆಲೆಗೆ ಇನ್ನೋವಾ ಕಾರು ಸಿಕ್ಕಿದೆ. ಓಎಲ್ ಎಕ್ಸ್ ನಲ್ಲಿದ್ದ ನಂಬರಿಗೆ ಕರೆ ಮಾಡಿದಾಗ ಅಪರಿಚಿತ ವ್ಯಕ್ತಿ 2.70 ಲಕ್ಷ ರೂಪಾಯಿಗೆ ಕಾರು ನೀಡುವುದಾಗಿ ತಿಳಿಸಿದ್ದಾನೆ. ನಂತರ ಕಾರ್ ಫೋಟೋ ಕಳುಹಿಸಿ ಬ್ಯಾಂಕ್ ಅಕೌಂಟ್ ನಂಬರ್ ಕಳುಹಿಸಿ ಹಣ ಹಾಕುವಂತೆ ತಿಳಿಸಿದ್ದಾನೆ.
ನಾನು ಆತ ಕಳುಹಿಸಿದ್ದ ಅಕೌಂಟ್ ನಂಬರಿಗೆ ಹಣ ಹಾಕಿದೆ. ಬಳಿಕ ಆತನಿಗೆ ಫೋನ್ ಮಾಡಿದೆ. ಆದರೆ ಆತನ ನಂಬರ್ ಸ್ವಿಚ್ ಆಫ್ ಬರುತ್ತಿತ್ತು. ಅಕೌಂಟ್ ನಂಬರ್ ಚೆಕ್ ಮಾಡಿದರೆ ಅಸ್ಸಾಂ ರಾಜ್ಯದ ಬ್ಯಾಂಕ್ ಖಾತೆಯೊಂದನ್ನು ತೋರಿಸುತ್ತಿದೆ ಎಂದು ನವೀನ್ ಹೇಳಿದ್ದಾರೆ.
ಈಗ ಮೋಸ ಹೋಗಿರುವ ನವೀನ್, ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ. ಯಾರು ಈ ರೀತಿ ಮೋಸ ಹೋಗಬೇಡಿ. ಎಷ್ಟೇ ಜಾಗೃತಿ ಮೂಡಿಸಿದರು ಆನ್ ಲೈನ್ ದೋಖಾ ಪ್ರಕರಣಗಳು ಹೆಚ್ಚಾಗುತ್ತಿದೆ. ಈ ಬಗ್ಗೆ ಸೈಬರ್ ಕ್ರೈಂ ಪೊಲೀಸರು ಆರೋಪಿಗಳನ್ನ ಪತ್ತೆಹಚ್ಚಿ ಸರಿಯಾದ ಕ್ರಮ ಜರುಗಿಸಿ ಅಂತ ನವೀನ್ ಮನವಿ ಮಾಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews